IPL 2025 : 10 ವರ್ಷಗಳ ನಂತರ ವಾಂಖಡೆ ಸ್ಟೇಡಿಯಂನಲ್ಲಿ ಮುಂಬೈ ವಿರುದ್ಧ ಜಯಗಳಿಸಿದ ಬೆಂಗಳೂರು ತಂಡ

  • 08 Apr 2025 12:48:19 AM

IPL 2025 : ಮುಂಬಯಿ ಇಂಡಿಯನ್ಸ್ ವಿರುದ್ಧ ರಾಯಲ್ಸ್ ಚಾಲೆಂಜ್ರ್ಸ್ ಬೆಂಗಳೂರು ವಿಜಯವನ್ನು ಸಾಧಿಸಿದೆ. ಮುಂಬಯಿ ನ ವಾಂಖಡೆ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತ್ತು.

 

ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ, 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 ರನ್ ಒಟ್ಟುಗೂಡಿಸಿತು. ವಿರಾಟ್ ಕೊಹ್ಲಿ 42 ಎಸೆತದಲ್ಲಿ 67 ರನ್, ರಜತ್ ಪಾಟೀದಾರ್ 32 ಎಸೆತಗಳಲ್ಲಿ 64 ರನ್ ಮತ್ತು ಜಿತೇಶ್ ಶರ್ಮ 19 ಎಸೆತದಲ್ಲಿ ಭರ್ಜರಿ 40 ರನ್ ಗಳಿಸಿ ಉತ್ತಮ ಮೊತ್ತಕ್ಕೆ ಕೈಜೋಡಿಸಿದರು.

 

ಮುಂಬಯಿ ಮೊದಲು ಬೌಲಿಂಗ್ ಮಾಡಿ, ಹಾರ್ದಿಕ್ ಪಾಂಡ್ಯ ಮತ್ತು ಟ್ರೆಂಟ್ ಬೌಲ್ಟ್ 4 ಓವರ್ ಗಳಲ್ಲಿ ತಲಾ 2 ವಿಕೆಟ್ ಪಡೆದರೆ, ವಿಘ್ನೇಶ್ ಪುತ್ತೂರ್ ಒಂದು ಓವರ್ ನಲ್ಲಿ ಒಂದು ವಿಕೆಟ್ ಪಡೆದರು.

 

ಮುಂಬೈ ತಂಡ ರಾಯಲ್ಸ್ ಬೆಂಗಳೂರಿನ ಮೊತ್ತವನ್ನು ಬೆನ್ನಟ್ಟುತ್ತ, 20 ಓವರ್ ಗಳಲ್ಲಿ, 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಆರ್ ಸಿ ಬಿ ವಿರುದ್ಧ ಪರಾಜಯಗೊಂಡಿತು. ಮುಂಬಯಿ ಪರ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿ 29 ಎಸೆತದಲ್ಲಿ 56 ರನ್ ಗಳಿಸಿದರೆ, ಒಂದು ಹಂತದಲ್ಲಿ ಹಾರ್ದಿಕ್ ಪಾಂಡ್ಯ ಸಂಪೂರ್ಣ ಮ್ಯಾಚ್ ನ್ನು ಹತೋಟಿಗೆ ತೆಗೆದುಕೊಂಡಿದ್ದರು. ಬರೀ 15 ಎಸೆತಗಳಲ್ಲಿ 42 ರನ್ ಗಳಿಸಿದ್ದರು, ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 28 ರನ್ ಗಳಿಸಿದರು.

 

ಕ್ರುನಾಲ್ ಪಾಂಡ್ಯ ಪಂದ್ಯದ ಕೊನೆಯ ಓವರ್ ನಲ್ಲಿ 3 ವಿಕೆಟ್ ಮತ್ತು ಪಂದ್ಯದಲ್ಲಿ ಒಟ್ಟು 4 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಜೋಶ್ ಹೇಜಲ್ ವುಡ್ ಮತ್ತು ಯಶ್ ದಯಾಳ್ ತಲಾ 2 ವಿಕೆಟ್ ಪಡೆದರು.