Kadeshivalaya : ಗೆಳಯರ ಬಳಗ, ಕೊರತಿಗುರಿ (ರಿ.), ಕಡೇಶಿವಾಲಯ ಇದರ ಆಶ್ರಯದಲ್ಲಿ ಲೀಗ್ ಮಾದರಿಯ ಹೊನಲು ಬೆಳಕಿನ "ವಾಲಿಬಾಲ್ ಪಂದ್ಯಾಟ 2025" ದಿನಾಂಕ 22 ಫೆಬ್ರವರಿ 2025 ನೇ ಶನಿವಾರ ಸಮಯ ರಾತ್ರಿ 8.00 ಗಂಟೆಗೆ ಕೊರತಿಗುರಿ ಮೈದಾನ, ಕಡೇಶಿವಾಲಯದಲ್ಲಿ ಜರಗಲಿದೆ.
ವಾಲಿಬಾಲ್ ಪಂದ್ಯದ ಬಹುಮಾನಗಳು ಈ ರೀತಿ ಇದೆ:
ಪ್ರಥಮ ಬಹುಮಾನ : ರೂ. 8,000/- ಮತ್ತು GBK ಟ್ರೋಫಿ
ದ್ವಿತೀಯ ಬಹುಮಾನ : ರೂ. 5,000/- ಮತ್ತು GBK ಟ್ರೋಫಿ
ತೃತೀಯ ಬಹುಮಾನ : ರೂ. 2,000/- ಮತ್ತು GBK ಟ್ರೋಫಿ
ಚತುರ್ಥ ಬಹುಮಾನ : ರೂ. 1,000/- ಮತ್ತು GBK ಟ್ರೋಫಿ
ಆಟಗಾರರಿಗೆ ವಿಶೇಷ ಸೂಚನೆ:
* ತೀರ್ಪುಗಾರರ ಮತ್ತು ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.
* ಯಾವುದೇ ಚರ್ಚೆ ಬಂದಲ್ಲಿ ನಾಯಕನಿಗೆ ಮಾತ್ರ ಮಾಡನಾಡಲು ಅವಕಾಶವಿರುತ್ತದೆ.
* ಪಂದ್ಯಾಟವು ರಾತ್ರಿ ಗಂಟೆ 10.00 ಕ್ಕೆ ಪ್ರಾರಂಭವಾಗಲಿದೆ.
ಉದ್ಘಾಟನಾ ಸಮಾರಂಭದಲ್ಲಿ, ಉದ್ಘಾಟಕರಾಗಿ ಶ್ರೀ ಲೋಕಯ್ಯ ಪೂಜಾರಿ ಕುರಂಬ್ಲಾಜೆ, ಪ್ರಗತಿಪರ ಕೃಷಿಕರು ಕಡೇಶಿವಾಲಯ ಇವರು ನೆರವೇರಿಸಲಿದ್ದಾರೆ. ಸಭಾಧ್ಯಕ್ಷರಾಗಿ ಬಂಟ್ವಾಳ ವಿಧಾನಸಭಾ ಶಾಸಕರು ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ವಹಿಸಲಿದ್ದಾರೆ ಮತ್ತು ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಪಂದ್ಯಾಟಕ್ಕೆ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಅಧ್ಯಕ್ಷರು, ಗೌರವಾಧ್ಯಕ್ಷರು ಮತ್ತು ಕಾರ್ಯದರ್ಶಿ ವಿನಂತಿಸುತ್ತಿದ್ದಾರೆ.
ಪಂದ್ಯಾಟದ ಸ್ಥಳಕ್ಕೆ ರಸ್ತೆ ಮುಖಾಂತರ ತಲುಪಲು ಈ ಕೆಳಗೆ ನೀಡಿರುವ ರಸ್ತೆಯನ್ನು ಅನುಸರಿಸಿ,
ನ್ಯಾಷನಲ್ ಹೈವೇ 75 ಮುಖಾಂತರ ಬರುವಾಗ,ಮಾಣಿ ಬುಡೋಲಿಯ ನಂತರ ಗಡಿಯಾರ ಜಂಕ್ಷನ್ ಗೆ ತಲುಪಬೇಕು. ಅಲ್ಲಿಂದ ಎಡಕ್ಕೆ ತಿರುಗಿ ಕಡೇಶಿವಾಲಯ ರಸ್ತೆ ಮುಖಾಂತರ ಪೆರ್ಲಾಪು ಕಡೆ ಬರಬೇಕು, ಪೆರ್ಲಾಪು ಜುಂಕ್ಷನ್ ಗಿಂತ 100 ಮೀ ಮೊದಲು ಅಮೈ ರಸ್ತೆಯಲ್ಲಿ ಸುಮಾರು 1 ಕೀ. ಪ್ರಯಾಣಿಸಿದರೆ ನಿಮಗೆ ಪಂದ್ಯಾಟದ ಸ್ಥಳ ಸಿಗುತ್ತದೆ.
ಉಪ್ಪಿನಂಗಡಿ ಕಡೆಯಿಂದ ಬರುವುದಾದರೆ, ಅಮೈ ಜುಂಕ್ಷನ್ ನಲ್ಲಿ ಬಲಕ್ಕೆ ತಿರುಗಿ ಅಮೈ ಪೆರ್ಲಾಪ್ ರಸ್ತೆಯಲ್ಲಿ ಬಂದರೆ, ಸುಮಾರು 2 ಕೀ ಒಳಗಡೆ ನಿಮಗೆ ಪಂದ್ಯಾಟದ ಸ್ಥಳ ಸಿಗಲಿದೆ.