ಮೊದಲ ಕಾಂತಾರ ಚಿತ್ರದ ಯಶಸ್ಸಿನ ನಂತರ ಹೊಂಬಾಳೆ ಫಿಲ್ಮ್ಸ್ ‘ಕಾಂತಾರ ಚಾಪ್ಟರ್-1’ 2023ರ ಆರಂಭದಲ್ಲಿ ಘೋಷಿಸಿತು. ಇದು ಮೊದಲ ಚಿತ್ರದ ಪ್ರೀಕ್ವೆಲ್ ಆಗಿದೆ. ರಿಷಬ್ ಶೆಟ್ಟಿ ಕಥೆ ಬರೆದು, ನಿರ್ದೇಶಿಸಿ ನಟಿಸಿದ ಈ ಚಿತ್ರ ಸರಿಸುಮಾರು 125 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣಗೊಂಡಿದೆ.
ಅರವಿಂದ್ ಕಶ್ಯಪ್ ಕ್ಯಾಮರಾ ವರ್ಕ್ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿದೆ. ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇಲ್ಲಿಯವರೆಗೆ ಕಾಂತಾರ-1 ಸಿನಿಮಾ ಬಿಡುಗಡೆಯಾದ 11 ದಿನಕ್ಕೆ ಬರೋಬ್ಬರಿ 655 ಕೋಟಿ ಗಳಿಕೆ ಕಂಡಿದೆ. ಇಂದಿಗೂ ಸಹ ಕಾಂತಾರ ಕ್ರೇಜ್ ಮಾತ್ರ ಕಡಿಮೆನೇ ಆಗ್ತಿಲ್ಲ. ಕಾಂತಾರ ಅಭಿಮಾನಿಗಳು ಮುಗಿಬಿದ್ದು ಕಾಂತಾರ ಸಿನಿಮಾ ಮಂದಿರಕ್ಕೆ ಹೋಗುತ್ತಿದ್ದಾರೆ. ಇಂದಿಗೂ ದೇಶ ವಿದೇಶದಾದ್ಯಂತ ಕಾಂತಾರ ಚಾಪ್ಟರ್-1 ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.