ಆಂಧ್ರಪ್ರದೇಶ ರಾಜ್ಯದಲ್ಲಿ ನೆಲೆಸಿರುವ ತಿರುಪತಿ ತಿಮಪ್ಪನ ದರ್ಶನ ಮಾಡುವುದು ಪ್ರತಿಯೊಬ್ಬ ಭಕ್ತನ ಕನಸು. ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಲಾಡು ಪ್ರಸಾದ ತೆಗೆದುಕೊಂಡು ಬರುವುದು ಎಂದರೆ, ವೈಕುಂಠಕ್ಕೆ ಹೋಗಿ ವಿಷ್ಣುವಿನ ದರ್ಶನ ಮಾಡಿ ಬಂದಪ್ಟೇ ಸಂಭ್ರಮ ಸಡಗರ.
ಹಾಗಾದರೆ, ನೀವು ತಿರುಪತಿ ತಿಮ್ಮಪ್ಪನ ದರ್ಶನ ಮಾಡುವ ಯೋಜನೆ ಹಾಕಿಕೊಂಡಿದ್ದೀರಾ? ನಿಮ್ಮ ದರ್ಶನ ಹೇಗೆ ಬುಕ್ ಬುಕ್ ಮಾಡುವುದು ಎಂಬ ಗೊಂದಲವಿದೆಯೇ ? ಚಿಂತಿಸಬೇಡಿ, ನಾವು ಇಲ್ಲಿ ಸಾಧ್ಯವಾದಷ್ಟು ಆನ್ ಲೈನ್ ಕಾರ್ಯವಿಧಾನದ ಬಗ್ಗೆ ತಿಳಿಯೋಣ.
ನೀವು ಒಂದು ಅಥವಾ ಎರಡು ಗಂಟೆಯಲ್ಲಿ ದರ್ಶನ ಪೂರ್ಣಗೊಳಿಸುತ್ತಿರೋ ಇಲ್ಲವೇ, 24 ಗಂಟೆಗಳಲ್ಲಿ ಪೂರ್ಣಗೊಳಿಸಿತ್ತಿರೋ ಅದು ನೀವು ಆಯ್ದ ಆಯ್ಕೆಗಳ ಮೇಲೆ ಅವಲಂಬಿತವಾಗಿದೆ. ಸರಿಯಾದ ರೀತಿಯಲ್ಲಿ ಬುಕಿಂಗ್ ಮಾಡಿದರೆ ನಿಮ್ಮ ದರ್ಶನ ದೀರ್ಘ ಸರತಿ ಸಾಲಿನಲ್ಲಿ ಕಾಯದೆ ವೇಗವಾಗಿರುತ್ತದೆ.
ದರ್ಶನ ಪಡೆಯಲು ಅತ್ಯಂತ ವೇಗವಾದ ಮತ್ತು ಅನುಕೂಲಕರವಾದ ಮಾರ್ಗವೆಂದರೆ ಅದು ಆನ್ ಲೈನ್ ಬುಕಿಂಗ್. ನೀವು ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ, www.ttdevasthanams.ap.gov.in ವೆಬ್ ಸೈಟ್ ಗೆ ಲಾಗಿನ್ ಆಗುವ ಮೂಲಕ ನಿಮ್ಮ ಬುಕಿಂಗ್ ನ್ನು ಮಾಡಬಹುದಾಗಿದೆ.
