23 July 2026 |

ತುಳು ಚಿತ್ರರಂಗಕ್ಕೆ ಮತ್ತೊಂದು ಗರಿ: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ಇಂಬು’ ಅತ್ಯುತ್ತಮ ತುಳು ಚಿತ್ರದ ಪ್ರಶಸ್ತಿ

  • 21 Jul 2026 01:40:38 PM

ಮಂಗಳೂರು: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತುಳು ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗಿದೆ. 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಶಿವಧ್ವಜ್ ನಿರ್ದೇಶನ ಹಾಗೂ ಪ್ರಶಾಂತ್ ಶೆಟ್ಟಿನಿರ್ಮಾಣದ ತುಳು ಚಲನಚಿತ್ರ ‘ಇಂಬು’ ಅತ್ಯುತ್ತಮ ತುಳು ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. 

 

ಚಿತ್ರದಲ್ಲಿ ಜನಪ್ರಿಯ ನಟ ನವೀನ್ ಡಿ. ಪಡೀಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ರಾಷ್ಟ್ರಮಟ್ಟದಲ್ಲಿ ಈ ಗೌರವ ಲಭಿಸಿರುವುದು ತುಳು ಚಿತ್ರರಂಗಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.

 

ಇದು ಕರಾವಳಿಯ ದರ್ಶನದ ಪಾತ್ರಿ ಹಾಗೂ ಪ್ರಕೃತಿಯ ನಡುವಿನ ಸಂಬಂಧವನ್ನು ಆಧರಿಸಿ ನಿರ್ಮಿಸಲಾದ ಚಿತ್ರವಾಗಿದೆ.  

 

ಚಿತ್ರವು ಕರಾವಳಿಯ ದ್ವೀಪಾರಾಧನೆ, ದ್ವೀಪಾರಾಧನೆಯಲ್ಲಿ ತೊಡಗಿರುವ ಜನರ ಬದುಕು, ಪರಿಸರ ಸಂರಕ್ಷಣೆ ಹಾಗೂ ಮಾನವ–ಪ್ರಕೃತಿ ಸಂಬಂಧವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಿದೆ. 

 

ದ್ವೀಪಗಳ ಸಾಂಸ್ಕೃತಿಕ ಪರಂಪರೆ ಮತ್ತು ಪರಿಸರದ ಮಹತ್ವವನ್ನು ಒತ್ತಿಹೇಳುವ ಈ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ದೊರೆತಿರುವುದು ತುಳು ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಸಾಧನೆಯಾಗಿದೆ.