ಸರಕಾರಿ ಕಾಲೇಜುಗಳಲ್ಲಿ ತಾಂತ್ರಿಕ ಡಿಪ್ಲೊಮಾ ಕೋರ್ಸ್ ಓದುತ್ತಿರುವ ಕರ್ನಾಟಕದ ವಿದ್ಯಾರ್ಥಿನಿಯರು ಭಾರತ ಸರ್ಕಾರದ 'ಪ್ರಗತಿ ವಿದ್ಯಾರ್ಥಿವೇತನ ಯೋಜನೆ’ ಯ ಪ್ರಯೋಜನ ಪಡೆಯಬಹುದು. 'ಡಿಪ್ಲೊಮಾ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ'ದ ಸದುಪಯೋಗ ಪಡೆಯುವುದು ಉತ್ತಮವಾಗಿದೆ.
ಈ ಯೋಜನೆಯನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE Pragati Scholarship) ಜಾರಿಗೆ ತಂದಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಹುಡುಗಿಯರಿಗೆ ತಾಂತ್ರಿಕ ಶಿಕ್ಷಣ ಮುಂದುವರಿಸಲು ಹಣಕಾಸು ಸಹಾಯ ನೀಡುವುದೇ ಇದರ ಮುಖ್ಯ ಉದ್ದೇಶ.
ಯೋಜನೆಯ ಮುಖ್ಯ ಉದ್ದೇಶ
- ಹುಡುಗಿಯರನ್ನು ತಾಂತ್ರಿಕ ಶಿಕ್ಷಣದತ್ತ ಉತ್ತೇಜಿಸುವುದು
- ಆರ್ಥಿಕ ಸಮಸ್ಯೆಯಿಂದ ಓದು ನಿಲ್ಲದಂತೆ ಸಹಾಯ ಮಾಡುವುದು
- ಕಾಲೇಜು ಶುಲ್ಕ, ಪುಸ್ತಕ, ಲ್ಯಾಪ್‌ಟಾಪ್ ಮುಂತಾದ ಖರ್ಚಿಗೆ ನೆರವು ನೀಡುವುದು
ಯಾರು ಅರ್ಹರು?
- ಅರ್ಜಿದಾರರು ಹುಡುಗಿಯರೇ ಆಗಿರಬೇಕು
- AICTE ಅನುಮೋದಿತ ಸಂಸ್ಥೆಯಲ್ಲಿ ಡಿಪ್ಲೊಮಾ ಕೋರ್ಸ್ ಓದುತ್ತಿರಬೇಕು
- ಮೊದಲ ವರ್ಷದ ಪ್ರವೇಶ ಅಥವಾ ಲ್ಯಾಟರಲ್ ಎಂಟ್ರಿ ಮೂಲಕ ಎರಡನೇ ವರ್ಷಕ್ಕೆ ಸೇರಿರಬೇಕು
- ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇರಬೇಕು
- ಒಂದು ಕುಟುಂಬದಿಂದ ಗರಿಷ್ಠ ಇಬ್ಬರು ಹುಡುಗಿಯರಿಗೆ ಮಾತ್ರ ಸೌಲಭ್ಯ
- ಸರಿಯಾದ ಪ್ರವೇಶ ಪ್ರಕ್ರಿಯೆ ಮೂಲಕ ಅಡ್ಮಿಷನ್ ಪಡೆದಿರಬೇಕು
ಎಷ್ಟು ವಿದ್ಯಾರ್ಥಿವೇತನ ಸಿಗುತ್ತದೆ?
ಪ್ರತಿ ವರ್ಷ ₹50,000 ವಿದ್ಯಾರ್ಥಿವೇತನ ಲಭಿಸುತ್ತದೆ.
- ಮೊದಲ ವರ್ಷದ ಪ್ರವೇಶ ಪಡೆದವರಿಗೆ ಗರಿಷ್ಠ 3 ವರ್ಷಗಳು
- ಎರಡನೇ ವರ್ಷದ ಪ್ರವೇಶ ಪಡೆದವರಿಗೆ ಗರಿಷ್ಠ 2 ವರ್ಷಗಳು
ಈ ಹಣವನ್ನು ನೇರವಾಗಿ ವಿದ್ಯಾರ್ಥಿನಿಯ ಬ್ಯಾಂಕ್ ಖಾತೆಗೆ (DBT ಮೂಲಕ) ಜಮಾ ಮಾಡಲಾಗುತ್ತದೆ.
ಈ ಹಣವನ್ನು ಬಳಸಬಹುದಾದವು
- ಕಾಲೇಜು ಫೀಸ್
- ಪುಸ್ತಕಗಳು
- ಲ್ಯಾಪ್‌ಟಾಪ್ / ಕಂಪ್ಯೂಟರ್
- ಓದಿಗೆ ಅಗತ್ಯವಿರುವ ಇತರೆ ಸಾಮಗ್ರಿಗಳು
ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್
- ಆದಾಯ ಪ್ರಮಾಣಪತ್ರ
- ಅಡ್ಮಿಷನ್ ಲೆಟರ್
- ಮಾರ್ಕ್ಸ್ ಕಾರ್ಡ್‌ಗಳು
- ಫೀಸ್ ರಸೀದಿ
- ಪಾಸ್‌ಪೋರ್ಟ್ ಸೈಜ್ ಫೋಟೋ
ಅರ್ಜಿ ಹಾಕುವುದು ಹೇಗೆ?
- National Scholarship Portal (NSP) ಗೆ ಭೇಟಿ ನೀಡಿ – https://scholarships.gov.in
- ಹೊಸ ನೋಂದಣಿ ಅಥವಾ ಲಾಗಿನ್ ಮಾಡಿ
- “AICTE Pragati Scholarship Scheme for Girl Students (Diploma)” ಆಯ್ಕೆ ಮಾಡಿ
- ವಿವರಗಳನ್ನು ತುಂಬಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿ ಸಲ್ಲಿಸಿ ಮತ್ತು ನಂತರ ಸ್ಥಿತಿಯನ್ನು ಪರಿಶೀಲಿಸಬಹುದು
ಮಾಹಿತಿ ಮೂಲ: myScheme / AICTE





