ಮಹಿಳಾ ವಿಶ್ವಕಪ್ ಮುನ್ನಾ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಭಾರತದಲ್ಲಿ ನಡೆಯುವ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ಪ್ರದರ್ಶನ ಭಾರತೀಯರನ್ನು ಸಂತಸ ಪಡಿಸಿದೆ. ನಿನ್ನೆ ನಡೆದ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ಭರ್ಜರಿ ಗೆಲುವು ದಾಖಲಿಸಿದೆ.
18 ವರ್ಷಗಳ ನಂತರ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ತನ್ನ ತವರಿನಲ್ಲಿ ಸೋಲಿಸಿರುವುದು ಈ ಪಂದ್ಯದ ವಿಶೇಷತೆಯಾಗಿತ್ತು. ಈ ಮೂಲಕ 3 ಪಂದ್ಯಗಳ ಸೀರೀಸ್ ನಲ್ಲಿ 1-1 ಅಂಕ ಉಭಯ ತಂಡಗಳು ಪಡೆದಿವೆ.
293 ರನ್ ಗಳ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಕೇವಲ 190 ರನ್ ಗಳಿಸಿ ಆಲೌಟ್ ಆಗಿದೆ. ಇದರಿಂದಾಗಿ ಭಾರತ 102 ರನ್ ಗಳ ಭಾರಿ ಅಂತರದ ಗೆಲುವು ಸಾಧಿಸಿದ್ದು, ಇದೂ ಕೂಡ ಅತಿದೊಡ್ಡ ಗೆಲುವು ದಾಖಲಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.