ವಿಶೇಷ ದರ್ಶನಕ್ಕಾಗಿ ಆನ್ ಲೈನ್ ಬುಕಿಂಗ್
ಮೇಲೆ ಕಾಣಿಸಿದ ವೆಬ್ ಸೈಟ್ ಗೆ ಲಾಗಿನ್ ಮಾಡಿ ಮತ್ತು 300 ರೂ. ವಿಶೇಷ ಪ್ರವೇಶಕ್ಕಾಗಿ ನಿಮ್ಮ ಸ್ಲಾಟ್ ಬುಕ್ ಮಾಡಿ, ಆದರೆ ಒಂದು ನೆನಪಿರಲಿ, ಟಿಕೆಟ್‌ಗಳು ನಿಮಿಷಗಳಲ್ಲಿ ಮಾರಾಟವಾಗುತ್ತವೆ. ಪ್ರತಿ ತಿಂಗಳ 24ನೇ ತಾರೀಖು ಬೆಳಿಗ್ಗೆ 10 ಗಂಟೆಗೆ ಬುಕಿಂಗ್ ಆರಂಭವಾಗುತ್ತದೆ ಮತ್ತು 3 ತಿಂಗಳು ಬಳಿಕ ಸ್ಲಾಟ್‌ಗಳು ಲಭ್ಯವಿರುತ್ತದೆ. ನೀವು ಈ ರೀತಿಯಲ್ಲಿ ದರ್ಶನವನ್ನು ಬುಕ್ ಮಾಡಿದರೆ ಸಾಮಾನ್ಯವಾಗಿ 2-4 ಗಂಟೆಗಳೊಳಗೆ ದರ್ಶನವನ್ನು ಪೂರ್ಣಗೊಳಿಸಬಹುದು.
ಉಚಿತವಾದ ಸರ್ವ ದರ್ಶನ
ನೀವು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಸಾಧ್ಯವಾಗದಿದ್ದರೆ, ಎಲ್ಲರಿಗೂ ಉಚಿತವಾದ ಸರ್ವ ದರ್ಶನದ ಮೂಲಕ ನೀವು ಇನ್ನೂ ದರ್ಶನ ಪಡೆಯಬಹುದು. ಆದರೆ ದೀರ್ಘ ಕಾಯುವಿಕೆಗೆ ಸಿದ್ಧರಾಗಿರಿ.
ಹಿರಿಯ ನಾಗರಿಕರು ಅಥವಾ ಅಂಗವಿಕಲರಿಗೆ
ನೀವು 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಾಗಿದ್ದರೆ ಅಥವಾ ಅಂಗವಿಕಲ ಭಕ್ತರಾಗಿದ್ದರೆ, ನೀವು ಕಡಿಮೆ ಕಾಯುವ ಸಮಯದೊಂದಿಗೆ ವಿಶೇಷ ದರ್ಶನಕ್ಕೆ ಅರ್ಹರಾಗುತ್ತೀರಿ. ಪ್ರತಿಯೊಬ್ಬ ಹಿರಿಯ ನಾಗರಿಕರು ತಮ್ಮ ಸಂಗಾತಿಯನ್ನು ಸಹಾಯಕರಾಗಿ ಕರೆತರಲು ಅವಕಾಶವಿದೆ. ಇದಕ್ಕಾಗಿ ಬುಕಿಂಗ್ ಪ್ರತಿ ತಿಂಗಳ 23 ರಂದು ಮಧ್ಯಾಹ್ನ 3 ಗಂಟೆಗೆ ತೆರೆಯುತ್ತದೆ. ಇದು ಕೂಡ 3 ತಿಂಗಳ ನಂತರ ಲಭ್ಯವಿರುವ ಸ್ಲಾಟ್‌ಗಲಾಗಿರುತ್ತದೆ ಮತ್ತು ದರ್ಶನಕ್ಕೆ ಕಾಯುವ ಸಮಯ ಸಾಮಾನ್ಯವಾಗಿ 1-2 ಗಂಟೆಗಳು ಆಗಿರುತ್ತದೆ.
1 ವರ್ಷ ವಯಸ್ಸು ಒಳಪಟ್ಟ ಮಕ್ಕಳು
ನೀವು 1 ವರ್ಷದೊಳಗಿನ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದರೆ, ತಿರುಮಲದಲ್ಲಿ ವಿಶೇಷ ಶಿಶು ದರ್ಶನವಿದ್ದು, ಇದು ಪೋಷಕರು ಮತ್ತು 12 ವರ್ಷದೊಳಗಿನ ಒಡಹುಟ್ಟಿದವರು ಕನಿಷ್ಠ ಕಾಯುವ ಸಮಯದೊಂದಿಗೆ ದರ್ಶನ ಪಡೆಯಲು ಅನುವು ಮಾಡಿಕೊಡುತ್ತದೆ. ಮುಂಗಡ ಬುಕಿಂಗ್ ಅಗತ್ಯವಿಲ್ಲ. ಮಧ್ಯಾಹ್ನ 12 ರಿಂದ 7 ರವರೆಗೆ ಶಿಶು ದರ್ಶನದ ಬುಕಿಂಗ್ "ಸುಪಥಮ್ ಸಂಕೀರ್ಣ" ದಲ್ಲಿ ಪಡೆಯಲು ಸಾಧ್ಯವಿದೆ. ಈ ದರ್ಶನಕ್ಕೆ ಕಾಯುವ ಸಮಯ ಸಾಮಾನ್ಯವಾಗಿ 1-2 ಗಂಟೆಗಳು ಆಗಿರುತ್ತದೆ ಅಷ್ಟೇ.
