12 February 2026 | Join group

ಕೊತ್ತಂಬರಿ ಸೊಪ್ಪನ್ನು ಹೀಗೆ ತಿಂದ್ರೆ ಯಾವ ರೋಗವೂ ನಿಮ್ಮತ್ತ ಸುಳಿಯಲ್ಲ!

  • 11 Feb 2026 11:31:45 PM

ನೀವು ಮಾಡುವ ರುಚಿಯಾದ ಪದಾರ್ಥವನ್ನು ಮತ್ತಷ್ಟು ರುಚಿ ಭರಿತ ಮಾಡಲು ಬಳಸುವ ಕೊತ್ತಂಬರಿ ಸೊಪ್ಪು ಬಹಳಷ್ಟು ಅರೋಗ್ಯಕ್ಕೆ ಉಪಕಾರಿಯಾಗುವ ಅಂಶಗಳನ್ನು ಹೊಂದಿದೆ. ನಿಮ್ಮ ಅಡುಗೆಯ ಸುವಾಸನೆ ಹೆಚ್ಚಿಸುವುದು ಮಾತ್ರವಲ್ಲದೆ,  ದೇಹದ ಅರೋಗ್ಯ ಕಾಪಾಡಲು ಕೂಡ ಸಹಕಾರಿಯಾಗುತ್ತದೆ. ಹಿಂದಿನ ಕಾಲದಲ್ಲಿ ಕೊತ್ತಂಬರಿ ಸೊಪ್ಪು ಬಹಳ ಅಪರೂಪವಾಗಿತ್ತು ಆದರೆ ಈಗಿನ ಕಾಲದಲ್ಲಿ ಕೊತ್ತಂಬರಿ ಸೊಪ್ಪು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. 

 

ಮಜ್ಜಿಗೆಯಿಂದ ಹಿಡಿದು ಎಲ್ಲ ರೀತಿಯ ಆಹಾರಕ್ಕೂ ಕೊತ್ತಂಬರಿ ಸೊಪ್ಪನ್ನು ಬಳಸಲಾಗುತ್ತದೆ. ಮಜ್ಜಿಗೆಗೆ ಕೊತ್ತಂಬರಿ ಸೊಪ್ಪು ಬೆರಿಸಿ ಕುಡಿದರೆ ಅದರ ಟೇಸ್ಟೇ ಸೂಪರ್. ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಕ್ಯಾರೊಟಿನಾಯ್ಡ್ಗಳು ಇರುವುದರಿಂದ ದೃಷ್ಟಿ ಉತ್ತಮವಾಗಲಿದೆ.  ವಿಶೇಷವೆಂದರೆ ಕಣ್ಣಿನ ಉರಿಯೂತ ಕೂಡ ಬರದ ಹಾಗೆ ಕಾಪಾಡಲಿದೆ ಎನ್ನುತ್ತಾರೆ ತಜ್ಞರು.

 

ಕೊತ್ತಂಬರಿ ಸೊಪ್ಪಿನ ಒಂದು ಉತ್ತಮ ಪ್ರಯೋಜನವೆಂದರೆ, ದೇಹದ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಯಾಕೆಂದರೆ, ಕೊತ್ತಂಬರಿ ಸೊಪ್ಪಿನ ಪ್ರಕಾಶಮಾನವಾದ ಹಸಿರು ಬಣ್ಣವು ಉತ್ಕರ್ಷಣ ನಿರೋಧಕಗಳ ಉಪಸ್ಥಿತಿಯಿಂದಾಗಿ, ಇದು ಕಿಣ್ವದ ಚಟುವಟಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ.

 

ಕೊತ್ತಂಬರಿ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿ ಕೂಡ ಇದೆ.  ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ‘ಸಿ’, ‘ಇ’ ಮತ್ತು ‘ಎ’ ಇರುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಮೂಳೆಗಳ ಆರೋಗ್ಯ: ಕೊತ್ತಂಬರಿ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ಫಾಸ್ಫರಸ್ ಸಮೃದ್ಧವಾಗಿದ್ದು, ಇದು ಮೂಳೆಗಳನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೇ ಕೊತ್ತಂಬರಿ ಸೊಪ್ಪು ಸಂಧಿವಾತದ ನೋವಿನಿಂದಲೂ ಮೂಳೆಗಳನ್ನು ರಕ್ಷಿಸುತ್ತದೆ.

 

ಕೊಲೆಸ್ಟ್ರಾಲ್: ಕೊತ್ತಂಬರಿ ಸೊಪ್ಪಿನ ನಿಯಮಿತ ಸೇವನೆಯು LDL (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು HDL (ಉತ್ತಮ) ಕೊಲೆಸ್ಟ್ರಾಲ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ.

 

ಚರ್ಮಕ್ಕೆ ಹೊಳಪು: ಕಬ್ಬಿಣ, ವಿಟಮಿನ್ ಇ ಮತ್ತು ವಿಟಮಿನ್ ಎ ಯ ಶಕ್ತಿ ಕೇಂದ್ರವಾಗಿರುವುದರಿಂದ, ಇದು ಚರ್ಮಕ್ಕೆ ಹಾನಿ ಮಾಡುವ ಫ್ರೀ ರಾಡಿಕಲ್ಗಳೊಂದಿಗೆ ಹೋರಾಡುತ್ತದೆ. ಕೊತ್ತಂಬರಿಯು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುವ ಸಾಮರ್ಥ್ಯದಿಂದಾಗಿ ಎಣ್ಣೆಯುಕ್ತ ಚರ್ಮಕ್ಕೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.