ಮಳೆಯ ಪ್ರಭಾವದಿಂದ ವಾಹನಗಳಿಗೆ ಹಾನಿಯಾದರೆ, ದುಬೈ ಪೊಲೀಸ್ ಆಪ್ ಮೂಲಕ ಪ್ರಮಾಣಪತ್ರ ಪಡೆಯಬಹುದು: ಇಲ್ಲಿದೆ ಸರಳ ವಿಧಾನ

  • 23 Mar 2026 01:39:28 PM

ದುಬೈನಲ್ಲಿ ಇತ್ತೀಚಿನ ಹವಾಮಾನ ಪರಿಸ್ಥಿತಿಗಳಿಂದ ನಿಮ್ಮ ವಾಹನಕ್ಕೆ ಹಾನಿಯಾಗಿದ್ದರೆ, ನೀವು ಈಗ Dubai Police app ಮೂಲಕ “To Whom It May Concern” ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬಹುದು.

 

ಈ ಪ್ರಮಾಣಪತ್ರವನ್ನು ಪಡೆಯಲು ಆಪ್‌ನಲ್ಲಿ “Request a Certificate” ಆಯ್ಕೆಮಾಡಿ, ನಂತರ “To Whom It May Concern” ಸೇವೆಯಡಿ “Natural Disasters” ಆಯ್ಕೆ ಮಾಡಿ ಅರ್ಜಿ ಸಲ್ಲಿಸಬೇಕು.

 

ಯಾವುದೇ ಸಹಾಯಕ್ಕಾಗಿ ದುಬೈ ಪೊಲೀಸ್ ಅನ್ನು 901 (non-emergency) ಅಥವಾ 999 (emergency) ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

 

ವಾಹನ ಹಾನಿಗೆ ಸಂಬಂಧಿಸಿದ ಇನ್ಷೂರೆನ್ಸ್ ಕ್ಲೈಮ್ ಹಾಗೂ ಇತರೆ ಅಧಿಕೃತ ಅಗತ್ಯಗಳಿಗೆ ಈ ಸೌಲಭ್ಯ ಸಹಾಯಕವಾಗಲಿದೆ. ಈ ಬಗ್ಗೆ ದುಬೈ ಪೊಲೀಸ್ ನ ಅಧಿಕೃತ ಪೋಸ್ಟ್ ಗಳಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮಳೆ ಎಚ್ಚರಿಕೆ: ನಿಯಮ ಉಲ್ಲಂಘನೆಗೆ Dh2,000 ದಂಡ, 23 ಬ್ಲಾಕ್ ಪಾಯಿಂಟ್ಸ್ – ದುಬೈ ಅಧಿಕಾರಿಗಳ ಕಠಿಣ ಸೂಚನೆ ವಿವರ