Chhaava Movie, April 06, 2025 : ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಆಧಾರಿತ ಸಿನಿಮಾ ಇತೀಚಿನ ದಿನಗಳಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಇತರ ಕೇಂದ್ರದ ನಾಯಕರುಗಳು ಈ ಸಿನಿಮಾವನ್ನು ಪಾರ್ಲಿಮೆಂಟ್ ಒಳಗಡೆ ವೀಕ್ಷಣೆ ಮಾಡಿದ್ದರು.
ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅವರ ಬ್ಲಾಕ್‌ಬಸ್ಟರ್ 'ಛಾವಾ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 790 ಕೋಟಿ ರೂ. ಗಳಿಸಿತು. ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅವರ ನಟನೆಗೆ ದೇಶ ವಿದೇಶದಾದ್ಯಂತ ಭಾರಿ ಮೆಚ್ಚುಗೆ ಕೂಡ ದೊರೆಕಿತ್ತು.
ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯಶಾಲಿ ಪುತ್ರ ಸಂಭಾಜಿ ಮಹಾರಾಜರ ಕಥೆಯನ್ನು ಆಧರಿಸಿದ 'ಛಾವಾ' ಚಿತ್ರದಲ್ಲಿ ವಿಕ್ಕಿ ಕೌಶಲ್ ರವರ ನಟನೆ ಭಾರಿ ಅದ್ಭುತವಾಗಿತ್ತು. ಛತ್ರಪತಿ ಶಿವಾಜಿ ತನ್ನ ಆಡಳಿತಾವಧಿಯಲ್ಲಿ ಪಟ್ಟ ಕಷ್ಟ, ಹಿಂದೂ ಧರ್ಮ ಸಂಸ್ಥಾಪನೆಗೆ ನೀಡಿದ ಕೊಡುಗೆ ಮತ್ತು ಇನ್ನಿತರ ಸಾಹಸ ವಿಷಯಗಳನ್ನು ಒಳಗೊಂಡ ಸಿನಿಮಾ, ರಾಜಕೀಯ ವಲಯದಲ್ಲಿ ತುಂಬಾ ಸಂಚಲನ ಮಾಡಿತ್ತು.
ಆದರೆ, ಸಿನಿಮಾ ಥಿಯೇಟರಿನಲ್ಲಿ ನೋಡಲು ಸಾಧ್ಯವಾಗದವರಿಗೆ ಈಗ ಒಳ್ಳೆಯ ಸಂದೇಶ ದೊರಕಿದೆ. ಇತ್ತೀಚಿನ ವರದಿಯ ಪ್ರಕಾರ, ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರವು ಈಗ ಏಪ್ರಿಲ್ 11 ರಂದು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆಯಂತೆ.
ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ಸಿನಿಮಾ ಈಗ ನೆಟ್ ಫ್ಲಿಕ್ಸ್ ಬರುವುದರಿಂದ ಸಿನಿಮಾ ಪ್ರಿಯರಿಗೆ ಮತ್ತಷ್ಟು ಖುಷಿ ತರಲಿದೆ.