ಬೆಂಗಳೂರು: ಕೆಲ ದಿನಗಳ ಹಿಂದೆ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಯವರು 'ಆರ್ ಸಿ ಬಿ ತಂಡ ಖರೀದಿಸುವುದಕ್ಕಿಂತ ಉತ್ತಮವಾದ ಹೂಡಿಕೆ ಮತ್ತೊಂದಿಲ್ಲ' ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಭಾರತದ ಶ್ರೀಮಂತರ ಕಿವಿ ನೆಟ್ಟಗಾಗಿದೆ.
ಇದೀಗ, ಸೇರಮ್ ಇನ್ಸ್ಟಿಟ್ಯೂಟ್ ನ ಸಿಇಓ ಅಧರ್ ಪುನವಾಲ ಆರ್ ಸಿ ಬಿ ತಂಡದ ಖರೀದಿ ಬಗ್ಗೆ ಒಲವು ತೋರಿಸಿರುವ ಮೆಸೇಜ್ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪುನವಾಲ 'ಒಳ್ಳೆಯ ಬೆಲೆಗೆ' ಎಂದು ಪೋಸ್ಟ್ ಮಾಡಿ, 'ಆರ್ ಸಿ ಬಿ ಉತ್ತಮ ತಂಡ' ಎಂದು ಶೀರ್ಷಿಕೆ ನೀಡಿದ್ದಾರೆ. ಅವರು ಆರ್ ಸಿ ಬಿ ತಂಡವನ್ನು ಖರೀದಿಸಲಿದ್ದಾರೆ ಎಂಬ ಗುಸು ಗುಸು ಕೇಳಿ ಬರುತ್ತಿದೆ.





