ಕಂಬಳ 2025 : ದಿನದಿಂದ ದಿನಕ್ಕೆ ಕಂಬಳ ಪ್ರಸಿದ್ಧಿಗೊಳ್ಳುತ್ತಿದೆ. ಕರ್ನಾಟಕ ಕರಾವಳಿ ಭಾಗದ ಪ್ರಸಿದ್ಧ ಜಾನಪದ ಕ್ರೀಡೆಗಳಲ್ಲಿ ಒಂದಾದ ಕಂಬಳ ಈಗ ದೇಶ ವಿದೇಶಗಳಲ್ಲಿ ಬಹಳ ಪ್ರಚಾರವನ್ನು ಪಡೆಯುತ್ತಿದೆ. ಇದಕ್ಕೆ ಮಾದರಿಯಂತೆ, ಒಬ್ಬ ಕಂಬಳದ ಅಭಿಮಾನಿ ಮತ್ತು ಸೋಶಿಯಲ್ ಮೀಡಿಯಾಲ್ ಗಳಲ್ಲಿ ರೀಲ್ಸ್ ಮಾಡುವ ವ್ಯಕ್ತಿ ಹಾಕಿದ ಕಂಬಳದ ಒಂಟಿ ಕೋಣವನ್ನು ಓಡಿಸುವ ವಿಡಿಯೋಗೆ ಸಿಕ್ಕಿದ ಸ್ಪಂದನೆ.
ಹೌದು, ಪುತ್ತೂರಿನ ಕುತ್ಲೂರು ಸಂದೀಪ್ ಎಂಬವರು ಎರಡು ವರ್ಷದ ಹಿಂದೆ ಒಂಟಿ ಕೋಣದ ಓಟದ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು, ಆ ರೀಲ್ಸ್ 4 ಕೋಟಿ, 47 ಲಕ್ಷ ವೀಕ್ಷಣೆ ಪಡೆದಿದ್ದು ಕಂಬಳ ಅಭಿಮಾನಿ ಮತ್ತು ಕಂಬಳದಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಗಳಿಗೆ ಸಂತಸ ಮತ್ತು ಅಚ್ಚರಿಯ ವಿಷಯವಾಗಿದೆ.
ವಿಜಯಕುಮಾರ್ ಕಂಗಿನಮನೆ ವೇಣೂರಿನ ಕಂಬಳದ ಪ್ರಧಾನ ತೀರ್ಪುಗಾರರಾಗಿ, ಕಂಬಳದ ಬಗ್ಗೆ ನಿರೂಪಣೆ ಮಾಡುವ ಸಂದರ್ಭದಲ್ಲಿ ಮಾತನಾಡಿ, "ಮಿಯಾರಿನ ಕಂಬಳದ ಸಂದರ್ಭದಲ್ಲಿ ಒಂಟಿ ಕೋಣ ಓಡಿಸುವ ರೀಲ್ಸ್ ಬಿಟ್ಟಿದ್ದು, ದಾಖಲೆಯ 4 ಕೋಟಿ, 4 ಲಕ್ಷ ವೀಕ್ಷಣೆಯಾಗಿದ್ದು, ಕಂಬಳಕ್ಕೂ ಹೆಸರು ಬಂದಿದೆ ಮತ್ತು ಸಂದೀಪ್ ರವರ ಪ್ರಯತ್ನಕ್ಕೂ ಖುಷಿ ತಂದಿದೆ. ಎಲ್ಲರೂ ಚಪ್ಪಾಳೆ ತಟ್ಟಿ ಸನ್ಮಾನಿಸಬೇಕು". ಎಂದು ಹೇಳುವುದರ ಮೂಲಕ ಶ್ಲಾಘನೀಯ ಮಾತುಗಳನ್ನು ಆಡಿದರು.