16 January 2026 | Join group

ಹಿತ್ತಲಗಿಡ ಮದ್ದಲ್ಲವೇ? ನೆಗಡಿಯಿಂದ ಬೊಜ್ಜುವರೆಗೆ ಮನೆಮದ್ದುಗಳ ಸಂಪೂರ್ಣ ಮಾಹಿತಿ

  • 11 Jan 2026 05:09:24 PM

"ಹಿತ್ತಲಗಿಡ ಮದ್ದಲ್ಲ " ಎಂಬ ಗಾದೆ ಮಾತು ನಾವೆಲ್ಲ ಕೇಳಿದ್ದೇವೆ. ಆದರೆ ನಮ್ಮ ಮನೆಯ ಹಿತ್ತಲ ಗಿಡಗಳೇ ಅದೆಷ್ಟೋ ಔಷಧಿಯ ಗುಣಗಳನ್ನು ಹೊಂದಿವೆ. ಅಂತಹ ಗಿಡಗಳಿಂದಲೇ ನಮ್ಮ ಆರೋಗ್ಯವನ್ನು ಕಾಪಾಡಬಹುದು.

 

ಶೀತ (ನೆಗಡಿ)

* ಹಾಲಿಗೆ ಸ್ವಲ್ಪ ಅರಶಿನ ಬೆಲ್ಲ ಸೇರಿಸಿ ಕೆಂಪಗೆ ಕಾಯಿಸಿ ಕುಡಿಯಿರಿ.

* ಶುಂಠಿ ರಸದಲ್ಲಿ ಜೇನುತುಪ್ಪ ಸೇರಿಸಿ ನೆಕ್ಕುವುದರಿಂದ ನೆಗಡಿಯ ಕಾಟದಿಂದ ತಪ್ಪಿಸಿಕೊಳ್ಳಬಹುದು.

* ದೊಡ್ಡಪತ್ರೆ, ತುಳಸಿ ಎಲೆಯ ರಸ, ವೀಳ್ಯದೆಲೆಯ ರಸವನ್ನು ಸೇರಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ತಿನ್ನುವುದರಿಂದ ನೆಗಡಿ ಕಡಿಮೆಯಾಗುವುದು.

 

ಮೊಡವೆಗಳು

* ಸೇಬು ಹಣ್ಣಿನ ತಿರುಳನ್ನು ಅರೆದು ಚೆನ್ನಾಗಿ ಪೇಸ್ಟ್ ತಯಾರಿಸಿ ಅದನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಮಾಯವಾಗಿ ಮುಖದ ಕಾಂತಿ ಹೆಚ್ಚುತ್ತದೆ.

* ಹಾಲಿನ ಕೆನೆಗೆ ಕಡಲೆ ಹಿಟ್ಟು, ಅರಶಿನ, ನಿಂಬೆರಸ ಬೆರೆಸಿ ಚೆನ್ನಾಗಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುವುದರೊಂದಿಗೆ ಮೊಡವೆಗಳು ದೂರವಾಗುತ್ತವೆ.

* ಕಿತ್ತಳೆ ಹಣ್ಣಿನ ರಸ ಮತ್ತು ಸಿಪ್ಪೆಯನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ದೂರವಾಗುತ್ತವೆ.

 

ಹಲ್ಲು ನೋವು

* ಲವಂಗದ ಎಣ್ಣೆಯನ್ನು ಆಗಾಗ ವಸಡುಗಳಿಗೆ ಹಚ್ಚುವುದರಿಂದ ಹಲ್ಲು ನೋವು, ವಸಡಿನ ಬಾಧೆ ದೂರವಾಗುತ್ತದೆ.

* ಹಲ್ಲು ನೋವು ಬಂದ ಕಡೆ ಲವಂಗವನ್ನು ಕಚ್ಚಿ ಇಟ್ಟುಕೊಳ್ಳುವುದರಿಂದ ನೋವು ಶಮನ ಹೊಂದುತ್ತದೆ.

* ಸೀಬೆ ಹಣ್ಣಿನ ಸೇವನೆಯಿಂದ ಹಲ್ಲುಗಳು ಗಟ್ಟಿಗೊಳ್ಳುತ್ತವೆ.

 

ಕೆಮ್ಮು

* ಅನಾನಸು ಹಣ್ಣನ್ನು ಆಗಾಗ ಸೇವಿಸುವುದರಿಂದ ಗಂಟಲು ನೋವು ಹಾಗೂ ಕೆಮ್ಮು ದೂರವಾಗುತ್ತದೆ.

* ಅಮೃತ ಬಳ್ಳಿಯ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ನೆಕ್ಕುವುದರಿಂದ ಕೆಮ್ಮು, ನೆಗಡಿ ದೂರವಾಗುತ್ತದೆ.

* ತುಳಸಿರಸ, ಕರಿಮೆಣಸಿನ ಪುಡಿಯನ್ನು ಬೆರೆಸಿ ಆಗಾಗ ಸೇವಿಸುವುದರಿಂದ ಕೆಮ್ಮು ದೂರವಾಗುತ್ತದೆ.

