ಗ್ಯಾಸ್ಟ್ರಿಕ್ ಅಥವಾ ಬೊಜ್ಜುವಿನ ಸಮಸ್ಯೆ ಇದೆಯೇ? ಹಾಗಾದರೆ ಬೆಳಗ್ಗೆ ಇದನ್ನು ಕುಡಿಯಿರಿ ಮತ್ತು ಆರೋಗ್ಯವಾಗಿರಿ.

  • 04 Apr 2025 12:39:12 AM

ಪ್ರತಿಯೊಬ್ಬ ಮನುಷ್ಯ ಆರೋಗ್ಯದಿಂದ ಇರಲು ಬಯಸುತ್ತಾನೆ. ಮನುಷ್ಯನಿಗೆ ಹಣ ಸಂಪತ್ತಿನಿಂದ ಬಹಳ ಮುಖ್ಯವಾದುದು ಆತನ ಅರೋಗ್ಯ. ಆರೋಗ್ಯವನ್ನು ನಿರ್ಲಕ್ಷ ಮಾಡಿದಷ್ಟು, ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ.

 

ಈಗಿನ ಕಾಲದ ಆಹಾರ ಪದ್ದತಿಯಿಂದ ಬೊಜ್ಜು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಸಾಮಾನ್ಯವಾಗಿ ಹೆಚ್ಚಿನ ಜನರನ್ನು ಕಾಡುತ್ತಿರುತ್ತದೆ. ಈ ಸಮಸ್ಯೆಗಳಿಂದ ಮುಕ್ತರಾದರೆ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆಯಾಗುತ್ತದೆ. ಆದ್ದರಿಂದ ಕೆಲ ವ್ಯಕ್ತಿಗಳು ಕೆಳಗಡೆ ನಮೂದಿಸಿದ ಮಿಶ್ರಣವನ್ನು ಬೆಳಗ್ಗಿನ ಜಾವಾ ಕುಡಿದು ತಮ್ಮ ಆರೋಗ್ಯದಲ್ಲಿ ಧನಾತ್ಮಕ ಅಭಿವೃದ್ಧಿಯನ್ನು ವ್ಯಕ್ತಪಡಿಸಿದರ ಸಲುವಾಗಿ, ನಿಮಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ.

 

ಯಾವುದು ಆ ಮಿಶ್ರಣ ?

ಅರ್ಧ ಲೋಟ ಉಗುರು ಬೆಚ್ಚಗಿನ ನೀರು ತಗೊಳ್ಳಿ, ಅದಕ್ಕೆ ಅರ್ಧ ತುಂಡು ಲಿಂಬೆ ರಸವನ್ನು ಹಿಂಡಿ, ಆಮೇಲೆ ಎರಡು ತುಂಡು ಕಲ್ಲು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಖಾಲಿ ಹೊಟ್ಟೆ ಇರುವಾಗ ಕುಡಿಯಬೇಕು. ಆದರೆ ಒಂದು ನೆನಪಿಡಿ, ನೀರು ಅತಿಯಾಗಿ ಬಿಸಿಯಾಗಿರಕೂಡದು ಮತ್ತು ಲಿಂಬೆ ರಸ ಮತ್ತು ಉಪ್ಪು ಕೂಡ ಅತಿಯಾಗಿರಕೂಡದು.

 

ಇದನ್ನು ಕುಡಿಯೋದರಿಂದ ಪ್ರಯೋಜನ ?

ಇದನ್ನು ಕುಡಿಯೋದರಿಂದ ಕರುಳಿನಲ್ಲಿ ಇರುವ ಕಲ್ಮಶವನ್ನು ಹೊರಗಡೆ ಹಾಕುತ್ತದೆ. ಕರುಳು ಸ್ವಚ್ಛವಾದಂತೆ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಈ ಮಿಶ್ರಣಯುಕ್ತ ನೀರನ್ನು ದಿನ ಕುಡಿಯುವವರು ಹೇಳುವ ಪ್ರಕಾರ, ಹೊಟ್ಟೆ ಶುದ್ಧವಾಗುವುದರ ಜೊತೆಗೆ ಯಾರೆಲ್ಲಾ ಗ್ಯಾಸ್ಟ್ರಿಕ್ ಅಂತ ಒದ್ದಾಡುತ್ತಾರೆ ಅವರಿಗೆ ಈ ರಸ ಪ್ರತಿದಿನ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಸಂಪೂರ್ಣವಾಗಿ ಗುಣವಾಗುತ್ತದೆ ಎಂದು ತಿಳಿಸಿದ್ದಾರೆ.

 

ದೇಹದ ತೂಕ ಕಡಿಮೆ ಮಾಡಲು ಕೂಡ ಸಹಕಾರಿ

ಹೌದು, ದೇಹದ ತೂಕ ಕಡಿಮೆಯಾಗಲು ಲಿಂಬೆ, ಉಪ್ಪು ಮತ್ತು ಸಂಯೋಜನೆಯ ಬಿಸಿ ನೀರು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆಯಂತೆ. ಅಧಿಕ ದೇಹದ ತೂಕ ಬಹಳಷ್ಟು ಕಾಯಿಲೆಗೆ ಎಡೆಮಾಡಿ ಕೊಡುತ್ತದೆ ಆದ್ದರಿಂದ ದೇಹದ ತೂಕ ಕಡಿಮೆಯಾದಂತೆ ಆರೋಗ್ಯದ ಸಮಸ್ಯೆ ಕೂಡ ಕಡಿಮೆಯಾಗಲಿದೆ.

 

ಕಾಫಿ, ಟೀ ಕುಡಿಯುವ ಹವ್ಯಾಸ ಇರುವವರು ಏನು ಮಾಡಬೇಕು ?

ಬೆಳಗ್ಗಿನ ಜಾವಾ ಬರೀ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯೋದು ದೇಹಕ್ಕೆ ಉತ್ತಮವಲ್ಲ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆ. ಒಂದು ವೇಳೆ ಟೀ ಅಥವಾ ಕಾಫಿ ಕುಡಿಯದೆ ಇರಲು ಸಾಧ್ಯವೇ ಇಲ್ಲವಾದರೆ, ಬ್ಲಾಕ್ ಕಾಫಿ ಕುಡಿಯೋದು ತುಂಬಾ ಉತ್ತಮ. ಬ್ಲಾಕ್ ಕಾಫಿ ನಿಮ್ಮ ದೇಹದ ಬೋಜನ್ನು ಕರಗಿಸಲು ತುಂಬಾ ಸಹಕಾರಿಯಾಗುತ್ತದೆ.

 

ಒಂದು ವೇಳೆ ಈ ಮನೆಮದ್ದು ಕೆಲ ದಿನಗಳ ಬಳಕೆಯ ನಂತರ ಪ್ರಯೋಜನವಾಗದಿದ್ದರೆ, ದಯವಿಟ್ಟು ನಿಲ್ಲಿಸಿರಿ.