04 July 2025 | Join group

ತಿಂಗಳಿಗೆ 4 ಲಕ್ಷ ರೂ. ಜೀವನಾಂಶ ತುಂಬಾ ಕಡಿಮೆ: ಶಮಿ ಪತ್ನಿ ಹಸಿನ್ ಜಹಾನ್ ಅಸಮಾಧಾನ

  • 03 Jul 2025 07:21:08 PM

ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿ ಹಾಗೂ ಅವರ ಪತ್ನಿ ಹಸಿನ್ ಜಹಾನ್ ನಡುವಿನ ವಿವಾಹಿತ ಜೀವನದಲ್ಲಿ ನಡೆದ ಗಂಭೀರ ಉದ್ವಿಗ್ನತೆಗಳು ಇದೀಗ ನ್ಯಾಯಾಲಯದ ಅಂಗಳವರೆಗೆ ತಲುಪಿವೆ. ದಂಪತಿಗಳ ವಿಚ್ಛೇದನದ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲದಿದ್ದರೂ, ಕೊಲ್ಕತ್ತಾ ಹೈಕೋರ್ಟ್ ಈ ನಡುವೆ ಮಹತ್ವದ ತೀರ್ಪು ನೀಡಿದೆ.

 

ಕೋರ್ಟ್ ಆದೇಶದ ವಿವರ:

ಕೊಲ್ಕತ್ತಾ ಹೈಕೋರ್ಟ್ ಶಮಿಗೆ ಆದೇಶಿಸಿದ್ದು, ಅವರು ಪ್ರತಿ ತಿಂಗಳು 4 ಲಕ್ಷ ರೂ.ಗಳನ್ನು ಪತ್ನಿ ಹಸಿನ್ ಜಹಾನ್ ಮತ್ತು ಮಗಳ ಭವಿಷ್ಯದ ಭದ್ರತೆಗೆ ಜೀವನಾಂಶ ರೂಪದಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ.

 

ಹಸಿನ್ ಜಹಾನ್ ಪ್ರತಿಕ್ರಿಯೆ:

ಈ ತೀರ್ಪಿನ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಹಸಿನ್ ಜಹಾನ್,“ಇದು ನನ್ನ ಗೆಲುವು ಎನಿಸಿದರೂ, ತೀರ್ಪಿನಲ್ಲಿ ನಿರ್ಧರಿಸಿರುವ 4 ಲಕ್ಷ ರೂ. ಜೀವನಾಂಶ ಮೊತ್ತ ತುಂಬಾ ಕಡಿಮೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಇಷ್ಟು ವರ್ಷಗಳ ಕಠಿಣ ಹೋರಾಟದ ನಂತರ ನನಗೆ ನ್ಯಾಯ ದೊರೆತಿದೆ ಎಂಬ ಸಂತೋಷವಿದೆ. ಆದರೆ ಶಮಿ ಆದಾಯದ ಮಟ್ಟವನ್ನು ಪರಿಗಣಿಸಿದರೆ, ಈ ಮೊತ್ತ ಎಂಥ ಸಹಾಯ ಮಾಡಬಹುದು ಎಂಬ ಪ್ರಶ್ನೆ ನನಗಿದೆ,” ಎಂದಿದ್ದಾರೆ.

 

ಶಮಿ ಮತ್ತು ಹಸಿನ್ ಜಹಾನ್ ದಂಪತಿಗಳ ನಡುವೆ ವಿವಾದ 2018ರ ಬಳಿಕ ಬಹಿರಂಗವಾಗಿತ್ತು. ಹಸಿನ್ ಜಹಾನ್ ಶಮಿಯ ವಿರುದ್ಧ ದೌರ್ಜನ್ಯ, ಹಣಕಾಸು ದುರ್ಬಳಕೆ, ಪರಸ್ತ್ರಿಯ ಸಂಬಂಧ ಸೇರಿದಂತೆ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದರು. ಇದರ ಬೆನ್ನಲ್ಲೇ ಅವರು ಕಾನೂನು ಹೋರಾಟ ಆರಂಭಿಸಿದ್ದರು.