24 July 2025 | Join group

ಖ್ಯಾತ ಸಿನಿಮಾ ನಟ ಕೋಟಾ ಶ್ರೀನಿವಾಸ ರಾವ್ ನಿಧನ: 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕೀರ್ತಿ

  • 13 Jul 2025 03:36:58 PM

ದಕ್ಷಿಣ ಭಾರತದ ಖ್ಯಾತ ನಟ ಕೋಟ ಶ್ರೀನಿವಾಸ ರಾವ್(83) ಜುಲೈ 13 ರ ಭಾನುವಾರ ನಿಧನರಾದರು.

 

ಹಲವಾರು ಭಾಷೆಗಳಲ್ಲಿ ನಟಿಸಿದ್ದ ಇವರು, 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. 2023 ರಲ್ಲಿ ಬಿಡುಗಡೆಯಾದ 'ಸುವರ್ಣ ಸುಂದರಿ' ಚಿತ್ರ ಇವರು ನಟಿಸಿದ ಕೊನೆಯ ಚಿತ್ರವಾಗಿದೆ.

 

ಖಳನಾಯಕ, ಪೋಷಕ ಪಾತ್ರ, ಹಾಸ್ಯನಟನಾಗಿ ತಮಿಳು, ತೆಲುಗು, ಹಿಂದಿ, ಕನ್ನಡ ಸಿನಿಮಾಗಳಲ್ಲಿ ನಟಿಸಿ, ಪ್ರೇಕ್ಷಕರ ಮನಗೆದಿದ್ದರು.

 

ನಟನೆ ಮಾತ್ರವಲ್ಲದೆ ರಾಜಕೀಯದಲ್ಲೂ ಸೇವೆ ಸಲ್ಲಿಸಿದ್ದ ಇವರು 1999 ರಿಂದ 2004 ರವರೆಗೆ ಪೂರ್ವ ವಿಜಯವಾಡದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

 

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಹೈದರಾಬಾದಿನ ತನ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.