02 November 2025 | Join group

ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಯಾವಾಗ? ಪಂದ್ಯ ಎಲ್ಲಿ ನಡೆಯಲಿದೆ?

  • 01 Nov 2025 02:31:38 PM

ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಇದು ಭಾರತದ ಮೂರನೇ ಏಕದಿನ ವಿಶ್ವಕಪ್ ಫೈನಲ್ ಆಗಿದೆ. ಈ ಹಿಂದೆ 2005 ಮತ್ತು 2017ರಲ್ಲಿ ಭಾರತ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಆಡಿತ್ತು.


ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣವು ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯವೂ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿತ್ತು. ಸೆಮಿಫೈನಲ್‌ನಂತೆಯೇ ಫೈನಲ್‌ಗೂ ಬ್ಯಾಟರ್‌ಗಳಿಗೆ ಸಹಕಾರಿಯಾಗುವ ವಿಕೆಟ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ. 

 

ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಸಂಜೆ 3 ಗಂಟೆಗೆ ಫೈನಲ್ ಪಂದ್ಯ ಆರಂಭವಾಗಲಿದೆ. ಪಂದ್ಯದ ಟಾಸ್ 2.30ಕ್ಕೆ ನಡೆಯಲಿದೆ. ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ರೇಣುಕಾ ಸಿಂಗ್ ಠಾಕೂರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಕ್ರಾಂತಿ ಗೌಡ್, ಶ್ರೀ ಚರಣಿ, ರಾಧಾ ಯಾದವ್, ಅಮನ್‌ಜೋತ್ ಕೌರ್, ಅರುಂಧತಿ ರೆಡ್ಡಿ, ಉಮಾ ಛೆಟ್ರಿ, ಶಫಾಲಿ ವರ್ಮಾ.

 

ದಕ್ಷಿಣ ಆಫ್ರಿಕಾ ತಂಡ: ಲಾರಾ ವೊಲ್ವಾರ್ಟ್ (ನಾಯಕಿ), ಅಯಾಬೊಂಗಾ ಖಾಕಾ, ಕ್ಲೋಯ್ ಟ್ರಯಾನ್, ನಾಡಿನ್ ಡಿ ಕ್ಲರ್ಕ್, ಮರಿಜಾನ್ನೆ ಕಪ್, ಎಸ್ಮಿನ್ ಬ್ರಿಟ್ಸ್, ಸಿನಾಲೊ ಜಾಫ್ತಾ, ನೊಂಕುಲುಲೆಕೊ ಮ್ಲಾಬಾ, ಆನೆರಿ ಡರ್ಕ್‌ಸೆನ್, ಅನೆಕೆ ಬಾಷ್, ಮಸಾಬಾಟಾ ಕ್ಲಾಸ್, ಸುನೆ ಲೂಸ್, ಕರಾಬೊ ಮೆಸೊ, ತುಮಿ ಸೆಖುಖುನೆ, ನೊಡುಮಿಸೊ ಶಂಗಸೆ.