IPL 2025 : ಈ ವರ್ಷದ ಐಪಿಎಲ್ ಪಂದ್ಯಗಳಲ್ಲಿ ಕೆಲವಷ್ಟು ಪಂದ್ಯಗಳು ಮಳೆಯಿಂದ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಬಿಸಿಸಿಐ ಮಾತ್ರ ಅದರದೇ ಆದ ನಿಯಮಗಳನ್ನು ಪಾಲಿಸುತ್ತದೆ. ಯಾವುದು ಆ ನಿಯಮ ಬನ್ನಿ ತಿಳಿಯೋಣ,
ಬೆಂಗಳೂರು ಮತ್ತು ಕೊಲ್ಕತ್ತಾದ ನಡುವಿನ ಉದ್ಘಾಟನಾ ರೋಚಕ ಪಂದ್ಯ ಇಂದು ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ. ಆದರೆ ಭಾರತೀಯ ಹವಾಮಾನ ವರದಿಯ ಪ್ರಕಾರ ಇವತ್ತು ಮಳೆ ಬರುವ ಸಾಧ್ಯತೆ ಹೆಚ್ಚು ಇರುವುದರಿಂದ ಪಂದ್ಯ ರದ್ದಾಗುವ ಸಾಧ್ಯತೆ ಇದೆ.
ಕೋಲ್ಕತಾದಲ್ಲಿ "ಆರೆಂಜ್ ಅಲರ್ಟ್" ಆಗಾಗಲೇ ಘೋಷಣೆ ಆಗಿರುವುದರಿಂದ ಸಂಜೆ ಮಳೆ ಬಂದರೆ ಬೆಂಗಳೂರು ಮತ್ತು ಕೊಲ್ಕತ್ತಾ ಅಭಿಮಾನಿಗಳಿಗೆ ನಿರಾಸೆಯಾಗಲಿದೆ. ತುಂಬಾ ಅದ್ದೂರಿಯಾಗಿ ನಡೆಯಲಿರುವ ಮೊದಲ ಐಪಿಎಲ್ ಪಂದ್ಯ ನೀರಿನಲ್ಲಿ ಕೊಚ್ಚಿ ಹೋಗಲಿದೆ.
ಬಿಸಿಸಿಐ ಪ್ರಕಾರ ಲೀಗ್ ಪಂದ್ಯಗಳಿಗಿಲ್ಲ ಮರು ಪಂದ್ಯ
ಹೌದು, ಲೀಗ್ ಮ್ಯಾಚುಗಳಿಗೆ ಮಳೆ ಅಡ್ಡಿಪಡಿಸಿದರೆ, ಮರು ಪಂದ್ಯ ಮಾಡಲು ಅವಕಾಶವಿಲ್ಲ. ಪಂದ್ಯದ ಆಟಗಳನ್ನು ನಿಗದಿತ ಸಮಯಕ್ಕಿಂತ 60 ನಿಮಿಷಗಳ ಕಾಲ ವಿಸ್ತರಿಸಿ ಕಾಯಬಹುದು. ಅಷ್ಟಾಗಿಯೂ ಪರಿಸ್ಥಿತಿ ಸರಿಯಾಗದೆ, ಒಂದು ವೇಳೆ ಪಂದ್ಯ ನಡೆಯದೆ ಇದ್ದರೆ, ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡುವ ಮೂಲಕ ದಿನದ ಪಂದ್ಯವನ್ನು ಕೊನೆಗೊಳಿಸುತ್ತಾರೆ. ರಾತ್ರಿ 10.56 ರಿಂದ 12.06 ರ ಒಳಗೆ 5 ಓವರ್ ನ ಪಂದ್ಯ ನಡೆಸಿ ಫಲಿತಾಂಶ ಕೊಡಲು ಪಂದ್ಯದ ಅಧಿಕಾರಿಗಳು ಪ್ರಯತ್ನ ಪಡಬಹುದು ಒಂದು ವೇಳೆ ಪಿಚ್ ಸೂಕ್ತವಾದರೆ.
ಪ್ಲೇಆಫ್ ಮತ್ತು ಫೈನಲ್ ನ ನಿಯಮ ಬೇರೇನೇ ಇದೆ
ಒಂದು ವೇಳೆ ಪ್ಲೇಆಫ್ ಅಥವಾ ಫೈನಲ್ ಪಂದ್ಯಗಳ ಸಮಯದಲ್ಲಿ ಮಳೆಯಾದರೆ, 120 ನಿಮಿಷ ಕಾಯಲು ಅವಕಾಶವಿದೆ. ಅಂದರೆ 2 ಗಂಟೆಗಳ ಕಾಯಬಹುದು. ಐಪಿಎಲ್ ನಿಯಮ 13.7.3 ರ ಪ್ರಕಾರ ಒಂದು ವೇಳೆ ಪಂದ್ಯ ರದ್ದಾದರೆ ಮರು ಪಂದ್ಯ ಪುನಃ ತಲಾ 20 ಓವರ್ ಗಳ ಪಂದ್ಯವಾಗಿರುತ್ತದೆ. ಇದರಿಂದ ಉಭಯ ತಂಡಗಳಿವೆ ಮತ್ತೊಂದು ಅವಕಾಶ ದೊರೆಯಲಿದೆ. ಅರ್ಹತಾ ಪಂದ್ಯ 1 ಮತ್ತು 2 ರದ್ದಾದರೆ ಹಾಗೂ ಎಲಿಮಿನೇಟರ್ ಮೀಸಲು ದಿನದಂದು ಕೂಡಾ ರದ್ದಾದರೆ, ಅಂಕ ಟೇಬಲ್ ನಲ್ಲಿ ಟಾಪ್ ಅಂಕ ಇರುವ ತಂಡವನ್ನು ವಿಜೇತರೆಂದು ಘೋಷಿಸುತ್ತಾರೆ.