ಮುಂಬೈ: ಆಧ್ಯಾತ್ಮಿಕ ಹಿನ್ನೆಲೆಯ ‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬಿಡುಗಡೆಯಾಗಿ 39 ದಿನಗಳಲ್ಲಿ ಭಾರತದಲ್ಲಿ ಸುಮಾರು ₹215.65 ಕೋಟಿ ನೆಟ್ ಕಲೆಕ್ಷನ್ ದಾಖಲಿಸಿದೆ.
ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಆಧ್ಯಾತ್ಮಿಕ ಬದುಕಿನಿಂದ ಪ್ರೇರಣೆ ಪಡೆದಿರುವ ಈ ಚಿತ್ರ, ಕೇವಲ ಸುಮಾರು ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿದೆ. ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದರೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಭರ್ಜರಿ ವಸೂಲಿ ಮಾಡಿದೆ.
ಇದರೊಂದಿಗೆ ಸಿನಿಮಾ ನಿರ್ಮಾಪಕರಿಗೆ ದೊಡ್ಡ ಮಟ್ಟದ ಲಾಭ ತಂದುಕೊಟ್ಟಿದೆ. ಚಿತ್ರದ ವಿದೇಶಿ ಪ್ರದರ್ಶನವೂ ಸೆಪ್ಟೆಂಬರ್ 11ರಿಂದ ಆರಂಭವಾಗಿದ್ದು, ಒಟ್ಟಾರೆ ಗಳಿಕೆ ₹300 ಕೋಟಿ ತಲುಪುವ ನಿರೀಕ್ಷೆ ಮೂಡಿಸಿದೆ.





