ಇಂದು ಆಶ್ಚರ್ಯಕರ ರೀತಿಯಲ್ಲಿ ಬಿಸಿರೋಡಿನ ಆಡಳಿತ ಸೌಧದ ಎರಡನೇ ಮಹಡಿಯ ಉಪನೋಂದಣಿ ಕಚೇರಿಯಲ್ಲಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ ಅವರನ್ನು ನೋಡಿ ಜನರಲ್ಲಿ ಚರ್ಚೆ ಚಟುವಟಿಕೆ ಜೋರಾಯಿತು.
ತಾಯಿ ಜೊತೆ ಬಂದಿದ್ದ ರಾಧಿಕಾ ಅವರಿಗೆ ಕಚೇರಿಯಲ್ಲಿ ವಿಶೇಷ ಗೌರವ ಸಿಕ್ಕಿತು. ಕೇವಲ ಅರ್ಧ ಗಂಟೆಯೊಳಗೆ ತಮ್ಮ ಕೆಲಸ ಮುಗಿಸಿಕೊಂಡು ಮತ್ತೆ ವಾಪಸಾದರು.
ಮೊದಲು, “ರಾಧಿಕಾ ಜಮೀನು ಖರೀದಿ ರಿಜಿಸ್ಟ್ರೇಷನ್‌ಗೆ ಬಂದಿದ್ದಾರೆ” ಎಂಬ ಸುದ್ದಿ ಜನರಲ್ಲಿ ಹರಡಿತು. ಏಕೆಂದರೆ, ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ನೋಂದಣಿ ಕಚೇರಿ ಅಂದರೆ ಜಮೀನು ರಿಜಿಸ್ಟ್ರೇಷನ್ ಅಷ್ಟೆ ಎಂಬ ಕಲ್ಪನೆ ಬೇರೂರಿದೆ.
ಆದರೆ, ನಿಜಕ್ಕೆ ಬಂದರೆ — ಅವರು ಹೊಸ ಜಮೀನು ಖರೀದಿಸಲು ಬಂದದ್ದಲ್ಲ, ಬದಲಾಗಿ, ಹಿಂದೆ ಖರೀದಿಸಿದ್ದ ಜಮೀನಿನ ಮೇಲೆ ತೆಗೆದುಕೊಂಡಿದ್ದ ಸಾಲವನ್ನು (ಅಡಮಾನ) ತೀರಿಸಿ, ಅದರ ರಶೀದಿ ಪಡೆಯಲು ಬಂದಿದ್ದರು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಕಚೇರಿಯ ಸಿಬ್ಬಂದಿ ಹಾಗೂ ಅಲ್ಲಿ ಇದ್ದ ಸಾರ್ವಜನಿಕರು ಅವಕಾಶ ಕಳೆದುಕೊಳ್ಳದೇ ರಾಧಿಕಾ ಅವರ ಜೊತೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು.