ಐಶ್ವರ್ಯಾ ರೈ ಒಂದು ಕಾಲದಲ್ಲಿ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದ ಸ್ಟಾರ್ ನಟಿ. ಬಾಲಿವುಡ್ ಕ್ವೀನ್ ಆಗಿದ್ದ ಐಶ್ವರ್ಯಾ ರೈ ಬಚ್ಚನ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇಂತಹ ನಟಿಗಳು ತಮ್ಮ ಜೊತೆಗೆ ವಿಶ್ವಾಸಾರ್ಹ ಭದ್ರತಾ ಸಿಬ್ಬಂದಿಯನ್ನು ಇಟ್ಟುಕೊಳ್ಳಲೇಬೇಕಾಗುತ್ತದೆ. ಅವರು ದಿನದ 24 ಗಂಟೆಯೂ ಭದ್ರತೆಗೆ ಸಂಬಂಧಪಟ್ಟ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ.
ಯಾರು ಐಶ್ವರ್ಯಾ ರೈ ಯ ಬಾಡಿಗಾರ್ಡ್?
ಶಿವರಾಜ್ ಅವರು ಹಲವು ವರ್ಷಗಳಿಂದ ಬಚ್ಚನ್ ಕುಟುಂಬಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಐಶ್ ಹೊರಗೆ ಹೋದಾಗಲೆಲ್ಲಾ, ದೊಡ್ಡ ಜನಸಂದಣಿ ಮತ್ತು ಅನಿರೀಕ್ಷಿತ ಅಪಾಯಗಳಿಂದ ನಟಿಯನ್ನು ಸುರಕ್ಷಿತವಾಗಿರಿಸುವುದು ಅವರ ಮುಖ್ಯ ಕೆಲಸವಾಗಿರುತ್ತದೆ. ಸೆಲೆಬ್ರಿಟಿಯವರ ಅಂಗರಕ್ಷಕರಾಗಿ ಕೆಲಸ ಮಾಡುವುದು ಬಹಳ ಅಪಾಯದ ಕೆಲಸ. ಪ್ರತಿ ನಿಮಿಷ ಅವರ ಗಮನ ಸೆಲೆಬ್ರಿಟಿ ಮತ್ತು ಸುತ್ತಮುತ್ತಲಿನ ವ್ಯಕ್ತಿಗಳ ಮೇಲೆ ಇರಬೇಕಾಗುತ್ತದೆ. ಸ್ವಲ್ಪವೂ ಗಮನವನ್ನು ಬೇರೆ ಕಡೆಗೆ ತಿರುಗಿಸುವಂತಿಲ್ಲ. ದೈಹಿಕವಾಗಿ ತುಂಬಾ ಸದೃಢರಾಗಿರಬೇಕು ಮತ್ತು ಯಾವುದೇ ಒತ್ತಡದ ಪರಿಸ್ಥಿತಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು. ಈ ಕೆಲಸವು ಬಹಳಷ್ಟು ಅಪಾಯವನ್ನು ಒಳಗೊಂಡಿರುತ್ತದೆ.
ಅದೇ ಕಾರಣಕ್ಕೆ ಸೆಲೆಬ್ರಿಟಿಯವರ ಅಂಗರಕ್ಷಕರು ದೊಡ್ಡ ಮೊತ್ತದ ಸಂಬಳ ಪಡೆಯೋದು. ಶಿವರಾಜ್ ಕೂಡ ಕಡಿಮೆಯಿಲ್ಲ. ಪ್ರತಿಷ್ಠಿತ ಕಂಪನಿಗಳ ಮ್ಯಾನೇಜರ್ ಗಳು ಪಡೆಯುವ ಸಂಬಳಕ್ಕಿಂತ ಅಧಿಕ ಮೊತ್ತದ ಹಣ ಶಿವರಾಜ್ ಪಡೆಯುತ್ತಿದ್ದಾರೆ. ತಿಂಗಳಿಗೆ ಸರಿಸುಮಾರು 7 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಂದರೆ ವರ್ಷಕ್ಕೆ 84 ಲಕ್ಷ ರೂ. ವೇತನ ಪಡೆಯುವ ಶಿವರಾಜ್ ಅಧಿಕ ಸಂಬಳ ಪಡೆಯುವ ಅಂಗರಕ್ಷಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಶಿವರಾಜ್ ರವರು ಬಚ್ಚನ್ ಕುಟುಂಬಕ್ಕೆ ತುಂಬಾ ಹತ್ತಿರದವರು ಸಹ, ಹೇಗೆಂದರೆ 2015 ರಲ್ಲಿ ಇವರಿಗೆ ವಿವಾಹವಾದಾಗ, ಐಶ್ವರ್ಯ ರೈ ಸ್ವತಃ ಮದುವೆಗೆ ಹಾಜರಾಗಿ ಆಶೀರ್ವಾದಿಸಿದ್ದಾರೆ. ಕೇವಲ ಅಂಗರಕ್ಷಕ ಮಾತ್ರವಲ್ಲದೆ, ವೈಯಕ್ತಿಕ ಸಂಪರ್ಕವು ಬಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ರಾಜೇಂದ್ರ ಧೋಲೆ ಸಹ ಐಶ್ ಸೆಕ್ಯೂರಿಟಿ ಟೀಮ್ ನಲ್ಲಿ ಭದ್ರತಾ ತಜ್ಞರಾಗಿ ಕೆಲಸ ಮಾಡುತ್ತಾರೇ ಮತ್ತು ಅವರ ಸಂಬಳ ವರ್ಷಕ್ಕೆ ರೂ 1 ಕೋಟಿ ಎಂದು ಬಾಲಿವುಡ್ ಡಿಜಿಟಲ್ ಮಾಧ್ಯಮಗಳಲ್ಲಿ ವರದಿಯಾಗಿದೆ.