United Arab Emirates (ಯುಎಇ)ಯಲ್ಲಿ ವಾಸಿಸುವ ಕುಟುಂಬಗಳಿಗೆ 2026ರಲ್ಲಿ ಉಚಿತ Fazaa (ಫಜಾ) ಕುಟುಂಬ ಸದಸ್ಯತ್ವ ನೀಡುವ ಮಹತ್ವದ ನಿರ್ಧಾರವನ್ನು ಘೋಷಿಸಿದೆ. ಈ ಯೋಜನೆಯಡಿ, ಒಂದು ಮಗು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಗಳು ಮಾತ್ರ ಅರ್ಹರು. ಗಂಡ ಅಥವಾ ಹೆಂಡತಿ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಪ್ರತಿ ಕುಟುಂಬಕ್ಕೆ ಒಂದು ಸದಸ್ಯತ್ವ ಮಾತ್ರ ನೀಡಲಾಗುತ್ತದೆ ಮತ್ತು ಇದು ಸಂಪೂರ್ಣ ಉಚಿತವಾಗಿದೆ.
Fazaa (ಫಜಾ) ಸದಸ್ಯತ್ವದಿಂದ ಏನು ಲಾಭ?
ಫಜಾ ಸದಸ್ಯತ್ವದ ಮೂಲಕ ಕುಟುಂಬಗಳು ದಿನನಿತ್ಯದ ಖರ್ಚಿನಲ್ಲಿ ದೊಡ್ಡ ಮಟ್ಟದ ರಿಯಾಯಿತಿಗಳನ್ನು ಪಡೆಯಬಹುದು:
34,000+ ಅಂಗಡಿಗಳಲ್ಲಿ ಡಿಸ್ಕೌಂಟ್.
28,000+ ಆಹಾರ ಮತ್ತು ಗ್ರಾಹಕ ಉತ್ಪನ್ನಗಳ ಮೇಲೆ ರಿಯಾಯಿತಿ.
ವಿಶ್ವದಾದ್ಯಂತ 5 ಲಕ್ಷಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಆಫರ್.
ಟಿಕೆಟ್ ಮತ್ತು ಮನರಂಜನೆ ಚಟುವಟಿಕೆಗಳ ಮೇಲೆ 70%ವರೆಗೆ ರಿಯಾಯಿತಿ.
ಪ್ರೀಮಿಯಂ ಸೇವೆಗಳ ಮೇಲೆ ವಿಶೇಷ ಕೊಡುಗೆಗಳು.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಫಜಾ ಇನ್‌ಸ್ಟಾಗ್ರಾಮ್ (@fazaa4all) ಮೂಲಕ ಲಭ್ಯವಿರುವ ಲಿಂಕ್ ಬಳಸಿ:
ಹೆಸರು, ಇಮೇಲ್, ಮೊಬೈಲ್ ಸಂಖ್ಯೆ.
ಎಮಿರೇಟ್ ವಿವರ.
ಕುಟುಂಬ ಸದಸ್ಯರ ಎಮಿರೇಟ್ಸ್ ಐಡಿ ಅಪ್‌ಲೋಡ್.
ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಸಬಹುದು.
ಗಮನಿಸಬೇಕಾದ ವಿಷಯಗಳು
ನೋಂದಣಿ 2026ರ ವರ್ಷವಿಡೀ ತೆರೆದಿದೆ.
72 ಕೆಲಸದ ಗಂಟೆಗಳೊಳಗೆ ಸದಸ್ಯತ್ವ ಮಂಜೂರು (ವಿಳಂಬ ಸಾಧ್ಯ).
OTP ಇಮೇಲ್‌ನಲ್ಲಿ ಬರದಿದ್ದರೆ Spam ಫೋಲ್ಡರ್ ಪರಿಶೀಲಿಸಿ.
ಈಗಾಗಲೇ Fazaa ಬಳಸಿದ ಇಮೇಲ್ ಇದ್ದರೆ ಬೇರೆ ಇಮೇಲ್ ಬಳಸಿ.
ಅನುಮೋದನೆ ಬಳಿಕ ಇಮೇಲ್ ಮೂಲಕ ದೃಢೀಕರಣ ಹಾಗೂ ಅಪ್ಲಿಕೇಶನ್ ಸಕ್ರಿಯಗೊಳಿಸುವ ಸೂಚನೆಗಳು ಸಿಗುತ್ತವೆ. ಪ್ರತಿಯೊಬ್ಬ ಕನ್ನಡಿಗರು ಇದರ ಸದುಪಯೋಗ ಪಡೆಯೋದು ತುಂಬಾ ಉತ್ತಮ.





