ಎಕ್ಕ ಸಿನಿಮಾದ ‘ಬ್ಯಾಂಗಲ್ ಬಂಗಾರಿ’ ಎಂಬ ಹಾಡು ಪ್ರೇಕ್ಷಕರ ಮನಸ್ಸು ಗೆದ್ದಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ಹಾಡಿಗೆ ಭರ್ಜರಿ ಸ್ಪಂದನೆ ದೊರೆತಿದ್ದು, ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ತಮ್ಮದೇ ರೀತಿಯಲ್ಲಿ ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.
ನಾಯಕ ಯುವರಾಜ್ ಕುಮಾರ್ ಹಾಗೂ ನಾಯಕಿ ಸಂಜನಾ ಆನಂದ್ ಈ ಹಾಡಿನಲ್ಲಿ ಮೆರೆದಿದ್ದು, ಅವರ ಜೋಡಿಯ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ 22 ದಿನಗಳಲ್ಲೇ ಈ ಹಾಡು 10 ಮಿಲಿಯನ್ (1 ಕೋಟಿ) ವೀಕ್ಷಣೆಗಳನ್ನು ದಾಖಲಿಸಿದ್ದು, ಯೂಟ್ಯೂಬ್‌ನ ಟಾಪ್ ಮ್ಯೂಸಿಕ್ ವಿಡಿಯೋ ವರ್ಗದಲ್ಲಿ 29ನೇ ಸ್ಥಾನ ಪಡೆದುಕೊಂಡಿದೆ.
ಇಷ್ಟು ಕಡಿಮೆ ಸಮಯದಲ್ಲಿ ಇಂತಹ ಯಶಸ್ಸು ಪಡೆಯುವ ಮೂಲಕ ‘ಬ್ಯಾಂಗಲ್ ಬಂಗಾರಿ’ ಕನ್ನಡ ಸಿನಿಪ್ರಪಂಚದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಈ ಹಾಡು ಈಗಾಗಲೇ ನಾನಾ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ.