22 October 2025 | Join group

ಮುದ್ದುಲಕ್ಷ್ಮೀ ಧಾರಾವಾಹಿ ಮೂಲಕ ಹೆಸರುವಾಸಿಯಾಗಿದ್ದ ನಟ ಧ್ರುವಂತ್ ಬಿಗ್ ಬಾಸ್ ಸೀಸನ್ 12 ರ ಮನೆಗೆ ಎಂಟ್ರಿ

  • 29 Sep 2025 06:40:47 PM

ಬೆಂಗಳೂರು: ಮಂಗಳೂರು ಮೂಲದ ಚರಿತ್ ಯಾನೆ ಧ್ರುವಂತ್ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಮತ್ತು ಮಲಯಾಳಂ ಸಿನಿಮಾದಲ್ಲೂ ನಟಿಸಿದ್ದಾರೆ. ಮಾಡೆಲ್ ಆಗಿದ್ದ ಧ್ರುವಂತ್ ಕಿರುತೆರೆಗೆ ಪಾದಾರ್ಪಿಸಿದ್ದು ಲವ್ ಲವಿಕೆ ಎಂಬ ಧಾರವಾಹಿಯ ಮೂಲಕ. ಇಲ್ಲಿ ಅಭಿಯಿಸಿದ ಇವರು ಲಕ್ಕಿ ಎಂದೇ ಹೆಸರುವಾಸಿಯಾಗಿದ್ದರು.

 

ನಂತರ ಅಮ್ಮ ಎಂಬ ಧಾರವಾಹಿಯಲ್ಲಿ ನವೀನ್, ಸರ್ಪ ಸಂಬಂಧ ಎಂಬ ಧಾರವಾಹಿಯಲ್ಲಿ ಭರಣ ಮತ್ತು ಮುದ್ದುಲಕ್ಷ್ಮಿ ಎಂಬ ಧಾರವಾಹಿಯಲ್ಲಿ ಡಾ||ಧ್ರುವಂತ್ ಎಂಬ ಪಾತ್ರವನ್ನು ವಹಿಸಿ ನಟಿಸಿದ್ದಾರೆ. ಹೀಗೆ ನಟನಾ ಕ್ಷೇತ್ರದಲ್ಲಿ ಇವರು ಎರಡು ಬಾರಿ ಅತ್ಯುತ್ತಮ ನಟ ಮತ್ತು ತನ್ನ ನಟನೆಗಾಗಿ ಮೋಸ್ಟ್ ಪ್ರಾಮಿಸಿಂಗ್ ಲೀಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

 

ತಂದೆ ಬಾಳಪ್ಪ ಪೂಜಾರಿ ಮತ್ತು ತಾಯಿ ಪ್ರೇಮ ದಂಪತಿಯ ಇವರಿಗೆ ಕರ್ನಾಟಕದ ಜನತೆ ಮತ್ತು ಕರಾವಳಿ ಪ್ರೇಕ್ಷಕರು ಬಿಗ್ ಬಾಸ್ 12 ಗೆದ್ದು ಬರಲಿ ಎಂದು ಆಶೀರ್ವದಿಸಿದ್ದಾರೆ.