ನೀವು ಒಂದು ವೇಳೆ Gpay, PhonePe, Paytm ಬಳಕೆದಾರರು ಆಗಿದ್ದರೆ ಈ 5 ಸುರಕ್ಷತಾ ಸಲಹೆಗಳು ನಿಮಗೆ ಗೊತ್ತಿರಲೇಬೇಕು.

  • 08 Feb 2025 12:45:10 AM

Gpay, PhonePe, Paytm ಬಳಕೆದಾರರು ಆಗಿದ್ದರೆ ಈ 5 ಸುರಕ್ಷತಾ ಸಲಹೆಗಳು ನಿಮಗಾಗಿ.

UPI Payment India : ಭಾರತದ ಡಿಜಿಟಲ್ ಆರ್ಥಿಕ ಕ್ರಾಂತಿಯಲ್ಲಿ ಬಹುದೊಡ್ಡ ಕ್ರಾಂತಿ ಅಂದರೆ ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಪಾವತಿ ವಿಧಾನ. ಬೀದಿ ವ್ಯಾಪಾರಿಗಳಿಂದ ಹಿಡಿದು ಬಹು ದೊಡ್ಡ ಬಿಸಿನೆಸ್ ಗಳು UPI ಪೇಮೆಂಟ್ ಸಿಸ್ಟಮ್ ಗೆ ಮೊರೆ ಹೋಗಿದ್ದಾರೆ. ಇದರಿಂದ ಜನರಿಗೆ ಬಹಳಷ್ಟು ಪ್ರಯೋಜನವಾಗಿರೋದು ಸತ್ಯದ ಸಂಗತಿ.

 

ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಕೆಲವೇ ಬಟನ್ ಗಳನ್ನು ಒತ್ತಿ ತ್ವರಿತವಾಗಿ,ಯಾವುದೇ ಒತ್ತಡವಿಲ್ಲದೆ ಮತ್ತು ಸುರಕ್ಷಿತವಾಗಿ ಹಣವನ್ನು ಕಳಿಸಬಹುದು ಮತ್ತು ಸ್ವೀಕರಿಸಬಹುದು. UPI ಪೇಮೆಂಟ್ ಗಳು ಬೇರೆ ಯಾವುದೇ ರೀತಿಯ ಆನ್ ಲೈನ್ ಪೇಮೆಂಟ್ ವಿಧಾನಕ್ಕಿಂತ ಬಹಳ ವೇಗವಾಗಿದೆ ಮತ್ತು ಸುಲಭವಾಗಿದೆ. ಭಾರತದ ಬಹುತೇಕ ಎಲ್ಲಾ ಬ್ಯಾಂಕುಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಆದರೆ ನಾವು ದಿನ ಕೇಳುವ ಕೆಟ್ಟ ಸಮಾಚಾರವೆಂದರೆ ಜನ ಸೈಬರ್ ವಂಚಕರಿಗೆ ಮೋಸಹೋಗುವುದು.!

 

ಆದರೆ ಸಮಸ್ಯೆ ಇರೋದು ಎಲ್ಲಿ ಅಂದರೆ, ಆನ್ ಲೈನ್ ವಂಚಕರು ಜನರನ್ನು ಮೋಸಗೊಳಿಸಲು ಮತ್ತು ಹಣವನ್ನು ಕದಿಯಲು ಈ ರೀತಿಯ ಪೇಮೆಂಟ್ ಸಿಸ್ಟಮ್ ಮೇಲೆ ಕಣ್ಣಿಟ್ಟಿರೋದು. ಆನ್ ಲೈನ್ ವಹಿವಾಟುಗಳು ಜಾಸ್ತಿಯಾದಂತೆ, ಆನ್ ಲೈನ್ ವಂಚನೆಗಳು ಸಹ ಹೆಚ್ಚಾಗುತ್ತಿದೆ. ನಾವು ದಿನ ನಿತ್ಯ ನೋಡುವಂತೆ, ಸೈಬರ್ ವಂಚಕರು ದಿನಾಲೂ ಹೊಸ ಯೋಜನೆಗಳೊಂದಿಗೆ ಜನರನ್ನು ಮೋಸ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಆದ್ದರಿಂದ ನಾವು ಈ ರೀತಿಯ ಪೇಮೆಂಟ್ ವಿಧಾನಗಳನ್ನು ಬಳಸುವಾಗ ಬಹಳಷ್ಟು ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರಬೇಕು.

 

ಹಾಗಾದರೆ ಬನ್ನಿ ನೋಡೋಣ, ಯಾವೆಲ್ಲಾ ಅಂಶಗಳನ್ನು ನೆನಪಿಟ್ಟುಕೊಳ್ಳಬೇಕು ಈ ರೀತಿಯ UPI ಪೇಮೆಂಟ್ ಅಪ್ಲಿಕೇಶನ್ ಬಳಕೆದಾರರು.

