ಧೋನಿ ಬ್ಯಾಟ್ ಹಿಂದಿಡುಕೊಂಡು 10 ಓವರ್ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ - ಅಚ್ಚರಿ ಸಂಗತಿ ಬಿಚ್ಚಿಟ್ಟ CSK ಕೋಚ್ ಸ್ಟೀಫನ್ ಫ್ಲೆಮಿಂಗ್

  • 31 Mar 2025 04:41:34 PM

IPL 2025 : ಚೆನೈ ಸೂಪರ್ ಕಿಂಗ್ ಕೋಚ್ ಆಗಿರುವ ಸ್ಟೀಫನ್ ಫ್ಲೆಮಿಂಗ್, ಮಹೇಂದ್ರ ಸಿಂಗ್ ಧೋನಿ ಗ್ರೌಂಡ್ ನಲ್ಲಿ ಬ್ಯಾಟ್ ಹಿಡಿದು ಹೆಚ್ಚು ಹೊತ್ತು ಬ್ಯಾಟ್ ಮಾಡಲು ಸಾಧ್ಯವಿಲ್ಲ ಎನ್ನುವ ಸಂಗತಿಯನ್ನು ಹೊರಹಾಕಿದ್ದಾರೆ. ಧೋನಿ ಒಬ್ಬ ಒಳ್ಳೆಯ ನಾಯಕ ಮತ್ತು ವಿಕೆಟ್ ಕೀಪರ್, ಆದರೆ ದೀರ್ಘ ಕಾಲದ ಬ್ಯಾಟಿಂಗ್ ಮಾಡಲು ಕಷ್ಟ ಎಂದಿದ್ದಾರೆ.

 

ಪಂದ್ಯದ ಪರಿಸ್ಥಿತಿ ಅವಲಂಬಿಸಿ, ಧೋನಿ 13-14 ಓವರ್ ಗಳ ನಂತರ ಬ್ಯಾಟಿಂಗ್ ಮಾಡಲು ಸೂಕ್ತರಾಗಿದ್ದರೆ. ಅವರ ಮೊದಲ ಆದ್ಯತೆ ತಂಡವನ್ನು ನಡೆಸುವುದಾಗಿದೆ ಎಂದು ತಿಳಿಸಿದ್ದಾರೆ. ಚೆನ್ನೈನ ರಾಜಸ್ತಾನ ತಂಡದ ವಿರುದ್ಧ 6 ರನ್ನಿನ ಸೋಲಿನ ನಂತರ ಕೋಚ್ ಸ್ಟೀಫನ್ ಫ್ಲೆಮಿಂಗ್ ಈ ವಿಷಯವನ್ನು ವ್ಯಕ್ತಪಡಿಸಿದ್ದಾರೆ.

 

ಧೋನಿ ಈ ಋತುವಿನಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಕಳೆದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಶ್ಯಕತೆ ಬಂದಿತ್ತು. ಆದರೆ ಅವರ ಆರೋಗ್ಯದ ಸಮಸ್ಯೆಯಿಂದ ಹೆಚ್ಚು ಸಮಯಗಳ ಕಾಲ ಪಿಚ್ ನಲ್ಲಿ ಬ್ಯಾಟ್ ಹಿಡಿದು ನಿಲ್ಲಲು ಸಾಧ್ಯವಿಲ್ಲ.

 

ಯಾವ ಅರೋಗ್ಯ ಸಮಸ್ಯೆ ಧೋನಿಗೆ ಕಾಡುತ್ತಿದೆ!

ಹೌದು, ಸ್ಟೀಫನ್ ಫ್ಲೆಮಿಂಗ್ ಮಾಧ್ಯಮಗಳಿಗೆ ತಿಳಿಸಿದ ಪ್ರಕಾರ, ಧೋನಿಗೆ ಮೊಣಕಾಲು ನೋವಿನ ಸಮಸ್ಯೆ ಇರುವುದರಿಂದ ತುಂಬಾ ಸಮಯ ಗ್ರೌಂಡ್ ನಲ್ಲಿ ಬ್ಯಾಟ್ ಹಿಡಿದು ನಿಲ್ಲಲು ಸಾಧ್ಯವಿಲ್ಲ ಎಂದು ಪ್ರಕಟಿಸಿದ್ದಾರೆ. ಒಂದು ವೇಳೆ ಪರಿಸ್ಥಿತಿಗೆ ಅನುಗುಣವಾಗಿ ಆರಂಭಿಕ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗಿ ಬಂದರೆ, ನಾವು ಇದರ ಬಗ್ಗೆ ಯೋಚಿಸಿ, ಅವರನ್ನು 9ನೇ ಆರ್ಡರ್ ಗಿಂತ ಮೊದಲೇ ಬ್ಯಾಟಿಂಗ್ ಗೆ ಕಳಿಸಲು ತಂಡ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.

 

ಧೋನಿ ಭಾರತ ಕ್ರಿಕೆಟ್ ತಂಡದ ಅತೀ ಯಶಸ್ವೀ ನಾಯಕ ಎಂಬ ಹೆಗ್ಗಳಿಕೆ ಪಡೆದವರು. ತನ್ನ ಚಾಕಚಕ್ಯತೆ ಮತ್ತು ಉಪಾಯಗಳಿಂದ ಹಲವಾರು ಭಾರಿ ತಂಡಕ್ಕೆ ಜಯವನ್ನು ಗಳಿಸಿ ಕೊಟ್ಟವರು. ಆದ್ದರಿಂದ, ಅವರ ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಬಹಳ ಚೆನ್ನೈ ತಂಡಕ್ಕೆ ಬಹಳ ಮುಖ್ಯ ಪಾತ್ರವಹಿಸಲಿದೆ. ಚೆನ್ನೈ ತಂಡ 2025 ರಲ್ಲಿ 2 ಸೋಲು ಮತ್ತು 1 ವಿಜಯ ದೊರೆಕಿದೆ.