ಭಾರತ 2025 ರ ಕ್ರಿಕೆಟ್ ಚಾಂಪಿಯನ್ : ನ್ಯೂಜಿಲ್ಯಾಂಡ್ ನ್ನು ಸೋಲಿಸಿ ಕಪ್ ಎತ್ತಿದ ಭಾರತ, ಎಲ್ಲೆಡೆ ಹರ್ಷೋದ್ಘಾರ

  • 09 Mar 2025 08:23:39 PM

ಚಾಂಪಿಯನ್ ಟ್ರೋಫಿ 2025 : ಭಾರತ ಮತ್ತು ನ್ಯೂಜಿಲ್ಯಾಂಡ್ ದೇಶಗಳ ನಡುವೆ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈಗಾಗಲೇ ನ್ಯೂಜಿಲ್ಯಾಂಡ್ ತನ್ನ ಬ್ಯಾಟಿಂಗ್ ಇನ್ನಿಂಗ್ಸ್ ಮುಗಿಸಿದ್ದು, ಭಾರತ ತಂಡ ಅವರ ಸ್ಕೋರ್ ನ್ನು ಬೆನ್ನಟ್ಟುತ್ತಿದ್ದಾರೆ.

 

ನ್ಯೂಜಿಲ್ಯಾಂಡ್ ಒಟ್ಟು 7 ವಿಕೆಟ್ ಕಳೆದುಕೊಂಡು ಒಟ್ಟು 251 ರನ್ ಮಾಡಿದೆ, ಅದನ್ನು ಬೆನ್ನಟ್ಟಿದ ಭಾರತ 3 ವಿಕೆಟ್ ನಷ್ಟಕ್ಕೆ, 38 ಓವರ್ ನಲ್ಲಿ 183 ರನ್ ಮಾಡಿದೆ. ಭಾರತ ಪ್ರಮುಖ ವಿಕೆಟ್ ಗಳಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ನ್ನು ಕಳೆದುಕೊಂಡಿದೆ.

 

ಟಾಸ್ ಜಯಿಸಿದ್ದ ನ್ಯೂಜಿಲ್ಯಾಂಡ್ ಮೊದಲು ಬ್ಯಾಟಿಂಗ್ ನ್ನು ಆಯ್ಕೆ ಮಾಡಿತ್ತು. ಉತ್ತಮವಾಗಿ ಬೌಲಿಂಗ್ ಮಾಡಿದ ಭಾರತ ವರುಣ್ ಚಕ್ರವರ್ತಿ ಮತ್ತು ಕುಲದೀಪ್ ತಲಾ 2 ವಿಕೆಟ್ ಪಡೆದರೆ, ಶಮಿ ಮತ್ತು ಜಡೇಜಾ ತಲಾ 1 ವಿಕೆಟ್ ಪಡೆದರು.