1. ಯಾವಾಗಲು ವಿಶ್ವಾಸಾರ್ಹ UPI ಪೇಮೆಂಟ್ ಆ್ಯಪ್‌ ಗಳನ್ನೂ ಬಳಸಿ :

ಈಗಿನ ಡಿಜಿಟಲ್ ಜಗತ್ತಿನಲ್ಲಿ ನಿಮಗೆ ಹಲವಾರು UPI ಅಪ್ಲಿಕೇಶನ್ ಗಳು ಸಿಗುತ್ತವೆ ಆದರೆ, ನೀವು ಯಾವತ್ತೂ ಸುರಕ್ಷಿತವಾದ ಮತ್ತು ವಿಶ್ವಾಸಾರ್ಹವಾದ ಆ್ಯಪ್‌ ಗಳನ್ನೂ ಮಾತ್ರ ಬಳಸಿ. ನಿಮಗೆ ಆದರೆ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾದರೆ ಬ್ಯಾಂಕ್ ಸಿಬಂದಿ ಅಥವಾ ಅದರ ಬಗ್ಗೆ ಚೆನ್ನಾಗಿ ಗೊತ್ತು ಇರುವವರ ಜೊತೆ ಮಾಹಿತಿ ಪಡೆದು ಆಮೇಲೆ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ. ಕೆಲವು ಜನಪ್ರಿಯ UPI ಪೇಮೆಂಟ್ ಅಪ್ಲಿಕೇಶನ್ ಗಳು Google Pay , PhonePe ಮತ್ತು Paytm ಸೇರಿವೆ. ಈ ಅಪ್ಲಿಕೇಶನ್ ಗಳು ಭಾರತದ ಪ್ರಮುಖ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳ ಜೊತೆ ಕೆಲಸ ಮಾಡುತ್ತದೆ.

 

2. ಹಣ ಪಾವತಿ ಮಾಡುವ ಮೊದಲು ಸ್ವೀಕರಿಸುವವರ ವಿವರಗಳನ್ನು ಪರಿಶೀಲಿಸಬೇಕು :

ನೀವು ಹಣ ಪಾವತಿ ಮಾಡುವ ಮೊದಲು ಯಾರಿಗೆ ಕಳುಸುತ್ತಿರೋ ಅವರ ವಿವರಗಳನ್ನು 2 ರಿಂದ 3 ಸಲ ಸರಿಯಾಗಿ ಬಹಳ ಎಚ್ಚರಿಕೆಯಿಂದ ಪರಿಶೀಲಿಸಲೇಬೇಕು. ಅದು ವ್ಯಕ್ತಿಯ ಹೆಸರು ಆಗಿರಬಹುದು ಅಥವಾ ಯಾವುದೇ ಕಂಪನಿ ಹೆಸರು ಇರಬಹುದು ಅದರ ಹೆಸರು, UPI ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ಗುರುತಿಸಬೇಕು. ನಿಮ್ಮ UPI ಅಪ್ಲಿಕೇಶನ್ ನಲ್ಲಿ "ಪಾವತಿ ವಿಳಾಸವನ್ನು ಪರಿಶೀಲಿಸಿ" ಆಯ್ಕೆಯನ್ನು ಬಳಸಿಕೊಂಡು ಸಹ ಸ್ವೀಕರಿಸುವವರ ಗುರುತನ್ನು ಪರಿಶೀಲಿಸಬಹುದು.

 

3. UPI ಪಿನ್ ಯಾವಾಗಲು ಸುರಕ್ಷಿತವಾಗಿರಿಸಬೇಕು :

ನಿಮ್ಮ ಅಕೌಂಟ್ ನ ಹಣಕ್ಕೆ ಬಹು ದೊಡ್ಡ ಕೀಲಿಕೈ ಅಂದರೆ ಅದು ನಿಮ್ಮ ಅಪ್ಲಿಕೇಶನ್ ನ ಪಿನ್. ಅದನ್ನು ಯಾವಾಗಲು ಸುರಕ್ಷಿತವಾಗಿರಿಸಬೇಕು. ಯಾವುದೇ ಕಾರಣಕ್ಕೂ ಪಿನ್ ನ್ನು ಯಾರೊಂದಿಗೆ ಹಂಚಬಾರದು. ನಿಮ್ಮ ಪಿನ್ ನಂಬರ್ ನ್ನು ತಪ್ಪಿಯೂ ಯಾವುದೇ ಅಸುರಕ್ಷಿತ ವೆಬ್ ಸೈಟ್ ಅಥವಾ ಅಪ್ಲಿಕೇಶನ್ ನಲ್ಲಿ ಎಂಟರ್ ಮಾಡಲೇ ಬಾರದು. ನಿಯಮಿತವಾಗಿ ನೀವು ಪಿನ್ ಬದಲಾಯಿಸುತ್ತಲೇ ಇರಬೇಕು. 

