ಕಡೇಶಿವಾಲಯ ಗ್ರಾಮದ ಜಿ.ವಿ ಫ್ರೆಂಡ್ಸ್ (ರಿ.) ಇವರ ಆಯೋಗದಲ್ಲಿ 2ನೇ ವರ್ಷದ ಹಗ್ಗ ಜಗ್ಗಾಟ ಪಂದ್ಯಾಟ

  • 02 Mar 2025 12:59:55 AM

ಕಡೇಶಿವಾಲಯ, ಮಾ.02 : ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಜಿ.ವಿ ಫ್ರೆಂಡ್ಸ್ (ರಿ.) ಕಡೇಶಿವಾಲಯ ಇವರ ಆಯೋಗದಲ್ಲಿ ಆಂಬುಲೆನ್ಸ್ ಲೋಕಾರ್ಪಣೆ ಪ್ರಯುಕ್ತ 2ನೇ ವರ್ಷದ ಹಗ್ಗ ಜಗ್ಗಾಟ ಪಂದ್ಯಾಟ ಜರಗಲಿದೆ. 8ನೇ ಮಾರ್ಚ್ 2025, ಶನಿವಾರ ರಾತ್ರಿ 8.00 ಗಂಟೆಗೆ ಸರಿಯಾಗಿ ಕಡೇಶಿವಾಲಯ ಗ್ರಾಮ ಪಂಚಾಯತಿ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

 

ಎರಡು ಕೆಟಗರಿ ಪಂದ್ಯಾಟ ನಡೆಯಲಿದ್ದು, ಪುರುಷರ ಸಿಂಗಲ್ ಗ್ರಿಪ್ ಮತ್ತು ಫುಲ್ ಗ್ರಿಪ್ 525-5 ಒಟ್ಟು 8 ಜನರ ತಂಡವಾಗಿರಬೇಕು. ಖ್ಯಾತ ಹಗ್ಗ ಜಗ್ಗಾಟದ ನಿರೂಪಕರಾದ ಸುರೇಶ ಪಡಿಪಂಡ ಹಾಗೂ ಜಗದೀಶ್ ಬಂದರು ಇವರುಗಳು ನಿರೂಪಣೆ ಮಾಡಲಿದ್ದಾರೆ.

 

ಫುಲ್ ಗ್ರಿಪ್ ನ ಬಹುಮಾನ ಈ ರೀತಿ ಇದೆ;

ಪ್ರಥಮ - 6025/- ಮತ್ತು  GV ಟ್ರೋಫಿ 
ದ್ವಿತೀಯ - 4025/- ಮತ್ತು  GV ಟ್ರೋಫಿ
ತೃತೀಯ - 2025/- ಮತ್ತು  GV ಟ್ರೋಫಿ
ಚತುರ್ಥ - 2025/- ಮತ್ತು  GV ಟ್ರೋಫಿ 
5th & 6th - GV ಟ್ರೋಫಿ 

 

ಸಿಂಗಲ್ ಗ್ರಿಪ್ ನ ಬಹುಮಾನ ಈ ರೀತಿ ಇದೆ;

ಪ್ರಥಮ - 6025/- ಮತ್ತು  GV ಟ್ರೋಫಿ 
ದ್ವಿತೀಯ - 4025/- ಮತ್ತು  GV ಟ್ರೋಫಿ
ತೃತೀಯ - 2025/- ಮತ್ತು  GV ಟ್ರೋಫಿ
ಚತುರ್ಥ - 2025/- ಮತ್ತು  GV ಟ್ರೋಫಿ 
5th & 6th - GV ಟ್ರೋಫಿ.

 

ರಾತ್ರಿ 9.00 ಗಂಟೆಗೆ ಗಣ್ಯಾತಿ ಗಣ್ಯರ ಸಮೂಹದಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಸಾಧಕರನ್ನು ಗುರುತಿಸುವ ಸಲುವಾಗಿ  ಸನ್ಮಾನ ಕಾರ್ಯಕ್ರಮ ಕೂಡ ನೆರವೇರಲಿದೆ. ಅದೇ ರೀತಿ 8.00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ.ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಲಗತ್ತಿಸಲಾದ ಆಹ್ವಾನ ಪತ್ರಿಕೆಯನ್ನು ನೋಡಬೇಕಾಗಿ ವಿನಂತಿ. ಪುತ್ತೂರಿನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.