ದೆಹಲಿ: 2022ರಲ್ಲಿ ನುಪುರ್ ಶರ್ಮಾ ಅವರ ಹೇಳಿಕೆ ನಂತರ ದೇಶಾದ್ಯಂತ ಉದ್ವಿಗ್ನತೆ ಮೂಡಿದ್ದ ಕಾಲಘಟ್ಟದಲ್ಲಿ, ನಡೆದ ಉದಯಪುರ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಕುರಿತು ಆಧಾರಿತ 'ಉದಯಪುರ ಫೈಲ್ಸ್' ಚಿತ್ರ ನಿರ್ಮಾಣಗೊಂಡಿತ್ತು.
ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯ ಕುರಿತಂತೆ ಆಧಾರಿತವಾಗಿರುವ 'ಉದಯಪುರ ಫೈಲ್ಸ್' ಸಿನಿಮಾದ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಮುಂದಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ ಜಮಿಯತು ಉಲಮಾ-ಎ-ಹಿಂದ್ ಹಾಗೂ ಪತ್ರಕರ್ತ ಪ್ರಶಾಂತ್ ಟಾಂಡನ್ ಅವರು, ಚಿತ್ರವು ಧಾರ್ಮಿಕ ಸಂವೇದನೆಗೆ ಧಕ್ಕೆಯಾಗಬಹುದೆಂಬ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದರು.
ಅದನ್ನು ಪರಿಗಣಿಸಿದ ಹೈಕೋರ್ಟ್, “ಸಿನಿಮಾ ಬಿಡುಗಡೆ ಮುಂಚೆ, ಅರ್ಜಿದಾರರು ಸರ್ಕಾರದ ಬಳಿ ಚಿತ್ರ ಪ್ರಮಾಣಪತ್ರವನ್ನು ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು” ಎಂದು ತಿಳಿಸಿದೆ. ಸರ್ಕಾರ ಈ ಕುರಿತು ಒಂದು ವಾರದೊಳಗೆ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೋರ್ಟ್ ಸೂಚಿಸಿದೆ.
ಸದ್ಯಕ್ಕೆ ಚಿತ್ರ ಬಿಡುಗಡೆ ಸ್ಥಗಿತಗೊಳಿಸಲಾಗಿದ್ದು, ಸರ್ಕಾರದ ನಿರ್ಧಾರದ ಬಳಿಕ ಮುಂದಿನ ಕ್ರಮ ನಿರ್ಧಾರವಾಗಲಿದೆ.