06 July 2026 |

ಮೂರನೇ ಮದುವೆ ಬಂಧನಕ್ಕೆ ನಟ ಆಮಿರ್ ಖಾನ್; ಗೌರಿ ಸ್ಪ್ರಾಟ್ ಜೊತೆ ಖಾಸಗಿ ಸಮಾರಂಭದಲ್ಲಿ ವಿವಾಹ

  • 05 Jul 2026 06:28:08 PM

ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ ಅವರು ತಮ್ಮ ದೀರ್ಘಕಾಲದ ಗೆಳತಿ ಗೌರಿ ಸ್ಪ್ರೇಟ್ಟ್ ಅವರೊಂದಿಗೆ ಭಾನುವಾರ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಸರಳ ಹಾಗೂ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಬ್ಬರೂ ಪರಸ್ಪರ ಸಂಬಂಧದಲ್ಲಿದ್ದು, ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ನೆರವೇರಿತು.  

 

ಇದು ಆಮಿರ್ ಖಾನ್ ಅವರ ಮೂರನೇ ವಿವಾಹವಾಗಿದೆ. ಇದಕ್ಕೂ ಮೊದಲು ಅವರು ರೀನಾ ದತ್ತ ಹಾಗೂ ಕಿರಣ್ರಾವ್ ಅವರನ್ನು ವಿವಾಹವಾಗಿದ್ದರು. ಇಬ್ಬರೊಂದಿಗೂ ವಿಚ್ಛೇದನವಾದ ಬಳಿಕವೂ ಕುಟುಂಬದ ಜವಾಬ್ದಾರಿಗಳನ್ನು ಹಂಚಿಕೊಂಡು ಉತ್ತಮ ಸಂಬಂಧವನ್ನು ಮುಂದುವರಿಸಿಕೊಂಡಿದ್ದಾರೆ ಎಂದು ಅವರು ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ.  

 

ವಿವಾಹ ಸಮಾರಂಭಕ್ಕೆ ಕುಟುಂಬದ ಸದಸ್ಯರು ಹಾಗೂ ಆಪ್ತರು ಮಾತ್ರ ಹಾಜರಾಗಿದ್ದು, ಉದ್ಯಮಿ ಮುಕೇಶ್ಅಂಬಾನಿ ಸೇರಿದಂತೆ ಕೆಲ ಗಣ್ಯರು ಶುಭಾಶಯ ಕೋರಲು ಆಗಮಿಸಿದರೆಂದು ವರದಿಯಾಗಿದೆ.  

 

ಸಾಮಾಜಿಕ ಜಾಲತಾಣಗಳಲ್ಲಿ ಈ ವಿವಾಹದ ಕುರಿತು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಕೆಲವರು ಆಮಿರ್ ಖಾನ್ ಅವರಿಗೆ ಶುಭಾಶಯ ಕೋರಿದ್ದರೆ, ಇನ್ನೂ ಕೆಲವರು ಟೀಕಿಸಿದ್ದಾರೆ.