ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ದೇಶದ ಜನಪ್ರಿಯ ಟಿವಿ ಕಾರ್ಯಕ್ರಮ ‘ಆಪ್ ಕಿ ಅದಾಲತ್’ನಲ್ಲಿ ಭಾಗಿಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಕನ್ನಡ ನಟಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ.
ಖ್ಯಾತ ಪತ್ರಕರ್ತ ಇಂಡಿಯಾ ಟಿವಿಯ ರಜತ್ ಶರ್ಮಾ ನಡೆಸಿಕೊಡುವ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ದೇಶದ ಹಲವು ಪ್ರಮುಖ ರಾಜಕೀಯ ನಾಯಕರು, ನಟರು ಹಾಗೂ ಗಣ್ಯರು ಭಾಗವಹಿಸಿದ್ದಾರೆ. ಇದೀಗ ಯಶ್ ಅವರು ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಕಟಕಟೆ ಏರಿದ್ದಾರೆ.
ಕಾರ್ಯಕ್ರಮದಲ್ಲಿ ಯಶ್ ಅವರ ಸಿನಿ ಪಯಣ, ‘ಕೆಜಿಎಫ್’ ಬಳಿಕ ಅವರ ಪ್ಯಾನ್ ಇಂಡಿಯಾ ಖ್ಯಾತಿ ಹಾಗೂ ಮುಂಬರುವ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಶ್ನೆಗಳು ಕೇಳಲಾಗಿರುವುದಾಗಿ ವರದಿಯಾಗಿದೆ.
ಯಶ್ ಅವರ ಈ ವಿಶೇಷ ಸಂಚಿಕೆ ಆಗಸ್ಟ್ 15ರಂದು ರಾತ್ರಿ 10 ಗಂಟೆಗೆ ಇಂಡಿಯಾ ಟಿವಿಯಲ್ಲಿಪ್ರಸಾರವಾಗಲಿದೆ ಎಂದು ವರದಿಯಾಗಿದೆ.
ಕನ್ನಡ ಚಿತ್ರರಂಗದ ನಟರೊಬ್ಬರು ರಾಷ್ಟ್ರಮಟ್ಟದ ಈ ಜನಪ್ರಿಯ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಭಾಗಿಯಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.





