ಜಪ್ಪಿನ ಮೊಗರಿನಲ್ಲಿ ವೇಗವಾದ ಕಂಬಳ : 25.35 ಗಂಟೆಯಲ್ಲಿ ಕಂಬಳ ಮುಕ್ತಾಯ, ನಂದಳಿಕೆ ಶ್ರೀಕಾಂತ ಭಟ್ಟರ ಅಪರೂಪದ ಸಾಧನೆ

  • 12 Feb 2025 07:31:27 PM

ಜಪ್ಪಿನಮೊಗರು ಕಂಬಳ : ಶಾಸಕ ಶ್ರೀ ವೇದವಾಸ್ ಕಾಮತ ಗೌರವಾಧ್ಯಕ್ಷತೆಯಲ್ಲಿ ಮತ್ತು ಶ್ರೀ ಜೆ. ಅನಿಲ್ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ಇತಿಹಾಸ ಪ್ರಸಿದ್ಧ ಜಪ್ಪಿನ ಮೊಗರು ಜಯ-ವಿಜಯ ಜೋಡುಕರೆ ಕಂಬಳ ಫೆಬ್ರವರಿ 8 ಮತ್ತು 9, 2025 ರಂದು ಮಂಗಳೂರಿನ ಜಪ್ಪಿನ ಮೊಗರಿನಲ್ಲಿ ಯಶಸ್ವಿಯಾಗಿ ನಡೆಯಿತು. ಒಟ್ಟು 144 ಕೋಣಗಳ ಪಾಲುಪಡೆವಿಕೆಯಲ್ಲಿ ಜಪ್ಪಿನ ಮೊಗರಿನ ಜಯ - ವಿಜಯ ಕಂಬಳ ದಾಖಲೆಯ ಅಂತ್ಯ ಕಂಡಿತು. 

 

ಹೌದು, ಈ ಋತುವಿನಲ್ಲಿ ನಡೆದ ಒಟ್ಟು 10 ಕಂಬಳಗಳಲ್ಲಿ ಕಡಿಮೆ ಅವಧಿಯಲ್ಲಿ ಮುಗಿದ ಕಂಬಳ ಎನ್ನುವ ಹೆಗ್ಗಳಿಕೆಗೆ ಈ ವರುಷದ ಜಪ್ಪಿನಮೊಗರು ಕಂಬಳ ಹೆಸರು ಗಳಿಸಿದೆ. ಇದರ ಮೊದಲಿನ ವಾರದಲ್ಲಿ ನಡೆದ ಐಕಳಬಾವ ಕಂಬಳ 28 ಗಂಟೆಯೊಳಗೆ ಮುಗಿದರೆ, ಜಪ್ಪಿನ ಮೊಗರಿನ ಕಂಬಳ ಸುಮಾರು 25.35 ಗಂಟೆಯೊಳಗೆ ಮುಗಿದಿದೆ.

 

ಇತೀಚಿನ ದಿನಗಳಲ್ಲಿ ಗಂತಿಗೆ ಸಂಬಂಧಪಟ್ಟ ಬೆಳವಣಿಗೆಳನ್ನು ನಾವು ಕಂಬಳದಲ್ಲಿ ನೋಡುತ್ತಿರುತ್ತೇವೆ. ಗಂತಿನಲ್ಲಿ ಕೋಣಗಳು ಸರಿಯಾಗಿ ನಿಲ್ಲದೆ ಇರುವುದು ಅಥವಾ ಕೋಣವನ್ನು ಹಿಡಿಯುವವರು ಕೋಣಗಳನ್ನು ಸರಿಯಾಗಿ ನಿಲ್ಲಿಸಿ ಕೊಡುದೇ ಇರುವುದರಿಂದ, ಕೆಲ ಕಂಬಳಗಳು ಬಹಳಷ್ಟು ವಿಳಂಬವಾಗುಹುದನ್ನು ಕಂಬಳ ಪ್ರೇಮಿಗಳು ಗಮನಿಸಿರುತ್ತಾರೆ.

 

ಆದರೆ, ಐಕಳ ಬಾವ ಕಂಬಳದಲ್ಲಿ ಕೋಣಗಳನ್ನು ನಿಂತಲ್ಲಿಂದಲೇ ಸರಿಮಾಡಿಕೊಂಡು ಸುಮಾರು 1 ಮೀ ಅಂತರದಲ್ಲಿ ಕೋಣಗಳನ್ನು ಬಿಡುವ ಮುಖಾಂತರ ಸಮಯದ ಪಾಲನೆ ಮಾಡಲಾಗಿತ್ತು ಮತ್ತು ಅದೇ ಪ್ರಕಾರ ಜಪ್ಪಿನಮೊಗರಿನಲ್ಲು ಈ ನಿಯಮದಿಂದ ಕಂಬಳ ನಿಗದಿತ ಸಮಯಕ್ಕೆ ಮುಗಿಯಲು ಸಹಕಾರವಾಯಿತು ಎಂದು ಕಂಬಳದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

 