 

4. ಫಿಶಿಂಗ್ ಹಗರಣಗಳ ಬಗ್ಗೆ ಬಹಳಷ್ಟು ಜಾಗರೂಕರಾಗಬೇಕು :

ಫಿಶಿಂಗ್ ಹಗರಣಕ್ಕೆ ಇತೀಚಿನ ದಿನಗಳಲ್ಲಿ ಬಲಿಯಾಗುವವರ ಸಂಖ್ಯೆ ಬಹಳಷ್ಟು. ಇದಕ್ಕೆ  ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಸಹ ಬಹಳಷ್ಟು ಜನ ಮೋಸಹೋಗುತ್ತಿದ್ದರೆ. ನಿಮ್ಮ UPI ಪಿನ್ ಅಥವಾ ಬ್ಯಾಂಕ್ ಖಾತೆ ನಂಬರ್ ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸ್ಕ್ಯಾಮರ್‌ಗಳು ಪಡೆಯುವ ವಿಧಾನಕ್ಕೆ  ಫಿಶಿಂಗ್ ಎಂದು ಕರೆಯುತ್ತಾರೆ. ಇಲ್ಲಿ ನಿಮಗೆ ಕಳಿಸುವ  ಇಮೇಲ್ ಅಥವಾ ಮೆಸೇಜ್ ಆಗಲಿ ಇಲ್ಲವೇ ಕರೆಗಳು, ನಿಮ್ಮ ಬ್ಯಾಂಕ್ ಅಥವಾ ಪಾವತಿ ಅಪ್ಲಿಕೇಶನ್‌ನಂತಹ ಕಾನೂನುಬದ್ಧ ಮೂಲದಿಂದ ಬಂದಂತೆ ಕಾಣುತ್ತವೆ.

ವಾಸ್ತವಾಗಿ ಅದು ವಂಚಕರುಗಳಿಂದ ಬಂದಿರುತ್ತವೆ, ಆದ್ದರಿಂದ ನೀವು ಯಾವಾಗಲು ಅನುಮಾನಾಸ್ಪದ ಇಮೇಲ್, ಮೆಸೇಜ್ ಅಥವಾ ಯಾವುದೇ ಲಿಂಕ್ ಗಳನ್ನು ಕ್ಲಿಕ್ ಮಾಡಲೇಬಾರದು. ಬ್ಯಾಂಕಿನಿಂದ ಎಂದು ಹೇಳುತ್ತಾ ಅನುಮಾನಾಸ್ಪದ  ಕರೆಗಳು ಬಂದರೆ ನಿಮ್ಮ ಯಾವುದೇ ವಿವರ ಅಥವಾ ಒಟಿಪಿ ಕೊಡಲೇ ಬಾರದು. ತಕ್ಷಣ ಬ್ಯಾಂಕ್ ಅಥವಾ ನಿಮ್ಮ ಸಂಬಂಧಪಟ್ಟ ಹಣಕಾಸು ಸಂಸ್ಥೆಗೆ ಕರೆ ಮಾಡಿ ತಿಳಿಸಬೇಕು.

 

5. ನಿಮ್ಮ ಮೊಬೈಲ್ ಅಥವಾ ಅಪ್ಲಿಕೇಶನ್ ಗಳನ್ನು ಸುರಕ್ಷಿತವಾಗಿರಿಸಿ :

ಯಾವ ಮೊಬೈಲ್ ನಲ್ಲಿ ಈ ರೀತಿಯ ಅಪ್ಲಿಕೇಶನ್ ಗಳು ಇದ್ದರೆ, ಆ ಮೊಬೈಲ್ ಫೋನ್ ನ್ನು ಅಪ್ ಟು ಡೇಟ್ ಇಟ್ಟುಕೊಳ್ಳಿ. ಬಹಳ ಪ್ರಬಲವಾದ ಪಾಸ್ ವರ್ಡ್ ಹಾಕಿ. ಫೇಸ್ ರೆಕಗ್ನಿಷನ್ ( ಮುಖ ಗುರುತಿಸುವಿಕೆ ) ಅಥವಾ ಫಿಂಗರ್ ಪ್ರಿಂಟ್ ಸೆಟ್ ಮಾಡಿಕೊಳ್ಳಿ. ಯಾವಾಗಲೂ ಸಾಮಾಜಿಕ ಜಾಲ ತಾಣಗಳಲ್ಲಿ ನಿಮ್ಮ UPI ಕೋಡ್ ಅಥವಾ ಬ್ಯಾಂಕ್ ಖಾತೆಯನ್ನು ಹಂಚಿಕೊಳ್ಳಬೇಡಿ. ಯಾವುದೇ ರೀತಿಯ ಮೆಸೇಜ್ ಅಥವಾ ಲಿಂಕ್ ತೆರೆಯುವ ಮೊದಲು ಸರಿಯಾಗಿ ಪರಿಶೀಲಿಸಿ. 

 

ಈ ಎಲ್ಲಾ ವಿಧಾನಗಳನ್ನು ಅನುಸರಿಸುವದರಿಂದ ನಾವು ನಮ್ಮ ಬ್ಯಾಂಕ್ ಸಂಬಂಧಪಟ್ಟ ವಿಷಯಗಳನ್ನು ಸುರಕ್ಷಿತವಾಗಿರಿಸಬಹುದು. ಈ ವಿಚಾರಗಳಲ್ಲಿ ಸ್ವಲ್ಪವೂ ಅಸಡ್ಡೆ ತೋರಿಸಿದರೆ ನಾವು ಮೋಸ ಹೋಗುವುದು ಖಚಿತ.