ಉಬಾರ್ ಕಂಬಳೋತ್ಸವ : 39ನೇ ವರ್ಷದ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಅದ್ದೂರಿಯಾಗಿ ನಡೆಯಿತು. "ಉಬಾರ್ ಕಂಬಳ" ಎಂದೇ ಜನಪ್ರಿಯ ಕಂಬಳ ಕೂಟ 22ನೇ ಮಾರ್ಚ್ ಬೆಳಗ್ಗೆ ಉದ್ಘಾಟನೆಗೊಂಡು, ರವಿವಾರ ಮಧ್ಯಾಹ್ನ ಮುಕ್ತಾಯಗೊಂಡಿತ್ತು.
ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಉಬಾರ್ ಕಂಬಳೋತ್ಸವ ಸಂದರ್ಭದಲ್ಲಿ, ಸಸ್ಯ ಮೇಳ, ಆಹಾರ ಮೇಳ, ಕೃಷಿ ಯಂತ್ರೋಪಕರಣಗಳ ಮೇಳ, ಬೋಟಿಂಗ್ ಸೇರಿದಂತೆ ಮೂರು ದಿನಗಳ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಕಂಬಳೋತ್ಸವಕ್ಕೆ ಮೆರುಗು ನೀಡುತ್ತದೆ.
ನೇತ್ರಾವತಿ ನದಿ ಕಿನಾರೆಯೆಲ್ಲಿ ನಡೆಯುವ ಉಪ್ಪಿನಂಗಡಿ ಕಂಬಳಕ್ಕೆ ಗಣ್ಯಾತಿಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ನಂದಳಿಕೆ ಶ್ರೀಕಾಂತ್ ಭಟ್ಟರ 'ಸಿ' ಮತ್ತು 'ಎ' ಕೋಣಗಳಿಗೆ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ ಪಡೆದಿದ್ದು, ಅವರ 17 ವರ್ಷದ ಚಾಂಪಿಯನ್ ಕುಟ್ಟಿ ಕೋಣ ತನ್ನ ಮುಂದಿನ ಕಂಬಳ ಓಟಕ್ಕೆ ವಿದಾಯ ಹಾಡಿತು.
39ನೇ ವರ್ಷದ ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳದ ಫಲಿತಾಂಶ ಈ ರೀತಿ ಇದೆ,
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆ ಹಲಗೆ: 07 ಜೊತೆ
ಅಡ್ಡಹಲಗೆ: 04 ಜೊತೆ
ಹಗ್ಗ ಹಿರಿಯ: 10 ಜೊತೆ
ನೇಗಿಲು ಹಿರಿಯ: 23 ಜೊತೆ
ಹಗ್ಗ ಕಿರಿಯ: 15 ಜೊತೆ
ನೇಗಿಲು ಕಿರಿಯ: 72 ಜೊತೆ
ಒಟ್ಟು ಕೋಣಗಳ ಸಂಖ್ಯೆ: 131 ಜೊತೆ
ಕನೆ ಹಲಗೆ:
(7.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ದ್ವಿತೀಯ: ನಿಡ್ಡೋಡಿ ಕಾನ ರಾಮ ಸುವರ್ಣ
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ
ಅಡ್ಡ ಹಲಗೆ:
ಪ್ರಥಮ: ನಾರಾವಿ ಯುವರಾಜ್ ಜೈನ್ (11.68)
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ (12.41)
ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್
ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಸಿ" (11.52)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಎ"
ಓಡಿಸಿದವರು: ರೆಂಜಾಳ ಪಂಜಾಳ ಸಂದೇಶ್ ಶೆಟ್ಟಿ
ಹಗ್ಗ ಕಿರಿಯ:
ಪ್ರಥಮ: ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ "ಬಿ" (11.52)
ಓಡಿಸಿದವರು: ಬಾರಾಡಿ ನತೀಶ್
ದ್ವಿತೀಯ: 80 ಬಡಗು ಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ "ಬಿ" (11.98)
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ನೇಗಿಲು ಹಿರಿಯ:
ಪ್ರಥಮ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ (11.37)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ಬೋಳದ ಗುತ್ತು ಸತೀಶ್ ಶೆಟ್ಟಿ "ಬಿ" (11.92)
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ನೇಗಿಲು ಕಿರಿಯ:
ಪ್ರಥಮ: ಮಿಜಾರ್ ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ "ಎ" (11.80)
ಓಡಿಸಿದವರು: ಪಟ್ಟೆ ಗುರುಚರಣ್
ದ್ವಿತೀಯ: ಮಿಜಾರ್ ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ "ಬಿ" (11.49)
ಓಡಿಸಿದವರು: ಪಟ್ಟೆ ಗುರುಚರಣ್