IPL 2025 : ಬೆಂಗಳೂರು ರಾಯಲ್ಸ್ ಗೆ ಇದು ಮೂರನೇ ಆಟ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಪಂದ್ಯ. ಜನರ ನಿರೀಕ್ಷೆ ಒಂದಾಗಿತ್ತು, ಆದರೆ ಫಲಿತಾಂಶ ಮಾತ್ರ ಬೇರೇನೇ ಆಗಿತ್ತು. ಗುಜರಾತ್ ಟೈಟಾನ್ಸ್, ಬೆಂಗಳೂರು ರಾಯಲ್ಸ್ ನ್ನು ಸಂಪೂರ್ಣವಾಗಿ ಕೈ ಕಟ್ಟಿ ಹಾಕಿತ್ತು.
ಹೌದು, ಗುಜರಾತ್ ಟೈಟಾನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿತ್ತು. ಟಾಸ್ ಸೋತ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡಿ ಭರ್ಜರಿ ವಿಕೆಟ್ ನೀಡುವ ಮೂಲಕ ಗುಜರಾತ್ ತಂಡಕ್ಕೆ ಮತ್ತಷ್ಟು ಹುರಿದುಂಬಿಸಿತ್ತು. ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡಿ ಸಿಕ್ಸರ್ ಗಳ ಸುರಿಮಳೆ ಬರಲಿದೆ ಎಂದು ಕನಸು ಕಾಣುತ್ತಿದ್ದ ಅಭಿಮಾನಿಗಳಿಗೆ ವಿಕೆಟ್ ಬೀಳುವ ಸುರಿಮಳೆ ಕಾಣಲು ಸಿಗುತಿತ್ತು .
ಮೊಹಮ್ಮದ್ ಸಿರಾಜ್ ಭರ್ಜರಿ ಬೌಲಿಂಗ್
ಮೊಹಮ್ಮದ್ ಸಿರಾಜ್ 4 ಓವರ್ ಗಳಲ್ಲಿ ಕೇವಲ 19 ರನ್ ನೀಡಿ 3 ವಿಕೆಟ್ ಉರುಳಿಸಿದರು. ಸಿರಾಜ್ ನ ಮೊದಲ ಓವರ್ ನಲ್ಲಿ ದೇವದತ್ ಪಡಿಕ್ಕಲ್ ರನ್ನು ಬ್ಯಾಟಿಂಗ್ ಪಿಚ್ ನಿಂದ ಹೊರ ಕಳಿಸಿದರು. ಆಮೇಲೆ ತನ್ನ ಬೌಲಿಂಗ್ ಸಾಮರ್ಥ್ಯವನ್ನು ಮತ್ತಷ್ಟು ಬಲಿಷ್ಠ ಮಾಡಿ ಬೆಂಗಳೂರು ತಂಡದ ಮತ್ತೆರಡು ವಿಕೆಟ್ ಪಡೆದು ಸಂಭ್ರಮಿಸಿದರು.
ಸಿರಾಜ್ ಸೇಡು
ಬೆಂಗಳೂರು ತಂಡದಿಂದ ಹೊರಕ್ಕೆ ಇಟ್ಟರೂ, ತಾನು ಬೆಂಗಳೂರು ಪಿಚ್ ನಲ್ಲೆ ಐಪಿಎಲ್ ಅಭ್ಯಾಸ ಮಾಡಿದ್ದು ಎನ್ನುವ ಸಂದೇಶವನ್ನು ಬೆಂಗಳೂರು ತಂಡಕ್ಕೆ ಸಿರಾಜ್ ಕೊಟ್ಟರು. ಪ್ರತಿ ವಿಕೆಟ್ ಪಡೆಯುವಾಗ ಅದೇ ಜಂಪ್ ಸ್ಟೈಲ್ ಮಾಡಿ ಸಂಭ್ರಮಿಸಿದ ಸಿರಾಜ್, 3 ವಿಕೆಟ್ ಪಡೆದು ಸೇಡಿಗೆ ಸೇಡು ಎಂದು ಪರೋಕ್ಷವಾಗಿ ಬೆಂಗಳೂರು ತಂಡಕ್ಕೆ ಸೂಚನೆ ಕೊಟ್ಟರು. ಸಿರಾಜ್ ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಆರ್ ಸಿ ಬಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತ್ತು, ಆದರೆ ಗುಜರಾತ್ ಟೈಟಾನ್ಸ್ ಕೇವಲ 17.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 170 ರನ್ ಬಾರಿಸಿ ಜಯಭೇರಿ ಗಳಿಸಿದೆ.