* ಹಸಿ ಮೂಲಂಗಿಯನ್ನು ತುರಿದು ಅದರ ತುರಿಗೆ ಉಪ್ಪು, ನಿಂಬೆರಸ ಸೇರಿಸಿ ತಿನ್ನುವುದರಿಂದ ಕೆಮ್ಮು, ನೆಗಡಿ ದೂರವಾಗುವುದು.

 

ಗ್ಯಾಸ್ಟ್ರಿಕ್ ಟ್ರಬಲ್ 

* ಬೆಳ್ಳುಳ್ಳಿಯನ್ನು ಆಹಾರದೊಂದಿಗೆ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಟ್ರಬಲ್ ದೂರವಾಗುತ್ತದೆ.

* ಆಹಾರದಲ್ಲಿ ಶುಂಠಿಯ ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಇರಬಹುದು.

* ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಬೇಕು ಇದರಿಂದ ಗ್ಯಾಸ್ಟ್ರಿಕ್ ತೊಂದರೆ ಉಂಟಾಗುವುದಿಲ್ಲ.

 

ಬೊಜ್ಜು

* ಖಾಲಿ ಹೊಟ್ಟೆಗೆ ಟೊಮೆಟೊ ಹಣ್ಣನ್ನು ತಿನ್ನುವುದರಿಂದ ಬೊಜ್ಜು ಕರಗುವುದು.

* ಕರಿಬೇವಿನ ಸೊಪ್ಪಿನ ಪುಡಿಯನ್ನು ಪ್ರತಿದಿನ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಬೊಜ್ಜು ಕರಗುವುದು.

* ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಬೊಜ್ಜು ಕರಗುತ್ತದೆ.

* ನಿಂಬೆರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ದೇಹದಲ್ಲಿ ಸೇರಿಕೊಂಡಿರುವ ಅನಗತ್ಯ ಕೊಬ್ಬು ನಿವಾರಣೆಯಾಗುತ್ತದೆ.

* ಪ್ರತಿದಿನ ಬೆಳ್ಳುಳ್ಳಿಯ ಸೇವನೆಯಿಂದ ದೇಹದ ಕೊಬ್ಬನ್ನು ನಿವಾರಿಸಿಕೊಳ್ಳಬಹುದು.

* ಹಳೆ ಜೇನುತುಪ್ಪವನ್ನು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುವುದು.

 

ಬೆವರು ಗುಳ್ಳೆಗಳು

* ಬೆವರು ಗುಳ್ಳೆಗಳು ಕಾಣಿಸಿಕೊಂಡರೆ ಅಕ್ಕಿ ತೊಳೆದ ನೀರಿನಿಂದ ಗುಳ್ಳೆಗಳು ಇರುವ ಜಾಗವನ್ನು ತೊಳೆಯಬೇಕು. ಹೀಗೆ ಸುಮಾರು 15 ದಿನಗಳ ಕಾಲ ಮಾಡಿದರೆ ಗುಳ್ಳೆಗಳು ಮಾಯವಾಗುತ್ತದೆ.

* ತೆಂಗಿನ ಹಾಲಿನಲ್ಲಿ ಗುಳ್ಳೆಗಳನ್ನು ತೊಳೆಯಬೇಕು ಆಗ ಗುಳ್ಳೆಗಳು ಶಮನವಾಗುತ್ತವೆ.

 

ತಲೆನೋವು

* ದೊಡ್ಡಪತ್ರೆ ಸೊಪ್ಪು ಮತ್ತು ಒಂದೆರಡು ಹರಳು ಉಪ್ಪು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತಲೆಸುತ್ತು ದೂರವಾಗುತ್ತದೆ.

 

ಕೂದಲಿನ ಸಮಸ್ಯೆ

* ಕೊಬ್ಬರಿ ಎಣ್ಣೆಗೆ ಮೆಂತ್ಯ ಬೆರೆಸಿ ಚೆನ್ನಾಗಿ ಕಾಯಿಸಿ, ಪ್ರತಿದಿನ ಕೂದಲಿಗೆ ಮೆಂತೆ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದಿಲ್ಲ.

* ದಂಟಿನ ಸೊಪ್ಪಿನ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು.

* ದಾಸವಾಳದ ಎಲೆಗಳನ್ನು ಅರೆದು ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು.

* ಎಳ್ಳೆಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವುದಿಲ್ಲ.

 

ಸಣ್ಣಪುಟ್ಟ ರೋಗಗಳಿಗೆಲ್ಲ ವೈದ್ಯರ ಬಳಿ ತೆರಳಿ, ಔಷಧಿಗಳಿಗೆ ನಮ್ಮ ದೇಹವನ್ನು ಹೊಂದಿಸಿಕೊಳ್ಳುವ ಬದಲು, ಮನೆಮದ್ದು ಬಳಸಿ ಆರೋಗ್ಯವಂತರಾಗಲು ಪ್ರಯತ್ನಿಸೋಣ. ತೀರಾ ಅಗತ್ಯವಿದ್ದರೆ ಮಾತ್ರ ವೈದ್ಯರ ಸಲಹೆ ಪಡೆಯುವುದು ಉತ್ತಮ.

Authored By: ಸಂಧ್ಯಾ ಪೂಜಾರಿ