ಬೇಸಿಗೆಯ ತಂಪು ಹಣ್ಣು ಕಲ್ಲಂಗಡಿ ಆಯ್ಕೆ ಮಾಡುವ ಸರಿಯಾದ ವಿಧಾನ – ಬಣ್ಣ, ಗಾತ್ರ, ಮತ್ತು ರುಚಿಯ ವಿವರ!

  • 20 Mar 2025 01:33:11 AM

ಕಲ್ಲಂಗಡಿ ( watermelon ) ಒಂದು ರಸಭರಿತ, ದೇಹವನ್ನು ತಂಪಾಗಿಸುವ ಸಿಹಿಯಾದ ಹಣ್ಣು. ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಜ್ಯೂಸು ಕುಡಿಯೋದು ಅಥವಾ ಕಲ್ಲಂಗಡಿ ತಿನ್ನೋದು ಅಂದರೆ ಅದರ ಮಜಾನೇ ಬೇರೆ. ಕಲ್ಲಂಗಡಿ ಬಿಸಿಲಿನ ಬೇಸಿಗೆಯಲ್ಲಿ ಶರೀರಕ್ಕೆ ತಣ್ಣತೆ ನೀಡುವ ಒಂದು ಅತ್ಯುತ್ತಮ ಹಣ್ಣು!

 

ಕಲ್ಲಂಗಡಿಯಲ್ಲಿ ಹೈಡ್ರೇಶನ್ ಗೆ ತುಂಬಾ ಒಳ್ಳೆಯ ಹಣ್ಣು, 90% ನೀರಿನಾಂಶವಿದ್ದು, ದೇಹಕ್ಕೆ ತಣ್ಣತೆ ಮತ್ತು ತೇಜಸ್ಸು ನೀಡುತ್ತದೆ. ಇವು ತ್ವಚೆ ಹಾಗೂ ಕಣ್ಣಿನ ಆರೋಗ್ಯಕ್ಕೆ ಉತ್ತಮ ಯಾಕೆಂದರೆ ಇದರಲ್ಲಿ ವಿಟಮಿನ್ ಸಿ ಮತ್ತು ಎ ಇದೆ. ಆಂಟಿ-ಆಕ್ಸಿಡೆಂಟ್ ಗಳು ಆಗಿ ಕಾರ್ಯನಿರ್ವಹಿಸುತ್ತದೆ, ಲೈಕೊಪೀನ್ ಮತ್ತು ಸಿಟ್ರಲ್ಲೈನ್ ಎನ್ನುವ ಪೋಷಕಾಂಶಗಳು ಹೃದಯ ಆರೋಗ್ಯವನ್ನು ಉತ್ತಮಗೊಳಿಸುತ್ತವೆ. ಫೈಬರ್ ಅಂಶ ಸಮೃದ್ಧವಾಗಿರುವುದರಿಂದ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ. 

 

ಮೇಲಿನ ವಿವರಗಳಲ್ಲಿ ನಾವು ಕಲ್ಲಂಗಡಿಯ ವಿಶೇಷತೆ ಮತ್ತು ದೇಹಕ್ಕೆ ಆಗುವ ಲಾಭಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ, ಮಾರುಕಟ್ಟೆಯಲ್ಲಿ ವಿಭಿನ್ನ ಗಾತ್ರ ಮತ್ತು ಬಣ್ಣಗಳಲ್ಲಿನ ಕಲ್ಲಂಗಡಿಗಳು ದೊರಕುತ್ತವೆ.

 

ನಾವು ಹೇಗೆ ಕಲ್ಲಂಗಡಿಯ ರುಚಿಯನ್ನು ಅವುಗಳ ಗಾತ್ರ ಅಥವಾ ಬಣ್ಣದ ಆಧಾರದಲ್ಲಿ ಗುರುತಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. 

ಕಲ್ಲಂಗಡಿ ಸುತ್ತಿನ ಆಕಾರ ( Round Shape ) ಇದ್ದರೆ ಅದು ಸಿಹಿಯಾಗಿರುತ್ತದೆ. 

 

ಕಲ್ಲಂಗಡಿ ಉದ್ದವಾದ ಆಕಾರ ( Long Shape ) ಇದ್ದರೆ ಅದರಲ್ಲಿ ನೀರು ಜಾಸ್ತಿಯಾಗಿರುತ್ತದೆ. 

 

ಕಲ್ಲಂಗಡಿಯಲ್ಲಿ ಒಂದು ವೇಳೆ ಹಳದಿ ಗುರುತು ( Yellow Mark ) ಇದ್ದಲ್ಲಿ ಸಿಹಿಯಾಗಿರುತ್ತದೆ.

 

ಕಲ್ಲಂಗಡಿಯಲ್ಲಿ ಬಿಳಿ ಬಣ್ಣದ ಗುರುತು ( White Mark ) ಇದ್ದರೆ ರುಚಿ ಕಡಿಮೆಯಾದಾಗಿರುತ್ತದೆ.

 

ಕಲ್ಲಂಗಡಿಯ ಮೇಲಿನ ಗೆರೆಗಳು ( Lines ) ಹತ್ತಿರ ಹತ್ತಿರ ಇದ್ದರೆ ಸಿಹಿಯಾಗಿರುತ್ತದೆ.

 

ಕಲ್ಲಂಗಡಿಯ ಮೇಲಿನ ಗೆರೆಗಳು ( Lines ) ದೂರ ದೂರ ಇದ್ದರೆ ಅದು ರುಚಿ ಕಡಿಮೆಯಾಗಿರುತ್ತದೆ.

 

ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಅತಿಯಾಗಿ ತಿನ್ನಿ, ದೇಹವನ್ನು ತಂಪಾಗಿ ಮತ್ತು ಆರೋಗ್ಯವಾಗಿರಿಸಿ.