ನಡೆದುಕೊಂಡು ಹೋಗುವ ಭಕ್ತರಿಗೆ
ಬೆಟ್ಟದ ಮೇಲೆ ನಡೆಯುವವರಿಗೆ ದಿವ್ಯ ದರ್ಶನ ಲಭ್ಯವಿದೆ. ನೀವು ಮುಂಚಿತವಾಗಿ ಬುಕ್ ಮಾಡುವ ಅಗತ್ಯವಿಲ್ಲ. ನಡಿಗೆ ಪ್ರಾರಂಭಿಸುವ ಮೊದಲು ಅದೇ ದಿನ ದಿವ್ಯ ದರ್ಶನ ಟೋಕನ್ ಪಡೆಯಬಹುದು. ಟೋಕನ್ ವಿತರಣೆ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗುತ್ತದೆ. ಈ ವಿಧಾನದಿಂದ ದರ್ಶನಕ್ಕಾಗಿ ಕಾಯುವ ಸಮಯ ಸಾಮಾನ್ಯವಾಗಿ 2 ರಿಂದ 4 ಗಂಟೆಗಳು.
ವಿಐಪಿ ದರ್ಶನ
ನೀವು ಅತ್ಯಂತ ವೇಗದ ದರ್ಶನವನ್ನು ಹುಡುಕುತ್ತಿದ್ದರೆ, ನೀವು ವಿಐಪಿ ಬ್ರೇಕ್ ದರ್ಶನವನ್ನು ಆರಿಸಿಕೊಳ್ಳಬಹುದು. ಇದು ಅಧಿಕಾರಿಗಳಿಂದ ಶಿಫಾರಸು ಪತ್ರದ ಮೂಲಕ ಅಥವಾ "ಶ್ರೀವಾಣಿ ಟ್ರಸ್ಟ್" ಗೆ 10 ಸಾವಿರ ರೂಪಾಯಿ ದೇಣಿಗೆ ನೀಡುವ ಮೂಲಕ ಲಭ್ಯವಿರುತ್ತದೆ. ಪ್ರತಿ ತಿಂಗಳ 23 ನೇ ತಾರೀಖಿನಂದು ಬೆಳಿಗ್ಗೆ 11 ಗಂಟೆಗೆ ಶ್ರೀವಾಣಿ ಟಿಕೆಟ್ ಬಿಡುಗಡೆಯಾಗುತ್ತದೆ ಮತ್ತು ಇದು ಸಹ 3 ತಿಂಗಳ ನಂತರ ಲಭ್ಯವಿರುವ ಸ್ಲಾಟ್‌ಗಳಿರುತ್ತದೆ. ವಿಐಪಿ ಬ್ರೇಕ್ ದರ್ಶನಕ್ಕೆ ಕಾಯುವ ಸಮಯ ಸಾಮಾನ್ಯವಾಗಿ ಒಂದು ಗಂಟೆ ಆಗಿರುತ್ತದೆ.
ನಿಮ್ಮ ಪ್ರವಾಸದ ಮೊದಲು ಅಧಿಕೃತ ಟಿಟಿಡಿ ವೆಬ್‌ಸೈಟ್ ಅನ್ನು ಪರಿಶೀಲಿಸುವುದು ಯಾವಾಗಲೂ ಉತ್ತಮ. ಈ ಸಂದೇಶವನ್ನು ಇತರರಿಗೆ ಕಲಿಸುವುದರ ಮೂಲಕ, ತಿರುಮಲಕ್ಕೆ ಪ್ರವಾಸವನ್ನು ಯೋಜಿಸುತ್ತಿರುವರಿಗೆ ಸಹಾಯ ಮಾಡಬಹುದು.