ಮಂಗಳೂರು ವಿಮಾನ ನಿಲ್ದಾಣದ ಟಿಕೆಟ್ ಬುಕ್ ಮಾಡುವಾಗ ಅಥವಾ ಬ್ಯಾಗ್ ಟ್ಯಾಗ್ ನೋಡಿದಾಗ ಒಂದು ಪ್ರಶ್ನೆ ಎಲ್ಲರಿಗೂ ಬರುತ್ತದೆ. “Mangalore ಅಂದ್ರೆ MNG ಅಥವಾ MLR ಇರಬೇಕಲ್ಲ… IXE ಹೇಗೆ ಬಂತು ಎಂಬ ವಿಚಾರ”
ಇದು ತಪ್ಪಲ್ಲ… ಇದರ ಹಿಂದೆ ಒಂದು ಸಂಪೂರ್ಣ ವಿಮಾನಯಾನ ವ್ಯವಸ್ಥೆಯ ಲಾಜಿಕ್ ಇದೆ. ವಿಮಾನ ನಿಲ್ದಾಣಗಳಿಗೆ ಎರಡು ಕೋಡ್‌ಗಳು ಇರುತ್ತವೆ. ಪ್ರತಿ ಏರ್‌ಪೋರ್ಟ್‌ಗೆ ಸಾಮಾನ್ಯವಾಗಿ ಎರಡು ಗುರುತುಗಳಿರುತ್ತವೆ:
IATA Code – ಪ್ರಯಾಣಿಕರು ನೋಡುವ ಕೋಡ್ (ಟಿಕೆಟ್, ಬ್ಯಾಗ್ ಟ್ಯಾಗ್)
ICAO Code – ಪೈಲಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಬಳಸುವ ಕೋಡ್
ಮಂಗಳೂರು ಏರ್ಪೋರ್ಟ್ ಗೆ ಈ ಎರಡು ಗುರುತುಗಳ ಪ್ರಕಾರ ಈ ಕೆಳಗಿನಂತೆ ಹೆಸರು ನೀಡಲಾಗಿದೆ.
IATA ಕೋಡ್ ಪ್ರಕಾರ IXE ಪ್ರಕಾರ ICAO: VOML ಎಂದಿದೆ.
IATA ಕೋಡ್ ಹೇಗೆ ಸಿಗುತ್ತದೆ?
IATA (International Air Transport Association) ಜಗತ್ತಿನ ಎಲ್ಲಾ ವಿಮಾನ ನಿಲ್ದಾಣಗಳಿಗೆ ಮೂರಕ್ಷರದ ಕೋಡ್ ನೀಡುತ್ತದೆ.
ಆದರೆ ಸಮಸ್ಯೆ ಏನು ಗೊತ್ತಾ?
ಜಗತ್ತಿನಲ್ಲಿ ಸಾವಿರಾರು ನಗರಗಳಿವೆ…ಆದರೆ ಕೋಡ್ ಕೇವಲ 3 letters ಮಾತ್ರ!
ಹಾಗಾಗಿ ಎಲ್ಲ ನಗರಕ್ಕೂ ಹೆಸರಿಗೆ ಸರಿಹೊಂದುವ ಕೋಡ್ ಸಿಗುವುದಿಲ್ಲ.
ಉದಾಹರಣೆ:
MLR ಈಗಾಗಲೇ ಆಸ್ಟ್ರೇಲಿಯಾದ ಒಂದು ಏರ್‌ಪೋರ್ಟ್‌ಗೆ ನೀಡಲಾಗಿದೆ
MNG ಮತ್ತೊಂದು ಸ್ಥಳಕ್ಕೆ ಬಳಸಲಾಗುತ್ತದೆ.
ಹೀಗಾಗಿ ಮಂಗಳೂರಿಗೆ ಹೊಸ ಗುರುತು ಬೇಕಾಯಿತು.
ಹಾಗಾದರೆ “IXE” ಯಾಕೆ?
ಮಂಗಳೂರಿನ ವಿಮಾನ ನಿಲ್ದಾಣದ IATA ಕೋಡ್ IXE ಆಗಿದ್ದು, ಇದು ನಗರದ ಹೆಸರಿನ ಮೊದಲ ಅಕ್ಷರಗಳಿಂದ ಬಂದಿರುವುದಿಲ್ಲ. ಜಗತ್ತಿನಾದ್ಯಂತ ಸಾವಿರಾರು ವಿಮಾನ ನಿಲ್ದಾಣಗಳಿಗೆ ಕೇವಲ ಮೂರು ಅಕ್ಷರಗಳ ಕೋಡ್ ನೀಡಬೇಕಾಗಿರುವುದರಿಂದ, ಎಲ್ಲ ನಗರಗಳಿಗೂ ಅವರ ಹೆಸರಿಗೆ ಹೊಂದುವ ಕೋಡ್ ಸಿಗುವುದಿಲ್ಲ. ಭಾರತದ ಅನೇಕ ವಿಮಾನ ನಿಲ್ದಾಣಗಳಂತೆ ಮಂಗಳೂರಿಗೂ IXE ಎಂಬ ವಿಶಿಷ್ಟ ಕೋಡ್ ನೀಡಲಾಗಿದೆ.
IXC – ಚಂಡೀಗಢ
IXM – ಮದುರೈ
IXB – ಬಾಗ್ಡೋಗ್ರಾ
IXE – ಮಂಗಳೂರು
ಅಂದರೆ ಇದು ಹೆಸರಿನಿಂದ ಬಂದದ್ದು ಅಲ್ಲ. ಭಾರತಕ್ಕೆ ಮೀಸಲಾದ IATA ಕೋಡ್ ಸರಣಿಯ ಒಂದು ಭಾಗ. ಲಕ್ಷಾಂತರ ಪ್ರಯಾಣಿಕರನ್ನು ಜಗತ್ತಿಗೆ ಕೊಂಡೊಯ್ಯುವ ಮಂಗಳೂರು ವಿಮಾನ ನಿಲ್ದಾಣ ದೇಶದಾದ್ಯಂತ ಬ್ಯುಸಿ ಏರ್ಪೋರ್ಟ್ ಗಳಲ್ಲಿ ಒಂದಾಗಿದೆ.





