ಮಹಿಳಾ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ 88 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ದುಕೊಂಡಿದ್ದು, ಭಾರತ 50 ಓವರ್‌ಗಳಲ್ಲಿ 247 ರನ್‌ಗಳಿಸಿತು.
ಪ್ರತಿಕಾ ರಾವಲ್ (31) ಮತ್ತು ಸ್ಮೃತಿ ಮಂಧಾನ (23) ಉತ್ತಮ ಆರಂಭ ನೀಡಿದರು. ಪಾಕಿಸ್ತಾನ ತಂಡ 43 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಗಿತು. ಕ್ರಾಂತಿ ಗೌಡ್ ಮತ್ತು ದೀಪ್ತಿ ಶರ್ಮಾ ತಲಾ ಮೂರು ವಿಕೆಟ್, ಸ್ನೇಹ ರಾಣಾ 2 ವಿಕೆಟ್ ಪಡೆದು ಪಾಕಿಸ್ತಾನವನ್ನು ಕುಸಿತಕ್ಕೊಳಪಡಿಸಿದರು.
ಸಿದ್ರಾ ಅಮೀನ್ (81) ಪಾಕ್ ಪರ ಹೋರಾಟ ಮಾಡಿದರೂ ನೆರವಾಗಲಿಲ್ಲ. ಪಂದ್ಯಾನಂತರ ಹರ್ಮನ್‌ಪ್ರೀತ್ ಕೌರ್ ಪಾಕ್ ನಾಯಕಿಯೊಂದಿಗೆ ಹಸ್ತಲಾಘವ ಮಾಡದೇ ಭಾರತದ ‘ನೋ ಹ್ಯಾಂಡ್‌ಶೇಕ್’ ನಿಲುವನ್ನು ಮುಂದುವರಿಸಿದರು.