ಸಾರಾ ಅಲಿ ಖಾನ್ ಭೇಟಿ ಕೊಟ್ಟ ಚಂದ್ರಮೌಳೇಶ್ವರ ದೇವಸ್ಥಾನದ ವಿಶೇಷತೆ ಏನು ? ಇಲ್ಲಿದೆ ವಿವರ

  • 08 Apr 2025 08:49:53 PM

ಕೆಲ ದಿನಗಳ ಹಿಂದೆ ಬಾಲಿವುಡ್ ನ ಖ್ಯಾತ ನಟಿ, ಸೈಫ್ ಅಲಿ ಖಾನ್ ಮಗಳು ಹುಬ್ಬಳ್ಳಿಯ ಪ್ರತಿಷ್ಠಿತ ಚಂದ್ರಮೌಳೇಶ್ವರ ದೇವಸ್ಥಾನ ಭೇಟಿ ಕೊಟ್ಟ ಸಂಗತಿ ಬಹಳಷ್ಟು ಜನರ ಕುತೂಹಲಕ್ಕೆ ಕಾರಣವಾಗಿತ್ತು. ಸಾರಾ ಅಲಿ ಖಾನ್ ದರ್ಶನ ಪಡೆದ ದೇವಸ್ಥಾನದ ಶಕ್ತಿಯ ಬಗ್ಗೆ ತಿಳಿಯಲು ಜನ ಅಶಕ್ತಿದಾಯಕರಾಗಿದ್ದರೆ. 

 

ಯಾವುದೇ ಸುದ್ದಿ ಗದ್ದಲವಿಲ್ಲದೆ, ದಿಡೀರನೆ ಭೇಟಿ ನೀಡಿದ ಸಾರಾ ಅಲಿ ಖಾನ್, ಬಹಳಷ್ಟು ಹೊತ್ತು ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ಇತೀಚಿನ ದಿನಗಳಲ್ಲಿ ಯಾಕೆ ಬಾಲಿವುಡ್ ನಟಿಯರು ದಕ್ಷಿಣ ಭಾರತದ ಪ್ರತಿಷ್ಠಿತ ಹಿಂದೂ ದೇವಸ್ಥಾನಗಳಿಗೆ ಸಂದರ್ಶನ ನೀಡುವ ಬಗ್ಗೆ ಜನರಲ್ಲಿ ಉತ್ಸುಕತೆ ಹೆಚ್ಚಿದೆ.

 

ಚಂದ್ರಮೌಳೇಶ್ವರ ದೇವಸ್ಥಾನದ ಹಿನ್ನಲೆ
900 ವರುಷ ಹಳೆಯದಾದ ದೇವಸ್ಥಾನವಾಗಿದೆ ಇದು. ಚಾಲುಕ್ಯರು ಕಟ್ಟಿದ ದೇವಸ್ಥಾನ ಇದಾಗಿದೆ ಎಂದು ಪುರಾಣದಲ್ಲಿ ನಮೂದಿಸಲಾಗಿದೆ. ದೇವಾಲಯ ಕಪ್ಪು ಗ್ರಾನೈಟ್ ಸ್ತಂಭಗಳಿಂದ ಕೂಡಿದೆ ಮತ್ತು ಇತರೆ ಶಿವ ದೇವಾಲಯಗಳಿಗಿಂತ ವಿಭಿನ್ನವಾಗಿದೆ.

 

ಚಂದ್ರಮೌಳೇಶ್ವರ ದೇವಸ್ಥಾನದ ವಿಶೇಷತೆ?
ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಚಂದ್ರ ಮೌಳೇಶ್ವರ ದೇವಸ್ಥಾನ, ಹುಬ್ಬಳ್ಳಿ ಜಿಲ್ಲೆಯ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದು. ಈ ದೇವಸ್ಥಾನದಲ್ಲಿ ವಿಶೇಷ ಶಿವ ಲಿಂಗವಿದೆ. ಈ ರೀತಿಯ ಶಿವಲಿಂಗ ದಕ್ಷಿಣ ಭಾರತದಲ್ಲೇ ಇಲ್ಲವಂತೆ. ಹೌದು, ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಚತುರ್ಮುಖ ಶಿವಲಿಂಗವಿದೆ. ದಕ್ಷಿಣ ಭಾರತದಲ್ಲಿ ಇದೇ ಪ್ರಥಮ ದೇವಸ್ಥಾನ ಎನ್ನುತ್ತಾರೆ ಅಲ್ಲಿನ ಅರ್ಚಕರು.

