17 March 2026
sudhavanikannada@gmail.com

ಖ್ಯಾತ ನಟ ಜಾಕಿ ಜಾನ್ ರೂ.4000 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ದಾನ!

  • 03 Jun 2025 01:02:18 AM

ಜಾಗತಿಕ ಮಟ್ಟದ ಅತೀ ಪ್ರಸಿದ್ಧ ನಟ ಜಾಕಿ ಚಾನ್ ಈಗ ದೊಡ್ಡ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಬ್ಲಾಕ್ ಬಸ್ಟರ್ ಚಲನಚಿತ್ರಕ್ಕಾಗಿ ಅಲ್ಲ, ಅವರ ಅಸಾಧಾರಣ ಔದಾರ್ಯಕ್ಕಾಗಿ. ಹೌದು, ಶಿಕ್ಷಣ, ವಿಪತ್ತು ಪರಿಹಾರ ಮತ್ತು ಪ್ರಾಣಿ ಕಲ್ಯಾಣ ಸೇರಿದಂತೆ ವಿವಿಧ ಕಾರ್ಯಗಳಿಗೆ 'ರೂ. 4000 ಕೋಟಿಗೂ ಹೆಚ್ಚು ಆಸ್ತಿ ದೇಣಿಗೆ' ನೀಡಿದ್ದಾರೆ ಎಂದು ವರದಿಯಾಗಿದೆ.

 

ಜಾಕಿ ಚಾನ್ ಈ ಹಿಂದೆ ಒಂದು ಸಂದರ್ಶನದಲ್ಲಿ 'ನಾನು ನನ್ನ ಮಗನಿಗೆ ಏನು ಕೊಡುವುದಿಲ್ಲ, ಅವನಲ್ಲಿ ಸಾಮರ್ಥ್ಯ ಇದ್ದರೆ ಅವನೇ ಸಂಪಾದಿಸುತ್ತಾನೆ, ಒಂದು ವೇಳೆ ಸಾಮರ್ಥ್ಯ ಇಲ್ಲದೆ ಹೋದರೆ ನನ್ನ ಹಣವನ್ನು ಮುಗಿಸುತ್ತಾನೆ' ಎಂದು ಹೇಳಿದ್ದರು.

 

'ನಮ್ಮ ಜೀವನದ ಕೆಲಸವು ಕೇವಲ ಖ್ಯಾತಿ ಅಥವಾ ಆರ್ಥಿಕ ಯಶಸ್ಸಿನ ಬಗ್ಗೆ ಅಲ್ಲ, ಬದಲಾಗಿ ಉತ್ತಮ ಪ್ರರಂಪರೆಯನ್ನು ಬಿಟ್ಟಹೋಗುವುದು' ಎಂದಿದ್ದಾರೆ. ಅವರ ಪ್ರಕಾರ ತಾನು ಮಾಡಿದ ಒಳ್ಳೆಯ ಕೆಲಸ ನಾನು ಸತ್ತ ನಂತರವು ಹಲವಾರು ಪೀಳಿಗೆಗಳಿಗೆ ಪ್ರೇರಣೆಯಾಗಿರಬೇಕು ಎನ್ನುವುದೇ ಉದ್ದೇಶ.

 

ಜಾಕಿ ಚಾನ್ ರವರಿಗೆ ಈಗ 70 ವರ್ಷ ಪ್ರಾಯವಾಗಿದ್ದು ಹಲವಾರು ಪ್ರಸಿದ್ಧ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ಅವರ ಆಕ್ಷನ್ ರೋಲ್ ಗಳಿಗೆ ಫಿದಾ ಆಗಿರದ ಅಭಿಮಾನಿಗಳೇ ಇಲ್ಲ. ಇವರು ಸ್ವತಃ ಜಾಕಿ ಚಾನ್ ಚಾರಿಟೇಬಲ್ ಫೌಂಡೇಶನ್ ನ್ನು ಕೂಡ ನಡೆಸುತ್ತಿದ್ದಾರೆ.