ಆರ್ ಸಿ ಬಿ vs ಚೆನ್ನೈ : ನಡೆಯಲಿದೆ ಇಂದು ಚೇಪಾಕ್ನಲ್ಲಿ ರೋಮಾಂಚಕ ಸ್ಪಿನ್ ಯುದ್ಧ!

  • 28 Mar 2025 01:17:19 PM

IPL 2025 : ಇಂದು ನಡೆಯಲಿದೆ ಆರ್ ಸಿ ಬಿ ಮತ್ತು ಚೆನ್ನೈ ತಂಡಗಳ ನಡುವೆ ಮುಖಾಮುಖಿ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಎರಡು ತಂಡಗಳ ಬ್ಯಾಟಿಂಗ್ ಮತ್ತು ಬೌಲಿಂಗ್ ಅಬ್ಬರ ಕಾಣಸಿಗಲಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

 

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದ ಟ್ರ್ಯಾಕ್ ಸಾಮಾನ್ಯವಾಗಿ ವೇಗಿಗಳಿಗಿಂತ ಸ್ಪಿನ್ನರ್‌ಗಳಿಗೆ ಆದ್ಯತೆ ನೀಡುತ್ತದೆ. ಈ ಗ್ರೌಂಡ್ ನಲ್ಲಿ ಸಾಮಾನ್ಯವಾಗಿ ಕಡಿಮೆ ಸ್ಕೋರ್ ನ ಮ್ಯಾಚ್ ಗಳು ಕಾಣಸಿಗುತ್ತದೆ.

 

ಸಾಮಾನ್ಯವಾಗಿ ಮೊದಲು ಬೌಲಿಂಗ್ ಮಾಡುವ ತಂಡ ಎದುರಾಳಿಯನ್ನು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿ ನಂತರ ಅದನ್ನು ಬೆನ್ನಟ್ಟುವ ಕೆಲಸ ಮಾಡುತ್ತವೆ.

 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಕೋಲ್ಕತ ನೈಟ್ ರೈಡರ್ಸ್ ಜೊತೆಗಿನ ಪಂದ್ಯದಲ್ಲಿ ಕೊಲ್ಕತ್ತಾ ತಂಡವನ್ನು ಸೋಲಿಸಿ ತುಂಬಾ ಉತ್ಸಾಹದಲ್ಲಿದೆ. ಎದುರಾಳಿ ಚೆನ್ನೈ ಕೂಡ ಮುಂಬೈ ತಂಡದ ವಿರುದ್ಧ ಜಯಗಳಿಸಿ ಉತ್ತಮ ಸ್ಥಿತಿಯಲ್ಲಿದೆ.

 

ಎರಡು ತಂಡಗಳು ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಬಲಿಷ್ಠವಾಗಿದ್ದು, ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ರೋಮಾಂಚನಕಾರಿಯಾಗಲಿದೆ.

 

ಚೆನ್ನೈ ಪಿಚ್ ಸ್ಪಿನ್ ಬೌಲರ್ ಗಳಿಗೆ ಸೂಕ್ತವಾಗಿರುವದರಿಂದ ಚೆನ್ನೈ ತಂಡದಲ್ಲಿ ಅಶ್ವಿನ್ ಪುನರಾಗಮನ ಚೆನ್ನೈ ತಂಡದ ಸ್ಪಿನ್ ವಿಭಾಗವು ಮತ್ತಷ್ಟು ಬಲಿಷ್ಠಗೊಳಿಸಿದೆ. ರವೀಂದ್ರ ಜಡೇಜ ಹಾಗೂ ಅಫ್ಘಾನಿಸ್ತಾನದ ಭರವಸೆಯ ಸ್ಪಿನ್ನರ್ ನೂರ್ ಅಹ್ಮದ್ ಮತ್ತಷ್ಟು ಸ್ಪಿನ್ ದಾಳಿಗೆ ಸಹಕಾರಿಯಾಗಲಿದೆ.

 

ರಜತ್ ಪಾಟಿದಾರ್ ನೇತೃತ್ವದ ಆರ್ ಸಿ ಬಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ ಅವರಿದ್ದು, ಸಿ ಎಸ್ ಕೆ ತಂಡದ ಸ್ಪಿನ್ ಭೀತಿಯನ್ನು ಎದುರಿಸಲು ಅಮೋಘ ಕೌಶಲ್ಯ ಪ್ರದರ್ಶಿಸಬೇಕಾಗಿದೆ.