ಕೈಗೆ ಅಥವಾ ಕಾಲಿಗೆ ಕಪ್ಪು ದಾರವನ್ನು ಯಾವ ರಾಶಿಯವರು ಕಟ್ಟಿದರೆ ಅಶುಭ, ಬನ್ನಿ ತಿಳಿಯೋಣ

  • 15 Mar 2025 06:38:40 PM

ಕೈಗೆ ಅಥವಾ ಕಾಲಿಗೆ ದಾರವನ್ನು ಕಟ್ಟುವುದು ಸರ್ವೇಸಾಮಾನ್ಯ. ಕೆಲವರು ಕೆಂಪು ದಾರ ಕಟ್ಟಿದರೆ ಇನ್ನು ಕೆಲವರು ಹಳದಿ ದಾರವನ್ನು ಕಟ್ಟುತ್ತಾರೆ. ದಾರದಲ್ಲೂ ಹಲವಾರು ಬಣ್ಣಗಳಿವೆ. ಆದರೆ ಕೆಲವು ರಾಶಿಗಳಿಗೆ ಕೆಲವು ಬಣ್ಣದ ದಾರಗಳು ಹಿಡಿಸಿದರೆ, ಕೆಲವು ಬಣ್ಣದ ದಾರಗಳು ಹಿಡಿಸಲ್ಲ. ಅದನ್ನು ಕೈ ಅಥವಾ ಕಾಲಿಗೆ ಕಟ್ಟಿದರೆ ಅಶುಭ ಎನ್ನುತ್ತಾರೆ ಕೆಲ ತಿಳಿದ ಹಿಂದೂ ಧಾರ್ಮಿಕ ಜ್ಞಾನಿಗಳು.

 

ಹಾಗಾದರೇ, ಬನ್ನಿ ನೋಡೋಣ ಯಾವ ರಾಶಿಯವರಿಗೆ ಕಪ್ಪು ದಾರವನ್ನು ಕಟ್ಟಿದರೆ ಅಶುಭ ಎಂಬುದನ್ನು,

 

ಮೇಷ ರಾಶಿ

ಮೇಷ ರಾಶಿಯವರು ಕಪ್ಪು ದಾರವನ್ನು ಕಟ್ಟಬಾರದಂತೆ, ಈ ದಾರವನ್ನು ಕಟ್ಟುವುದರಿಂದ ಆರ್ಥಿಕ ಹಾನಿ ಉಂಟಾಗಬಹುದಂತೆ. ಇದರಿಂದ ಜೀವನದಲ್ಲಿ ಬಡತನಕ್ಕೆ ಗುರಿಯಾಗಿ ಆರ್ಥಿಕ ನಷ್ಟದಿಂದ ಬಳಲಬೇಕಾಗುತ್ತದೆ ಎನ್ನುತ್ತಾರೆ.

 

ಕಟಕ ರಾಶಿ

ಕಟಕ ರಾಶಿಯವರು ಕಪ್ಪು ದಾರವನ್ನು ದರಿಸಲೇಬಾರದಂತೆ. ಈ ರಾಶಿಯವರಿಗೆ ಅಶುಭವಾಗಲಿದೆಯಂತೆ. ಇದು ಆರೋಗ್ಯದ ಮೇಲೆ ಕೂಡ ಪ್ರಭಾವ ಬೀರಲಿದೆ ಎನ್ನುತ್ತಾರೆ. ಆತ್ಮವಿಶ್ವಾಸವನ್ನು ಕೂಡ ಕಡಿಮೆ ಮಾಡುತ್ತದೆ ಈ ರಾಶಿಯವರು ಕಪ್ಪು ದಾರವನ್ನು ಕಟ್ಟುವುದರಿಂದ.

 

ಸಿಂಹ ರಾಶಿ

ಸಿಂಹ ರಾಶಿಯವರು ಕೂಡ ಕೈ ಅಥವಾ ಕಾಲಿಗೆ ಕಪ್ಪು ದಾರವನ್ನು ಕಟ್ಟಬಾರದಂತೆ. ಇವರ ಅದೃಷ್ಟವನ್ನು ದೂರ ಮಾಡಿ, ದುರಾದೃಷ್ಟವನ್ನು ತರಲಿದೆ. ಜೀವನದಲ್ಲಿ ನೆಮ್ಮದಿ ಕೂಡ ಹಾಳಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಜ್ಯೋತಿಷಿಗಳು.

 

ವೃಶ್ಚಿಕ ರಾಶಿ

ವೃಶಿಕ ರಾಶಿಯವರಿಗೆ ಮಾನಸಿಕ ತೊಂದರೆಗಳು ಕಪ್ಪು ದಾರವನ್ನು ಕಟ್ಟುವುದರಿಂದ ಬರಲಿದೆ. ಜೀವನದಲ್ಲಿ ಸುಖಗಳು ಕಡಿಮೆಯಾಗಲಿದೆ. ಸುಖಗಳು ದೂರವಾಗಿ ಕಷ್ಟಗಳಿಗೆ ದಾರಿ ಮಾಡಿದಂತಾಗುತ್ತದೆ ಎನ್ನುತ್ತಾರೆ ತಜ್ಞರು.

 

ಓದುಗರ ಗಮನಕ್ಕೆ : ಮೇಲೆ ತಿಳಿಸಿದ ಮಾಹಿತಿ ಧಾರ್ಮಿಕ ವಿಚಾರಗಳು ಮತ್ತು ನಂಬಿಕೆಗಳ ಆಧಾರದ ಮೇಲೆ ಹಾಗೂ ಇನ್ನಿತರ ಮೂಲಗಳಿಂದ ಆಧರಿಸಿದೆ. ಸುಧಾವಾಣಿ ಇದನ್ನು ಖಚಿತಪಡಿಸುವುದಿಲ್ಲ.