06 July 2025 | Join group

ಮದುವೆಯಾಗದೆ ಇದ್ದರೂ ಅವಳಿ ಮಕ್ಕಳಿಗೆ ಜನ್ಮ ನೀಡಲಿರುವ ನಟಿ ಭಾವನಾ

  • 05 Jul 2025 01:27:29 AM

ನಟಿ ಭಾವನಾ ಬಗ್ಗೆ ಗೊತ್ತಿರದವರು ಯಾರು ಇಲ್ಲ. ಮಲಯಾಳಂ ಚಿತ್ರರಂಗದಿಂದ ತನ್ನ ಚಿತ್ರರಂಗ ಪ್ರವಾಸ ಪ್ರಾರಂಭಿಸಿದವರು. ತಮ್ಮ ಮೊದಲ ಚಿತ್ರ 'ನಮ್ಮಲ್' (2002) ಚಿತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡರು. ಅವರು ಮಲಯಾಳಂ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳ ಚಿತ್ರಗಳಲ್ಲಿ ಪ್ರಮುಖ ಪಾತ್ರವಹಿಸಿ ಜನಪ್ರಿಯತೆ ಪಡೆದಿದ್ದಾರೆ.

 

ಆದರೆ ಇದೀಗ ಭಾವನಾ ಹೊಸ ಸುದ್ದಿಯಲ್ಲಿದ್ದಾರೆ. ಇಲ್ಲಿಯವರೆಗೆ ಮದುವೆಯಾಗದ 40 ವರ್ಷ ಪ್ರಾಯದ ನಟಿ ಭಾವನಾ ಇದೀಗ 6 ತಿಂಗಳ ತುಂಬು ಗರ್ಭಿಣಿ. ಅದರಲ್ಲೂ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಈ ನಟಿ. ತಾಯಿಯಾಗಬೇಕೆಂಬ ಹಂಬಲ ಮಾತ್ರ ಇವರಲ್ಲಿ ಬಹಳ ದಿನದಿಂದ ಇತ್ತು.

 

ಹೀಗಾಗಿ, ಐವಿಎಫ್ ಇನ್ ವಿಟ್ರೊ ಫಲೀಕರಣ(IVF) ಮೂಲಕ ಗರ್ಭಿಣಿಯಾಗಿದ್ದಾರೆ. 6 ತಿಂಗಳ ಗರ್ಭಿಣಿಯಾಗಿರುವ ಭಾವನಾ ಈ ವರ್ಷದ ಕೊನೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು ನನ್ನ ಮಕ್ಕಳಿಗೆ ತಂದೆ ಇಲ್ಲದಿದ್ದರೂ, ಬೇಷರತ್ತಾದ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಅವರು ಬೆಳೆಯಲಿದ್ದಾರೆ ಎಂದು ತಿಳಿಸಿದ್ದಾರೆ.