17 March 2026
sudhavanikannada@gmail.com

ಬಾಲಿವುಡ್ ನ ಈ ಸುಂದರ ನಟಿ ಇನ್ನು ಮುಂದೆ ಮಾಲ್ಡೀವ್ಸ್ ಪ್ರವಾಸೋದ್ಯಮದ ರಾಯಭಾರಿ

  • 10 Jun 2025 03:40:16 PM

ಮಾಲ್ಡೀವ್ಸ್ ನ ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ 'ವಿಸಿಟ್ ಮಾಲ್ಡೀವ್ಸ್ (Visit Maldivs )' ಎಂದು ಕರೆಯಲ್ಪಡುವ 'ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಸಂಪರ್ಕ ನಿಗಮ', ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನು ದ್ವೀಪ ರಾಷ್ಟ್ರದ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ಅಧಿಕೃತವಾಗಿ ಘೋಷಿಸಿದೆ.

 

ಪ್ರಧಾನಿ ನರೇಂದ್ರ ಮೋದಿಯವರು ಜೂಲೈ ತಿಂಗಳಲ್ಲಿ ಮಾಲ್ಡೀವ್ಸ್ ಪ್ರವಾಸ ಮಾಡಲಿದ್ದಾರೆ. ಈ ಮಧ್ಯೆ 'ವಿಸಿಟ್ ಮಾಲ್ಡಿವ್' ಕತ್ರಿನಾ ಕೈಫ್ ನ್ನು ಪ್ರವಾಸೋದ್ಯಮದ ರಾಯಭಾರಿಯಾಗಿ ನೇಮಿಸಿದ್ದಾರೆ. ಭಾರತೀಯ ಚಲನಚಿತ್ರೋದ್ಯಮದ ಪ್ರಮುಖ ತಾರೆ ನಟಿ ಕತ್ರಿನಾ ಕೈಫ್ ಅವರನ್ನು ರಾಯಭಾರಿಯಾಗಿ ಹೊಂದಿರುವುದು ಸಂತಸದ ಸಂಗತಿ ಎಂದು ತನ್ನ ಪೋಸ್ಟ್ ನಲ್ಲಿ ತಿಳಿಸಿದೆ. 

ಮಾಲ್ಡೀವ್ಸ್ ಐಷಾರಾಮಿ ಮತ್ತು ನೈಸರ್ಗಿಕ ಸೌಂದರ್ಯದ ಪರಾಕಾಷ್ಠೆಯನ್ನು ಪ್ರತಿನಿಧಿಸುತ್ತದೆ. ಜಾಗತಿಕ ಪ್ರೇಕ್ಷಕರಿಗೆ ಅತ್ಯುತ್ತಮ ಪ್ರಯಾಣದ ಅನುಭವಗಳನ್ನು ತರುವ ಬಗ್ಗೆ ಸಹಾಯ ಮಾಡಲು ಉತ್ಸುಕನಾಗಿದ್ದೇನೆ ಎಂದು ಕತ್ರಿನಾ ತಿಳಿಸಿದ್ದಾರೆ