Vamajoor : 13 ನೇ ವರ್ಷದ ವಾಮಂಜೂರ್ ತಿರುವೈಲ್ ಗುತ್ತು ಸಂಕುಪೂಂಜ - ದೇವಪೂಂಜ ಕಂಬಳ ಅತಿವೇಗದ ಕಂಬಳದ ಪಟ್ಟಿಯಲ್ಲಿ ಮೊದಲನೇ ಸ್ಥಾನ ಗಳಿಸಿದೆ. ನಿಗದಿತ ಸಮಯದೊಳಗೆ ಕಂಬಳ ಪೂರ್ಣಗೊಳಿಸುವ ಕಂಬಳ ಸಮಿತಿಯಾ ಪ್ರಯತ್ನಕ್ಕೆ ಪ್ರತಿಫಲ ಇತೀಚಿನ ಕಂಬಳದಲ್ಲಿ ದೊರೆಯುತ್ತಿದೆ. ಇಲ್ಲಿಯವರೆಗೆ ನಡೆದ ಎಲ್ಲಾ ಕಂಬಳಗಳಲ್ಲಿ ಕಡಿಮೆ ವೇಗದ ಕಂಬಳದ ಕಿರೀಟ ಈಗ ತಿರುವೈಲ್ ಗುತ್ತು ಕಂಬಳಕ್ಕೆ ದೊರಕಿದೆ.
15 ನೇ ಫೆಬ್ರವರಿ 2025 ರಂದು ಪ್ರಾರಂಭವಾದ ಕಂಬಳ ಒಟ್ಟು 24.30 ಗಂಟೆಯ ಒಳಗೆ ಮುಕ್ತಾಯಗೊಂಡಿದೆ. ಜಪ್ಪಿನಮೊಗರು ಕಂಬಳ 25.35 ಗಂಟೆಯಲ್ಲಿ ಮುಕ್ತಾಯಗೊಂಡಿದೆ. ಇದಕ್ಕೆ ಮೊದಲು ನಡೆದ ಐಕಳಬಾವ ಕಂಬಳ 28 ಗಂಟೆಯೊಳಗೆ ಮುಗಿದಿತ್ತು.
ವಾಮಂಜೂರು ತಿರುವೈಲುಗುತ್ತು "ಸಂಕುಪೂಂಜ - ದೇವುಪೂಂಜ" ಜೋಡುಕರೆ ಕಂಬಳ ಕೂಟದ ಫಲಿತಾoಶ ( 15 - 02 - 2025 )
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆ ಹಲಗೆ: 08 ಜೊತೆ
ಅಡ್ಡಹಲಗೆ: 06 ಜೊತೆ
ಹಗ್ಗ ಹಿರಿಯ: 23 ಜೊತೆ
ನೇಗಿಲು ಹಿರಿಯ: 23 ಜೊತೆ
ಹಗ್ಗ ಕಿರಿಯ: 26 ಜೊತೆ
ನೇಗಿಲು ಕಿರಿಯ: 65 ಜೊತೆ
ಒಟ್ಟು ಕೋಣಗಳ ಸಂಖ್ಯೆ: 151 ಜೊತೆ
ಕನೆ ಹಲಗೆ:
( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ವಾಮಂಜೂರು ತಿರುವೈಲು ಗುತ್ತು ನವೀನ್ಚಂದ್ರ ಆಳ್ವ
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ
ಅಡ್ಡ ಹಲಗೆ:
ಪ್ರಥಮ: ನಾರಾವಿ ಯುವರಾಜ್ ಜೈನ್ (11.10)
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ (11.98)
ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್
ಹಗ್ಗ ಹಿರಿಯ:
ಪ್ರಥಮ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ (11.18)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಬಿ" (11.33)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ಹಗ್ಗ ಕಿರಿಯ:
ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ "ಬಿ" (11.33)
ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ
ದ್ವಿತೀಯ: ಬೆಳುವಾಯಿ ಉಮನೊಟ್ಟು ಶಿವರಾಮ್ ಹೆಗ್ಡೆ (11.75)
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
ನೇಗಿಲು ಹಿರಿಯ:
ಪ್ರಥಮ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (11.18)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ: ಮೂಡಾರ್ ಕೊಂಡಿಬೆಟ್ಟು ಶರಣ್ ಪೂಜಾರಿ (11.33)
ಓಡಿಸಿದವರು: ಆದಿ ಉಡುಪಿ ಜಿತೇಶ್
ನೇಗಿಲು ಕಿರಿಯ:
ಪ್ರಥಮ: ಪಡೀಲು ಕಬತ್ತಾರು ಗುತ್ತು ದಿನಕರ್ ಜಯರಾಜ್ ಶೆಟ್ಟಿ "ಎ" (11.18)
ಓಡಿಸಿದವರು: ಬಾರಾಡಿ ನತೀಶ್
ದ್ವಿತೀಯ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ "ಬಿ" (11.39)
ಓಡಿಸಿದವರು: ಸೂರಾಲ್ ಪ್ರದೀಪ್