22 October 2025 | Join group

ರೋಹಿತ್ ಶರ್ಮಾ 500 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ 5ನೇ ಭಾರತೀಯ ಕ್ರಿಕೆಟಿಗ

  • 19 Oct 2025 12:21:24 PM

ರೋಹಿತ್ ಶರ್ಮಾ 500 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಇತಿಹಾಸದಲ್ಲಿ 5 ನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

ಪರ್ತ್‌ನಲ್ಲಿ ಇಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ರೋಹಿತ್ ಅವರ 274 ನೇ ಏಕದಿನ ಮತ್ತು 500 ನೇ ಅಂತರರಾಷ್ಟ್ರೀಯ ಪಂದ್ಯವಾಗಿದೆ.

 

ಭಾರತೀಯ ಕ್ರಿಕೆಟ್ ಪಯಣದಲ್ಲಿ ವಿರಾಟ್ ಕೊಹ್ಲಿ 551, ಎಂಎಸ್ ಧೋನಿ 538 ಮತ್ತು ರಾಹುಲ್ ದ್ರಾವಿಡ್ 509 ಪಂದ್ಯಗಳನ್ನು ಆಡಿದ್ದಾರೆ. 664 ಪಂದ್ಯಗಳೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನ್ನುವ ಕೀರಿಟ ಸಚಿನ್ ತೆಂಡೂಲ್ಕರ್ ಅವರದ್ದಾಗಿದೆ.