ದುಬೈ ಪೊಲೀಸರು ಸಾರ್ವಜನಿಕರಿಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಣ್ಣ ಮಟ್ಟದ ವಾಹನ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ, ಪೊಲೀಸ್ ಪ್ಯಾಟ್ರೋಲ್‌ಗಾಗಿ ಕಾಯಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೆ ಬದಲಾಗಿ, ಸಮೀಪದಲ್ಲಿರುವ ಪೆಟ್ರೋಲ್ ಸ್ಟೇಷನ್ ಗಳಾದ ADNOC, ENOC ಅಥವಾ Emarat ಕೇಂದ್ರಗಳಿಗೆ ಭೇಟಿ ನೀಡಬಹುದು.
ಅಲ್ಲಿ ತರಬೇತಿ ಪಡೆದ ಸಿಬ್ಬಂದಿ “ಸರಳ ಅಪಘಾತ ವರದಿ” (Simple Accident Report) ನೀಡಲು ಸಹಾಯ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಈ ವ್ಯವಸ್ಥೆಯ ಮೂಲಕ ಜನರಿಗೆ ಸಮಯ ಉಳಿಯುವುದರ ಜೊತೆಗೆ ಟ್ರಾಫಿಕ್ ತೊಂದರೆ ಕಡಿಮೆಯಾಗುತ್ತದೆ ಎಂದು ದುಬೈ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಸುರಕ್ಷಿತವಾಗಿ ಚಾಲನೆ ಮಾಡಿ. ನಿಮ್ಮ ಪ್ರಯಾಣ ಸುರಕ್ಷಿತವಾಗಿರಲಿ ಎಂಬುವುದೇ ದುಬೈ ಪೊಲೀಸರ ಧ್ಯೇಯವಾಗಿದೆ.






