ಯುಎಇನಲ್ಲಿ ಇಂಧನ ಬೆಲೆ ಏರಿಕೆ: ಏಪ್ರಿಲ್ 1ರಿಂದ ಹೊಸ ದರ ಜಾರಿ

  • 31 Mar 2026 09:35:10 PM

ಯುಎಇ ಸರ್ಕಾರವು ಏಪ್ರಿಲ್ 1, 2026ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಘೋಷಿಸಿದೆ. ಕಳೆದ ತಿಂಗಳ ಹೋಲಿಕೆಯಲ್ಲಿ ಇಂಧನ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

 

ಹೊಸ ದರಗಳು (ಪ್ರತಿ ಲೀಟರ್):

 

95 ಸ್ಪೆಷಿಯಲ್ ಪೆಟ್ರೋಲ್ – 3.28 ದಿರ್ಹಮ್ (ಹಿಂದೆ 2.48)

98 ಸೂಪರ್ ಪೆಟ್ರೋಲ್ – 3.39 ದಿರ್ಹಮ್ (ಹಿಂದೆ 2.59)

ಇ -ಪ್ಲಸ್ 91 – 3.20 ದಿರ್ಹಮ್ (ಹಿಂದೆ 2.40)

ಡೀಸೆಲ್ – 4.69 ದಿರ್ಹಮ್ (ಹಿಂದೆ 2.72)

 

ಈ ದರ ಏರಿಕೆಯಿಂದ ವಾಹನ ಸವಾರರು ಹಾಗೂ ಸಾರಿಗೆ ಕ್ಷೇತ್ರಕ್ಕೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆ ಇದೆ ಎಂದು ವಾಹನ ಮಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.