01 November 2025 | Join group

ಅಮೇರಿಕಾದಲ್ಲಿ ನಡೆಯುವ ನ್ಯಾಚುರಲ್ ಓಲಂಪಿಯಾದಲ್ಲಿ ಸ್ಥಾನ ಪಡೆದ ವಿಟ್ಲದ ಸುನೀಲ್‌ ರೋಷನ್ ಪಾಯಸ್

  • 24 Sep 2025 10:02:04 AM

ವಿಟ್ಲ: ನವೆಂಬ‌ರ್ ನಲ್ಲಿ ಅಮೇರಿಕಾದಲ್ಲಿ ನಡೆಯುವ ನ್ಯಾಚುರಲ್ ಓಲಂಪಿಯಾಕ್ಕೆ ವಿಟ್ಲದ ಫಿಟ್ ನೆಸ್ ಜಿಮ್ ನ ಮಾಲಕ ಸುನೀಲ್‌ ರೋಷನ್ ಪಾಯಸ್ ಅವರು ಆಯ್ಕೆಯಾಗಲಿದ್ದಾರೆ. ಸಿಂಗಾಪುರದಲ್ಲಿ ನಡೆದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಇವರು, ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಇದೀಗ ಅಮೇರಿಕಾದಲ್ಲಿ ನಡೆಯಲಿರುವ ನ್ಯಾಚುರಲ್ ಓಲಂಪಿಯಾದಲ್ಲಿ ವಿಟ್ಲ ಜಿಮ್ ಟ್ರೈನರ್ ಪಾಲ್ಗೊಳ್ಳುವುದು ಅವರ ಶಿಷ್ಯ ಬಳಗ ಮತ್ತು ನಾಗರಿಕರಿಗೆ ಸಂತಸ ತಂದಿದೆ.

 

ಸಿಂಗಾಪುರದಲ್ಲಿ ನಡೆದ ಐ.ಎನ್.ಬಿ.ಎ ನ್ಯಾಚುರಲ್ ಏಷ್ಯಾನ್ ಗೇಮ್ ಓಪನ್ ಬಾಡಿ ಬಿಲ್ಡಂಗ್‌ನಲ್ಲಿ ಚಿನ್ನ,40 ಪ್ಲಸ್ ಮಾಸ್ಟರ್‌ನಲ್ಲಿ ಚಿನ್ನ ಪಡೆದಿರುತ್ತಾರೆ. ಟೈಟಲ್ ಮೆನ್ಸ್ ಕೋಸಿಕ್ ಪಿಜೀಕ್‌ನಲ್ಲಿ ಚಿನ್ನ ಹಾಗೂ 4೦ ಪ್ಲಸ್ ಮಾಸ್ತರ್‌ನಲ್ಲಿ ಕ್ಲೋಸಿಕ್ ನಲ್ಲಿ ಪೀಜಿಕ್ ಚಿನ್ನ ಟೈಟಲ್ ಹಾಗೂ 2 ಪೋರೊ ಕಾರ್ಡ್ ಪಡೆದಿರುವ ಹೆಗ್ಗಳಿಕೆ ಇವರದಾಗಿದೆ.