ಯುಎಇಯಲ್ಲಿ ಕೆಲಸ ಮಾಡುವ ಬಹುತೇಕ ಉದ್ಯೋಗಿಗಳಿಗೆ ಗ್ರ್ಯಾಚ್ಯುಟಿ ಎಂದರೆ ಕೇವಲ ಹಣವಲ್ಲ, ಅದು ವರ್ಷಗಳ ಪರಿಶ್ರಮದ ಫಲ, ಭವಿಷ್ಯದ ಭದ್ರತೆ, ಮತ್ತು ಮನೆಗೆ ಹಿಂತಿರುಗುವಾಗ ಕೈಯಲ್ಲಿ ಹಿಡಿಯುವ ದೊಡ್ಡ ಆಶಾಕಿರಣ. ವರ್ಷಗಳ ಕಾಲ ದುಡಿದು, ಕೊನೆಗೆ ಕೆಲಸ ಬಿಟ್ಟಾಗ ಮೊದಲ ಪ್ರಶ್ನೆ ಇದೇ: “ನನಗೆ ಎಷ್ಟು ಗ್ರ್ಯಾಚ್ಯುಟಿ ಸಿಗುತ್ತದೆ?” ಈ ಹಣವನ್ನು ಹಲವರು ತಮ್ಮ ಮಕ್ಕಳ ಶಿಕ್ಷಣಕ್ಕೆ, ಮದುವೆ ಖರ್ಚಿಗೆ, ಮನೆ ಕಟ್ಟಲು, ಹೊಸ ಜೀವನ ಆರಂಭಿಸಲು, ನಿವೃತ್ತಿ ಜೀವನಕ್ಕೆ ಬಳಸುತ್ತಾರೆ. ಆದ್ದರಿಂದ ಗ್ರ್ಯಾಚ್ಯುಟಿ ಯುಎಇ ಉದ್ಯೋಗಿಗಳ ಜೀವನದಲ್ಲಿ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಬಹಳ ಮಹತ್ವದ್ದಾಗಿದೆ.
ಗ್ರ್ಯಾಚ್ಯುಟಿ ಹೇಗೆ ಲೆಕ್ಕ ಹಾಕುತ್ತಾರೆ?
ಗ್ರ್ಯಾಚ್ಯುಟಿ ನಿಮ್ಮ ಕೊನೆಯ ಮೂಲ ವೇತನ (Basic Salary) ಆಧಾರಿತವಾಗಿರುತ್ತದೆ. ಗಮನಿಸಿ: Housing, Transport, Food, Education Allowance ಇವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.
ಯುಎಇ Labour Law ಪ್ರಕಾರ
1 ರಿಂದ 5 ವರ್ಷಗಳ ಸೇವೆ
ಪ್ರತಿ ವರ್ಷಕ್ಕೆ 21 ದಿನಗಳ ಮೂಲ ವೇತನ
5 ವರ್ಷಗಳಿಗಿಂತ ಹೆಚ್ಚು ಸೇವೆ
ಮೊದಲ 5 ವರ್ಷಗಳಿಗೆ – 21 ದಿನಗಳ ವೇತನ
ನಂತರದ ವರ್ಷಗಳಿಗೆ – ಪ್ರತಿ ವರ್ಷಕ್ಕೆ 30 ದಿನಗಳ ವೇತನ
ಸರಳ ಫಾರ್ಮುಲಾ (Simple Formula)
Daily Basic Wage = D
Years of Service = Y
Years of Service 5 ವರ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ
Gratuity = 21 × D × Y ಫಾರ್ಮುಲಾ ಬಳಸಲಾಗುತ್ತದೆ.
ಒಂದು ವೇಳೆ Years of Service 5 ವರ್ಷಕ್ಕಿಂತ ಜಾಸ್ತಿಯಾದಾಗ,
Gratuity = (21 × D × 5) + (30 × D × (Y − 5))
ಉದಾಹರಣೆಗೆ,
ಒಬ್ಬ ಉದ್ಯೋಗಿಯ ಮಾಹಿತಿ:
Daily Basic Wage = 100 AED
Years of Service = 7 ವರ್ಷ
ಮೊದಲ 5 ವರ್ಷಗಳು:
21 × 100 × 5 = 10,500 AED
ಮುಂದಿನ 2 ವರ್ಷಗಳು:
30 × 100 × 2 = 6,000 AED
ಒಟ್ಟು ಗ್ರ್ಯಾಚ್ಯುಟಿ = 16,500 AED
ಮುಖ್ಯ ನಿಯಮಗಳು
Employer Termination: Article 120 ಅಡಿಯಲ್ಲಿ gross misconduct ಹೊರತುಪಡಿಸಿ ಉದ್ಯೋಗಿಯನ್ನು ತೆಗೆದುಹಾಕಿದರೆ: 1 ವರ್ಷ ಸೇವೆಯ ನಂತರ ಪೂರ್ಣ ಗ್ರ್ಯಾಚ್ಯುಟಿ ಸಿಗುತ್ತದೆ.
Resignation (2022 ನಂತರದ ನಿಯಮ)
ಉದ್ಯೋಗಿ ರಾಜೀನಾಮೆ ಕೊಟ್ಟರೂ: 1 ವರ್ಷ ಸೇವೆಯ ನಂತರ - Limited / Unlimited contract ಯಾವುದಾದರೂ ಇರಲಿ. ಪೂರ್ಣ ಗ್ರ್ಯಾಚ್ಯುಟಿ ಸಿಗುತ್ತದೆ.
Part-time Employees
ಪೂರ್ಣಕಾಲಿಕ ಉದ್ಯೋಗಿಗಳಂತೆ ಲೆಕ್ಕ ಹಾಕುತ್ತಾರೆ ಆದರೆ pro-rata ಆಧಾರದಲ್ಲಿ.
Maximum Limit
ಗ್ರ್ಯಾಚ್ಯುಟಿ ಮೊತ್ತವು ಎರಡು ವರ್ಷಗಳ ಒಟ್ಟು ವೇತನಕ್ಕಿಂತ ಹೆಚ್ಚು ಆಗಬಾರದು.
ಗ್ರ್ಯಾಚ್ಯುಟಿ ಕೇವಲ ಹಣವಲ್ಲ ಅದು ವಿದೇಶದಲ್ಲಿ ಮಾಡಿದ ಪರಿಶ್ರಮದ ಗೌರವ, ನಮ್ಮ ಕನಸುಗಳಿಗಾಗಿ ಉಳಿಸಿಕೊಂಡಿರುವ ಭದ್ರತೆ.





