ಕಾಂತಾರದ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವದ ಅಭಯ : ಸುತ್ತಮುತ್ತ ಶತ್ರುಗಳಿದ್ದಾರೆ, 5 ತಿಂಗಳ ಗಡುವಲ್ಲಿ ಒಳ್ಳೆದು ಮಾಡುತ್ತೇನೆ.

  • 08 Apr 2025 10:37:33 AM
* ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಮಂಗಳೂರಿನಲ್ಲಿ ನಡೆದ ಪಂಜುರ್ಲಿ ನೇಮೋತ್ಸವಕ್ಕೆ ಭಾಗಿ.
* ಬೆಳಗಿನ ಜಾವದವರೆಗೂ ದೈವದ ಉತ್ಸವದಲ್ಲಿ ಭಾಗಿಯಾದ ನಟ ರಿಷಬ್ ಶೆಟ್ಟಿ.
* ಶತ್ರುಗಳಿಂದ ನಿನ್ನ ಸಂಸಾರ ಹಾಳು ಮಾಡಲು ಯತ್ನ.
* ಕಾಂತಾರ 2 ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

 

ಮಂಗಳೂರು, ಏಪ್ರಿಲ್ 08 : ರಿಷಬ್ ಶೆಟ್ಟಿ ಇತ್ತೀಚಿಗೆ ಮಂಗಳೂರಿನ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು. ರಿಷಬ್ ಶೆಟ್ಟಿ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಿಂದಲೇ ದೈವದ ಉತ್ಸವಕ್ಕೆ ಬಂದಿದ್ದರಂತೆ.

 

ಬೆಳಗಿನ ಜಾವದವರೆಗೂ ದೈವದ ಉತ್ಸವದಲ್ಲಿ ಭಾಗಿಯಾದ ನಟ ರಿಷಬ್ ಶೆಟ್ಟಿ, ಪಂಜುರ್ಲಿ ದೈವದಲ್ಲಿ ತನ್ನ ಕಷ್ಟವನ್ನು ನಿವಾರಣೆ ಮಾಡಪ್ಪ ಪಂಜುರ್ಲಿ ಎಂದು ಬೇಡಿಕೊಂಡಿದ್ದಾರೆ. ಇದಕ್ಕೆ ಪ್ರತಿ ಉತ್ತರವಾಗಿ ಪಂಜುರ್ಲಿ "ಶತ್ರುಗಳಿಂದ ನಿನ್ನ ಸಂಸಾರ ಹಾಳು ಮಾಡಲು ಯತ್ನ" ನಡೆಯುತ್ತಿದೆ ಎಂದು ಎಚ್ಚರಿಕೆಯ ನುಡಿಯನ್ನು ನೀಡಲಾಗಿದೆ.

 

ಹೌದು, ಪಂಜುರ್ಲಿ ಈ ರೀತಿಯ ನುಡಿಯನ್ನು ಹೇಳಿದ್ದು ಕಾಂತಾರ ಸಿನಿಮಾ ನಟನಿಗೆ. ರಿಷಬ್ ಶೆಟ್ಟಿ ನಾಯಕ ನಟನಾಗಿ ನಟಿಸಿದ ಕಾಂತಾರ ಸಿನಿಮಾ ದೇಶ ವಿದೇಶಗಳಲ್ಲಿ ಬಹಳ ಸಡ್ಡು ಮಾಡಿತ್ತು. ಪಂಜುರ್ಲಿ ದೈವದ ಕಾರ್ಣಿಕದ ಬಗ್ಗೆ ಆಧಾರಿತ ಈ ಸಿನಿಮಾ ಬಹಳ ಮೆಚ್ಚುಗೆಯನ್ನು ಗಳಿಸಿತ್ತು.

 

ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನನಗೆ ಹರಕೆ ನೀಡುವ ಪ್ರಾರ್ಥನೆ ಮಾಡು, ಐದು ತಿಂಗಳ ಗಡುವಲ್ಲಿ ಒಳ್ಳೆದು ಮಾಡುತ್ತೇನೆ ಎಂದು ಪಂಜುರ್ಲಿ ನುಡಿದಿದೆ. ಬೆಳಗಿನ ಜಾವದವರೆಗೆ ನಡೆದ ಈ ನೇಮೋತ್ಸವದಲ್ಲಿ ನಟ, ಗಂಧ ಪ್ರಸಾದ ಸ್ವೀಕಾರ ಸಮಯದಲ್ಲಿ ದೈವದ ಮುಂದೆ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾರೆ.

 

ರಿಷಬ್ ಶೆಟ್ಟಿ ದಂಪತಿ ಪಂಜುರ್ಲಿ ದೈವದ ಅಭಯದಿಂದ ಮನಸ್ಸಿಗೆ ಸ್ವಲ್ಪ ನೆಮ್ಮದಿ ತಂದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಮಾಡುತ್ತಿದ್ದು, ಅಕ್ಟೋಬರ್ 02, 2025 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.