 

ದೇವಸ್ಥಾನದಲ್ಲಿ ಕಲ್ಲಿನಲ್ಲಿ ಕೆತ್ತಿದ್ದ ಗಣಪತಿ ದೇವರ ವಿಗ್ರಹವಿದ್ದು ಅದು ಕೂಡ ಬಹಳ ಪ್ರಾಮುಖ್ಯತೆ ಪಡೆದಿದೆ. ಈ ದೇವಸ್ಥಾನದಲ್ಲಿ 3 ಗೋಪುರವಿದ್ದು, ಕಾಣಲು ಎಲ್ಲಾ ಗೋಪುರಗಳು ಒಂದೇ ತರ ಕಂಡರೂ, ಅದರ ವಿನ್ಯಾಸ ಬೇರೆ ಬೇರೆಯಾಗಿದೆ. 

 

 

ಸಾರಾ ಅಲಿ ಖಾನ್ ಭೇಟಿಯ ಕಾರಣ 
ಚಂದ್ರಮೌಳೇಶ್ವರ ದೇವಸ್ಥಾನದ ಅರ್ಚಕರು ಹೇಳುವ ಪ್ರಕಾರ, ಸಾರಾ ಅಲಿ ಖಾನ್ ಬಹಳಷ್ಟು ಸಮಯ ಧ್ಯಾನದಲ್ಲಿ ತೊಡಗಿಸಿಕೊಂಡಿದ್ದರು. ಶಿವ ಲಿಂಗದ ಎದುರು 10 ರಿಂದ 15 ನಿಮಿಷ ಮತ್ತು ಗಣಪತಿ ದೇವರ ಮುಂದೆಯೂ ಧ್ಯಾನ ಮಾಡಿದ್ದಾರೆ. ದೇವಸ್ಥಾನದ ಬಗ್ಗೆ ಹಲವಾರು ವಿಷಯಗಳನ್ನು ಅರ್ಚಕರ ಮೂಲಕ ತಿಳಿದುಕೊಂಡಿದ್ದಾರೆ. ಇವರ ದಿಡೀರ್ ಭೇಟಿಗೆ ದೇವಸ್ಥಾನದಲ್ಲಿರುವ ಚತುರ್ಮುಖ ಶಿವಲಿಂಗದ ದರ್ಶನ ಪಡೆಯುವ ಉದ್ದೇಶವೇ ಪ್ರಮುಖ ಕಾರಣವೆಂದು ತಿಳಿದುಬಂದಿದೆ.

 

 

ಮತ್ತೊಂದು ಬಾಲಿವುಡ್ ನಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ 
ಕೆಲ ದಿನಗಳ ಹಿಂದೆ, ಬಾಲಿವುಡ್ ನ ಕತ್ರಿನಾ ಕೈಫ್ ಸುಬ್ರಮಣ್ಯ ದೇವಸ್ಥಾನಕ್ಕೆ ದಿಡೀರ್ ಭೇಟಿ ನೀಡುವುದರ ಮೂಲಕ ಸುದ್ದಿಯಲ್ಲಿದ್ದರು. ಸಾನಿಧ್ಯದಲ್ಲಿ ಆಶ್ಲೇಷ ಪೂಜೆ ಮತ್ತು ಇನ್ನಿತರ ಸೇವೆಗಳನ್ನು ಮಾಡುವುದರ ಮೂಲಕ ದೇವರ ಕೃಪೆಗೆ ಪಾತ್ರರಾಗಿದ್ದಾರೆ.