ಕಂಬಳದ ತೀರ್ಪುಗಾರರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿರುವ ಎಡ್ತೂರು ರಾಜೀವ ಶೆಟ್ಟಿಯವರು ಜಪ್ಪಿನಮೊಗರು ಜಯ-ವಿಜಯ ಜೋಡು ಕರೆ ಕಂಬಳದ ಫೈನಲ್ ಹಂತದ ಸ್ಪರ್ಧೆಯ ಸಂದರ್ಭದಲ್ಲಿ ಮಾತನಾಡಿ, ಒಂದು ವೇಳೆ ಕಂಬಳದ ಕೋಣಗಳನ್ನು ಕರೆಗೆ ಸಮಯಕ್ಕೆ ಸರಿಯಾಗಿ ತರುತ್ತಿದ್ದರೆ, ಕಂಬಳ 2 ರಿಂದ 3 ಗಂಟೆ ಇನ್ನೂ ಬೇಗ ಮುಗಿಯುತ್ತಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆದರೂ ಕಂಬಳದ ಯಜಮಾನರು ಮತ್ತು ಕೆಲಸಗಾರರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

 

15ನೇ ವರುಷದ ಜಪ್ಪಿನಮೊಗರು ಕಂಬಳದಲ್ಲಿ ಮತ್ತೊಂದು ವಿಶೇಷವೇನೆಂದರೆ, ಮೊದಲ ಮತ್ತು ಎರಡನೇ ಕೋಣಗಳಿಗೆ ಬಹುಮಾನದ ಜೊತೆಗೆ ಈ ಬಾರಿ ಮೂರನೇ ಮತ್ತು ನಾಲ್ಕನೇ ಬಹುಮಾನ ಕೂಡ ನೀಡಲಾಯಿತು. ಆದ್ದರಿಂದ ಹಗ್ಗದ ಹಿರಿಯ ಕೋಣದ ಯಜಮಾನರಾದ ನಂದಳಿಕೆ ಶ್ರೀಕಾಂತ ಭಟ್ಟರಿಗೆ ಮತ್ತೊಂದು ಅಪರೂಪದ ಸಾಧನೆ ತನ್ನ ಮೂರು ಜೊತೆ ಕೋಣಗಳಿಗೆ ಬಹುಮಾನ ಪಡೆಯುವ ಅವಕಾಶ ದೊರಕಿ ಬಂತು.

 

ಇತಿಹಾಸ ಪ್ರಸಿದ್ಧ ಜಪ್ಪಿನ ಮೊಗರು 15 ನೇ ವರುಷದ ಜಯ - ವಿಜಯ ಜೋಡು ಕರೆ ಕಂಬಳದ ಫಲಿತಾಂಶ ಈ ರೀತಿಯಾಗಿತ್ತು,
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆ ಹಲಗೆ: 08 ಜೊತೆ
ಅಡ್ಡಹಲಗೆ: 08 ಜೊತೆ 
ಹಗ್ಗ ಹಿರಿಯ: 19 ಜೊತೆ 
ನೇಗಿಲು ಹಿರಿಯ: 27 ಜೊತೆ 
ಹಗ್ಗ ಕಿರಿಯ: 22 ಜೊತೆ 
ನೇಗಿಲು ಕಿರಿಯ: 60 ಜೊತೆ 
ಒಟ್ಟು ಕೋಣಗಳ ಸಂಖ್ಯೆ: 144  ಜೊತೆ
-------------------------------------------------
ಕನೆ ಹಲಗೆ:
( ನೀರು ನೋಡಿ ಬಹುಮಾನ)

ಪ್ರಥಮ: ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ

ದ್ವಿತೀಯ: ನಿಡ್ಡೋಡಿ ಕಾನ ರಾಮ ಸುವರ್ಣ
ಹಲಗೆ ಮುಟ್ಟಿದವರು: ಕೊಕ್ಕರ್ಣೆ ವಡ್ಡಾಪಿ ಸುರೇಶ್ ನಾಯ್ಕ್
------------------------------------------------
ಅಡ್ಡ ಹಲಗೆ:

ಪ್ರಥಮ: ನಾರಾವಿ ಯುವರಾಜ್ ಜೈನ್ "ಎ" (11.14)
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ "ಬಿ" (11.68)
ಹಲಗೆ ಮುಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ
------------------------------------------------
ಹಗ್ಗ ಹಿರಿಯ: 

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಎ" (10.91)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಬಿ" (11.52)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
-----------------------------------------------
ಹಗ್ಗ ಕಿರಿಯ:

ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ "ಬಿ" (11.14)
ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ

ದ್ವಿತೀಯ: ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ (11.20)
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
-------------------------------------------------
ನೇಗಿಲು ಹಿರಿಯ: 

ಪ್ರಥಮ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (10.94)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಎರ್ಮಾಳ್ ರೋಹಿತ್ ಹೆಗ್ಡೆ(11.31)
ಓಡಿಸಿದವರು: ಆದಿ ಉಡುಪಿ ಜಿತೇಶ್
------------------------------------------------
ನೇಗಿಲು ಕಿರಿಯ:

ಪ್ರಥಮ: ಮುನಿಯಾಲು ಉದಯ ಕುಮಾರ್ ಶೆಟ್ಟಿ "ಎ" (11.29)
ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ "ಬಿ" (11.57)
ಓಡಿಸಿದವರು: ಸೂರಾಲ್ ಪ್ರದೀಪ್